fbpx
ಸಮಾಚಾರ

ಮೇ 17: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಮೇ 17, 2023 ಬುಧವಾರ
ವರ್ಷ : 1945, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತ್ರಯೋದಶೀ : May 16 11:36 pm – May 17 10:28 pm; ಚತುರ್ದಶೀ : May 17 10:28 pm – May 18 09:43 pm
ನಕ್ಷತ್ರ : ರೇವತಿ: May 16 08:15 am – May 17 07:39 am; ಅಶ್ವಿನಿ: May 17 07:39 am – May 18 07:22 am
ಯೋಗ : ಆಯುಷ್ಮಾನ್: May 16 11:15 pm – May 17 09:17 pm; ಸೌಭಾಗ್ಯ: May 17 09:17 pm – May 18 07:37 pm
ಕರಣ : ಗರಿಜ: May 16 11:36 pm – May 17 11:00 am; ವಾಣಿಜ: May 17 11:00 am – May 17 10:28 pm; ವಿಷ್ಟಿ: May 17 10:28 pm – May 18 10:03 am

Time to be Avoided
ರಾಹುಕಾಲ : 12:16 PM to 1:50 PM
ಯಮಗಂಡ : 7:32 AM to 9:06 AM
ದುರ್ಮುಹುರ್ತ : 11:50 AM to 12:41 PM
ವಿಷ : 03:25 AM to 05:00 AM
ಗುಳಿಕ : 10:41 AM to 12:16 PM

Good Time to be Used
ಅಮೃತಕಾಲ : 12:15 AM to 01:50 AM

Other Data
ಸೂರ್ಯೋದಯ : 5:57 AM
ಸುರ್ಯಾಸ್ತಮಯ : 6:34 PM

 

 

 
 
 

ಮೇಷ (Mesha)

 

ಗ್ರಹಗತಿಗಳ ಉತ್ತಮ ಸಂಚಾರದಿಂದ ಇಂದು ನೀವು ಹೆಚ್ಚು ಆತ್ಮವಿಶ್ವಾಸದಿಂದ ಇರುವಿರಿ. ಇದು ನಿಮಗೆ ವಿಶೇಷ ಗೌರವವನ್ನು ತಂದುಕೊಡುವುದು. ಕೆಲವೊಂದು ಸ್ನೇಹಿತರ ಮಾತು ನಿಮ್ಮನ್ನು ಕೆರಳಿಸಬಹುದು. ಆದರೆ ತಾಳ್ಮೆಯಿರಲಿ.

ವೃಷಭ (Vrushabh)


ಹಿರಿಯರ ಆಶಯಕ್ಕೆ ತಕ್ಕಂತೆ ನೀವು ನಿಮ್ಮ ಕಾರ್ಯವನ್ನು ಪೂರೈಸುವಲ್ಲಿ ವಿಫಲರಾಗುವುದರಿಂದ ನಿಮ್ಮ ವಿಶ್ವಾಸಕ್ಕೆ ಕುತ್ತು ಬರಲಿದೆ. ಹಾಗಾಗಿ ನೀವು ಮಾತುಕೊಟ್ಟ ಪ್ರಕಾರ ಈದಿನ ನಡೆದುಕೊಳ್ಳುವುದು ಒಳ್ಳೆಯದು,

ಮಿಥುನ (Mithuna)


ವತ್ತಿ ಜೀವನದಲ್ಲಿ ಮತ್ತಷ್ಠು ಬೆಳೆಯಲು ಒಳ್ಳೆಯ ಅವಕಾಶಗಳು ಕೂಡಿಬರಲಿದ್ದು ನಿಮ್ಮ ಸಾಮರ್ಥ್ಯವು ಪರೀಕ್ಷೆಗೆ ಒಳಪಡುವುದು. ಆದರೆ ಅದರಲ್ಲಿಯೂ ತೇರ್ಗಡೆ ಆಗುವಿರಿ. ಹಣಕಾಸಿನ ಸ್ಥಿತಿ ಉತ್ತಮ, ಸಕಲ ಕಷ್ಟಗಳಿಗೂ ಪರಿಹಾರವನ್ನು ಕಂಡುಕೊಳ್ಳುವಿರಿ. ಮನಸ್ಸಿಗೂ ನಿರಾಳ ಆಗುವುದು.

ಕರ್ಕ (Karka)


ಕೆಲವು ಕಾರಣಗಳಿಂದ ಈದಿನ ನಿಮ್ಮ ಆತ್ಮವಿಶ್ವಾಸ ಕುಂದಲಿದೆ. ಶೀಘ್ರ ಕೋಪಗೊಳ್ಳುವಿರಿ. ಬರುವ ಟೀಕೆಗಳನ್ನು ಸಕಾರಣವಾಗಿ ಚಿಂತಿಸಿ, ತಾಳ್ಮೆಯಿಂದ ಇರಿ, ಸ್ನೇಹಿತರೊಂದಿಗೆ ಅತ್ಯುತ್ತಮವಾದ ಸಮಯವನ್ನು ಕಳೆಯುವಿರಿ. ಪ್ರಯಾಣದಲ್ಲಿ ಲಕ್ಷ್ಮೀನಾರಸಿಂಹ ದೇವರನ್ನು ಪ್ರಾರ್ಥಿಸಿರಿ.

ಸಿಂಹ (Simha)


ಹಣಕಾಸು ವಿಷಯದಲ್ಲಿ ಜಾಗ್ರತೆಯಿಂದಿರಿ. ಆದರೆ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಮನೆಯ ಸದಸ್ಯರ ಮಾತಿನಿಂದ ಉದ್ವೇಗಕ್ಕೆ ಒಳಗಾಗುವಿರಿ. ಆದಷ್ಠು ಇಂದು ತಾಳ್ಮೆಯಿಂದ ಇರಿ.

ಕನ್ಯಾರಾಶಿ (Kanya)


ಕೆಲಸ ಕಾರ್ಯಗಳಲ್ಲಿ ಅತಿಯಾದ ವಿಚಾರಣೆ ಮತ್ತು ಕಟ್ಟುನಿಟ್ಟಿನ ನಿಯಮದಿಂದಾಗಿ ಕೆಲಸಗಾರರು ಅಸಹಕಾರ ತೋರುವರು. ಆದಷ್ಠು ನಿಮ್ಮ ಕೈಕೆಳಗೆ ಕೆಲಸ ಮಾಡುವ ವ್ಯಕ್ತಿಗಳ ಮನಸ್ಸನ್ನು ಗೆಲ್ಲುವುದು ಇಂದಿನ ತುರ್ತು ಕೆಲಸವಾಗಿರುತ್ತದೆ. ಮನಸ್ಸಿಗೆ ಖುಷಿಕೊಡುವ ಕೆಲಸಗಳಲ್ಲಿ ತೊಡಗಿಕೊಳ್ಳುವಿರಿ.

ತುಲಾ (Tula)


ಕೆಲವರು ಬೇಕಂತಲೇ ನಿಮ್ಮನ್ನು ಉದ್ರೇಕಿಸುವರು. ಅಂತಹ ಹುನ್ನಾರಗಳ ಬಗ್ಗೆ ಎಚ್ಚರ ಇರಲಿ. ಕಠೋರವಾಗಿ ಮಾತನಾಡುವ ಸಂದರ್ಭ ಬಂದರೆ ಹೆದರಬೇಡಿ. ಕಟುಮಾತುಗಳ ಮೂಲಕವೇ ಕೆಲವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡುವಿರಿ.

ವೃಶ್ಚಿಕ (Vrushchika)


ಜೀವನ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದೆ ಎಂದು ನಿರ್ಲಿಪ್ತರಾಗಬೇಡಿ. ಇದೇ ಅಂತಿಮವಲ್ಲ. ಇನ್ನಷ್ಠು ಯೋಜಿತ ರೀತಿಯಲ್ಲಿ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ಸ್ನೇಹಿತರೊಂದಿಗೆ ಬೆರೆಯಿರಿ. ಮತ್ತು ಹೊಸ ವಿಷಯವನ್ನು ಅರಿಯಿರಿ.

ಧನು ರಾಶಿ (Dhanu)


ಸಂಕಷ್ಟ ಸಂದರ್ಭವನ್ನು ಬಹುಜಾಣ್ಮೆಯಿಂದ ನಿಭಾಯಿಸುವಿರಿ. ವತ್ತಿಯಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿರುವುದರಿಂದ ಅದನ್ನು ಸ್ವೀಕರಿಸಲು ಮನಸ್ಸು ಅಧೈರ‌್ಯ ಪಡುತ್ತಿರುವುದು. ಆದರೆ ಅದರಿಂದ ಒಳಿತಾಗುವುದು. ಬದಲಾವಣೆಯನ್ನು ಒಪ್ಪಿಕೊಳ್ಳಿರಿ.

ಮಕರ (Makara)


ಮನೆ ಮತ್ತು ಕಚೇರಿ ಎರಡೂ ಕಡೆ ನಡೆಯುವ ಕೆಲ ಬೆಳವಣೆಗೆಗಳು ನಿಮ್ಮನ್ನು ಹೈರಾಣಾಗಿಸಬಹುದು. ಆರೋಗ್ಯದ ಬಗ್ಗೆ ಕೊಂಚ ನಿಗಾ ಇರಲಿ. ವಿಶೇಷವಾಗಿ ಆಹಾರದ ವಿಚಾರದಲ್ಲಿ ಎಚ್ಚರಿಕೆ ಇರಲಿ, ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿರಿ. ಮನೆಗೆ ಧನಲಕ್ಷ್ಮೀಯ ಆಗಮನವಾಗುವ ಸಾಧ್ಯತೆ.

ಕುಂಭರಾಶಿ (Kumbha)


ನಿಮ್ಮ ಮೂಗಿನ ನೇರಕ್ಕೆ ತೀರ್ಮಾನ ಕೈಗೊಳ್ಳುವುದನ್ನು ಬಿಟ್ಟಲ್ಲಿ ಒಳಿತಾಗುವುದು. ಇಲ್ಲದೆ ಇದ್ದಲ್ಲಿ ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಹೆಚ್ಚಾಗಿ ನಿಮ್ಮ ಸ್ನೇಹ ಸೇತುವೆಗೆ ಭಂಗ ಉಂಟಾಗುವುದು. ಆರ್ಥಿಕ ಸ್ಥಿತಿ ಅಷ್ಠೇನೂ ಆಶಾದಾಯಕವಾಗಿರುವುದಿಲ್ಲ.

ಮೀನರಾಶಿ (Meena)


ವ್ಯಾಪಾರ-ವ್ಯವಹಾರ, ಲೇವಾದೇವಿಯಲ್ಲಿ ನಷ್ಠ ಉಂಟಾಗುವ ಸಂಭವ. ಆರ್ಥಿಕ ಮುಗ್ಗಟ್ಟು ಉಂಟಾಗುವ ಸಂದರ್ಭ. ನೂತನ ಕಾರ್ಯಭಾರವನ್ನು ಹಮ್ಮಿಕೊಳ್ಳದಿರಿ. ಮತ್ತು ಸ್ನೇಹಿತರ ನಡುವಿನ ಹಣಕಾಸು ವಿಷಯದಲ್ಲಿ ತಲೆಹಾಕದಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top