IPL ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ತಂಡ ಎಂದರು ಅದು RCB. RCB ತಂಡದಲ್ಲಿ ಹಲವಾರು ಸ್ಟಾರ್ ಆಟಗಾರರಿದ್ದರು ಸಹ ಕಳೆದ 16 ವರ್ಷಗಳಿಂದ ಕಪ್ ಗೆದ್ದಿಲ್ಲ ಎಂಬ ಬೇಸರ ಅಭಿಮಾನಿಗಳ ಮನಸಲ್ಲಿ ಇದೆ. ಇದೀಗ ಮುಂದಿನ ವರ್ಷದ IPL ಗಾಗಿ RCB ಕೆಲವು ಆಟಗಾರನನ್ನು ತಂಡದಿಂದ ಹೊರಗಾಕುವ ಪ್ಲಾನ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಈ ವರ್ಷದ IPL ನಲ್ಲಿ RCB ಪರ ಕೇವಲ 4 ಆಟಗಾರರು ಮಾತ್ರ ಆಡಿದರು ಎಂದು ಹೇಳಿದರೆ ತಪ್ಪಾಗಲಾರದು. ನಾಯಕ ಡುಪ್ಲೆಸ್ಸಿ, ವಿರಾಟ್ ಕೊಹ್ಲಿ, ಮ್ಯಾಕ್ಸ್ವೆಲ್ ಮತ್ತು ಸಿರಾಜ್ ಅವರನ್ನು ಹೊರೆತುಪಡಿಸಿದರೆ ಬೇರೆ ಯಾವ ಆಟಗಾರ ಕೂಡ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲಿಲ್ಲ. ಇನ್ನು ಕಳೆದ ಬಾರಿ ಮ್ಯಾಚ್ ಫಿನಿಶರ್ ಆಗಿ ಹೊರಹೊಮ್ಮಿದ ದಿನೇಶ್ ಕಾರ್ತಿಕ್ ಈ ಬಾರಿ ತಮ್ಮ ಬ್ಯಾಟ್ ಮೂಲಕ ಯಾವುದೇ ಸೌಂಡ್ ಮಾಡಲಿಲ್ಲ. ಬದಲಾಗಿ 3 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಹೀಗಾಗಿ RCB ಮ್ಯಾನೇಜ್ಮೆಂಟ್ ಈ ಬಾರಿ ಯಾವ ಆಟಗಾರನನ್ನು ತಂಡದಿಂದ ಹೊರಗೆ ಕಳುಹಿಸಬೇಕೆಂದು ಚಿಂತಿಸುತ್ತಿದೆ.
ದಿನೇಶ್ ಕಾರ್ತಿಕ್, ಶೆಹಬಾಜ್ ಅಹಮದ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಆಕಾಶ್ ದೀಪ್ ಅವರಂತಹ ಆಟಗಾರರನ್ನು ಆರ್‌ಸಿಬಿ ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ಆದರೆ, ಮುಂದಿನ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಈ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಆರ್‌ಸಿಬಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜತೆಗೆ ಬೌಲಿಂಗ್ ವಿಭಾಗವನ್ನು ತಂಡ ಬಲಿಷ್ಠಗೊಳಿಸಬೇಕಿದೆ. ಫಾಫ್ ಡುಪ್ಲೆಸಿಸ್, ಮ್ಯಾಕ್ಸಿ, ಕೊಹ್ಲಿ ಮತ್ತು ಸಿರಾಜ್ ಹೊರತುಪಡಿಸಿ ಉಳಿದ ಆಟಗಾರರು ಹರಾಜಿನಲ್ಲಿ ಉಳಿಯುವ ಸಾಧ್ಯತೆಯಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
