ಇತ್ತೀಚಿಗೆ RBI ʼಕ್ಲೀನ್ ನೋಟ್ʼ ನೀತಿಯ ಅಡಿಯಲ್ಲಿ 2000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಾಗುತ್ತದೆ ಎಂದು ತಿಳಿಸಿತು. ಅಕ್ಟೋಬರ್ 1ರಿಂದ ಸಂಪೂರ್ಣವಾಗಿ ಸ್ಥಗಿತ ಮಾಡುವುದಾಗಿ ಆರ್‌ಬಿಐ ಪ್ರಕಟಿಸಿದೆ. ಆದರೆ ಕಳೆದ ಬಾರಿ ನೋಟ್ ಬ್ಯಾನ್ ಮಾಡಿದಾಗ ಜನರ ಮನಸಲ್ಲಿ ಹಲವಾರು ಪ್ರಶ್ನೆಗಳು ಇದ್ದವು. ಇದೀಗ ಜನರ ಮನಸಲ್ಲಿ ಹಲವಾರು ಪ್ರಶ್ನೆಗಳಿವೆ. ಇವೆಲ್ಲ ಪ್ರಶ್ನೆಗಳಿಗೆ ಉತ್ತರ ನಾವು ನೀಡುತ್ತೇವೆ.
2000 ರೂ.ಗೆ ಕಾನೂನು ಮಾನ್ಯತೆ ಇದೆಯೇ?
ಹೌದು, ಸೆಪ್ಟೆಂಬರ್ 30ರವರೆಗೂ ಈ ನೋಟುಗಳು ಕಾನೂನು ಮಾನ್ಯತೆ ಹೊಂದಿರಲಿವೆ. ಇದಾದ ಬಳಿಯ ಇದು ಅಮಾನತ್ತಾಗುತ್ತದೆ.
ಈಗಲೂ ಚಲಾವಣೆಯಲ್ಲಿದೆಯಾ?
2000 ನೋಟುಗಳಿಗೆ ಸಂಪೂರ್ಣ ನಿಷೇಧ ಹೇರಿಲ್ಲ. ಹೀಗಾಗಿ ಇದನ್ನು ಪಾವತಿ ಮಾಡಲು, ಸ್ವೀಕರಿಸಲು ಬಳಕೆ ಮಾಡಬಹುದು.
ಒಂದು ದಿನದಲ್ಲಿ ಎಷ್ಟು ರೂಪಾಯಿ ಬದಲಾಯಿಸಬಹುದು?
ದಿನದಲ್ಲಿ ಕೇವಲ 20 ಸಾವಿರ ಮಾತ್ರ ಬ್ಯಾಂಕಿನಲ್ಲಿ ಬದಲಾಯಿಸಬಹುದು
ಅಕೌಂಟ್ ಇಲ್ಲದೇ ಇದ್ದರೂ ಬದಲಿಸಬಹುದೇ?
ಹೌದು, ಅಕೌಂಟ್ ಇಲ್ಲದೆ ಇದ್ದರು ಸಹ ಯಾವುದೇ ಬ್ಯಾಂಕಿನಲ್ಲಿ ಹೋಗಿ ಹಣ ಬದಲಾಯಿಸಬಹುದು. ಆರ್‌ಬಿಐ 19 ಪ್ರಾದೇಶಿಕ ಕಚೇರಿಗಳಲ್ಲಿ ನೋಟ್ ಬದಲಾವಣೆಗೆ ಅವಕಾಶವಿದೆ.
20 ಸಾವಿರಕ್ಕಿಂತಲೂ ಜಾಸ್ತಿ ಹಣ ಇದ್ದರೆ ಏನು?
ಚಿಂತಿಸಬೇಕಾಗಿಲ್ಲ. ನಿಮ್ಮ ಬಳಿ ಇರುವ ಸಂಪೂರ್ಣ 2000 ಹಣವನ್ನು ನಿಮ್ಮ ಖಾತೆಗೆ ಠೇವಣಿ ಮಾಡಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ. ಆದರೆ ನೀವು ಕೆವೈಸಿ ಮತ್ತು ಇತರೇ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಬದಲಾಯಿಸಲು ಇರುವ ಕಾಲಾವಕಾಶ?
ಮೇ 23 ರಿಂದ ಸೆ. 30ರವರೆಗೆ ಕಾಲಾವಕಾಶವಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
