ಮೇ 19, 2023 ಶುಕ್ರವಾರ
ವರ್ಷ : 1945, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಅಮಾವಾಸ್ಯೆ : May 18 09:43 pm – May 19 09:23 pm; Sukla Paksha ಪ್ರತಿಪತ್ : May 19 09:23 pm – May 20 09:31 pm
ನಕ್ಷತ್ರ : ಭರಣಿ: May 18 07:22 am – May 19 07:29 am; ಕೃತಿಕೆ: May 19 07:29 am – May 20 08:02 am
ಯೋಗ : ಶೋಭನ: May 18 07:37 pm – May 19 06:16 pm; ಅತಿಗಂಡ: May 19 06:16 pm – May 20 05:18 pm
ಕರಣ : ಚತುಷ್ಪಾದa: May 18 09:43 pm – May 19 09:29 am; ನಾಗ: May 19 09:29 am – May 19 09:23 pm; ಕಿಮ್ಸ್ತುಗ್ನ: May 19 09:23 pm – May 20 09:23 am
Time to be Avoided
ರಾಹುಕಾಲ : 10:41 AM to 12:16 PM
ಯಮಗಂಡ : 3:25 PM to 5:00 PM
ದುರ್ಮುಹುರ್ತ : 08:28 AM to 09:19 AM, 12:41 PM to 01:31 PM
ವಿಷ : 07:46 PM to 09:24 PM
ಗುಳಿಕ : 7:31 AM to 9:06 AM
Good Time to be Used
ಅಮೃತಕಾಲ : None
ಅಭಿಜಿತ್ : 11:50 AM to 12:41 PM
Other Data
ಸೂರ್ಯೋದಯ : 5:57 AM
ಸುರ್ಯಾಸ್ತಮಯ : 6:34 PM
ಮೇಷ (Mesha)
ಒಳ್ಳೆಯ ಹೆಸರು ಪಡೆಯುತ್ತೀರಿ. ಪ್ರಯಾಣ ಹಿತಕರವಾಗಿರುತ್ತದೆ. ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಹತ್ತು ಹಲವು ಬಾರಿ ಚಿಂತಿಸಿರಿ. ಆರ್ಥಿಕ ಸದೃಢತೆಯು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.
ವೃಷಭ (Vrushabh)
ಶುಭವಾರ್ತೆ ನಿರೀಕ್ಷಿಸಬಹುದು. ಆರೋಗ್ಯ ಉತ್ತಮ. ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು ಮನೆಗೆ ಅಲಂಕಾರ ವಸ್ತುಗಳ ಖರೀದಿ ಮಾಡುವಿರಿ.
ಮಿಥುನ (Mithuna)
ಆರಂಭಿಸಿದ ಕೆಲಸ ಕಾರ್ಯಗಳಿಗೆ ಸ್ನೇಹಿತರ ಬೆಂಬಲ ದೊರೆಯುವುದು. ಅಂತೆಯೇ ಅಧಿಕ ಖರ್ಚಿಗೆ ದಾರಿಯಾಗುವುದು. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳಿರಿ. ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.
ಕರ್ಕ (Karka)
ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಮಾತೃ ಸಂಬಂಧದವರಿಂದ ದುಃಖ ಮನೋವ್ಯಾಕುಲತೆಯ ಚಿಂತೆ. ಜಿಗುಪ್ಸೆ ಕಾಡುವುದು. ವೃಥಾ ಅಲೆದಾಟದಿಂದ ಹಣವು ನೀರಿನಂತೆ ಖರ್ಚು ಮಾಡುವಿರಿ.
ಸಿಂಹ (Simha)
ಜೀವನದಲ್ಲಿ ಹೊಸ ಘಟ್ಟ ತಲುಪುವಿರಿ. ಬಡ್ತಿ ಬಯಸುವವರಿಗೆ ಸಿಹಿ ಸುದ್ದಿ ದೊರೆಯಲಿದೆ. ಗುರು-ಹಿರಿಯರನ್ನು ಗೌರವಿಸಿರಿ. ಅವರ ಹಿತವಚನವನ್ನು ತಪ್ಪದೆ ಪಾಲಿಸಿರಿ. ಇಂದಿನ ಎಲ್ಲಾ ಕೆಲಸಗಳು ಸುಗಮವಾಗಿ ಆಗುವುದು.
ಕನ್ಯಾರಾಶಿ (Kanya)
ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಕೇಳುವುದರಿಂದ ಮಹತ್ತರ ವಿಷಯವನ್ನು ಅರಿಯುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು.
ತುಲಾ (Tula)
ಸದಾ ಚಟುವಟಿಕೆಯಿಂದ ಇರಿ. ನಿಮಗಿರುವ ಖಾಯಿಲೆಗಳ ಬಗ್ಗೆ ಬಹಿರಂಗ ಪಡಿಸಬೇಡಿ. ಕೆಲವರು ನಿಮ್ಮನ್ನು ಹಾದಿ ತಪ್ಪಿಸುವ ಸೂಚನೆಗಳನ್ನು ನೀಡುವರು. ಆದರೆ ಅದಕ್ಕೆ ಕಿವಿಗೊಡದೆ ಮನೆ ವೈದ್ಯರ ಸಲಹೆಯನ್ನು ಪರಿಪಾಲಿಸಿರಿ.
ವೃಶ್ಚಿಕ (Vrushchika)
ಯಾವಾಗಲೂ ಎಲ್ಲರೊಂದಿಗೆ ಬೆರೆಯುವ ಸಹವಾಸ ಪ್ರಿಯರು ಮತ್ತು ನಿಮ್ಮ ಮಾತಿನ ಮೋಡಿಯಿಂದ ಜನರನ್ನು ಬಹಳ ಬೇಗ ನಿಮ್ಮತ್ತ ಸೆಳೆದುಕೊಳ್ಳುವಿರಿ. ನೀವು ವಿವಿಧ ಬಗೆಯ ಜನರ ಸಂಪರ್ಕದಿಂದ ಸಂತೋಷ ಪಡುವಿರಿ. ಹಿತೈಷಿಗಳಿಂದ ಮನಸ್ಸಿಗೆ ನೆಮ್ಮದಿ ಉಂಟಾಗುವುದು.
ಧನು ರಾಶಿ (Dhanu)
ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಶಕ್ತಿಯಿಂದ ಬಹಳ ಉಪಯೋಗ ಪಡೆಯುವಿರಿ. ಜನರ ದೃಷ್ಟಿಯಲ್ಲಿ ಒಳ್ಳೆಯ ವ್ಯಕ್ತಿಯಾಗಿ ಕಾಣುವಿರಿ. ಸಾಮಾಜಿಕವಾಗಿಯೂ ನಿಮ್ಮ ಕೀರ್ತಿ ಬೆಳಗುವುದು.
ಮಕರ (Makara)
ನಿಮ್ಮ ಕೆಲಸ ಕಾರ್ಯಗಳಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳುವಿರಿ. ನೀವು ಕೊಳ್ಳಲು ಬಯಸಿದ ವಸ್ತುಗಳನ್ನು ಪಡೆಯಲು ಅನೇಕ ಅಡೆತಡೆಗಳು ಎದುರಾಗುವುದು. ಕಾಗದ ಪತ್ರಗಳನ್ನು ಸರಿಯಾಗಿ ಪರಿಶೀಲಿಸದೆ ಮೋಸ ಹೋಗುವ ಸಾಧ್ಯತೆ. ಈ ಬಗ್ಗೆ ಎಚ್ಚರ ಅಗತ್ಯ.
ಕುಂಭರಾಶಿ (Kumbha)
ಮಹತ್ವದ ಯೋಜನೆಯೊಂದನ್ನು ಪೂರ್ಣಗೊಳಿಸಲು ಒಳ್ಳೆಯ ತಿಳಿವಳಿಕೆವುಳ್ಳ ಸ್ನೇಹಿತನನ್ನು ಆಯ್ಕೆ ಮಾಡಿಕೊಳ್ಳುವಿರಿ. ಕೆಲವರು ನಿಮ್ಮ ಕೆಲಸ ಕಾರ್ಯಗಳಲ್ಲಿ ಅನವಶ್ಯಕ ಮೂಗು ತೂರಿಸಿಕೊಂಡು ಬರುವರು. ಅವರ ಬಗ್ಗೆ ಹೆಚ್ಚಿನ ಗಮನ ಕೊಡದೆ ಇರುವುದು ಒಳ್ಳೆಯದು.
ಮೀನರಾಶಿ (Meena)
ಬಾಲಿಶ ಮಾತುಗಳಿಂದ ಸಮಾಜದಲ್ಲಿ ಟೀಕೆಗೆ ಒಳಗಾಗುವಿರಿ. ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಕಾಡುವುದು. ಪೂರ್ವಪುಣ್ಯದ ಬಲದಿಂದ ಸ್ನೇಹಿತರು ನಿಮಗೆ ಸಹಾಯ ನೀಡುವರು. ದೂರದ ಪ್ರವಾಸವನ್ನು ಮುಂದೂಡುವುದು ಒಳ್ಳೆಯದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
