fbpx
ಸಮಾಚಾರ

ಜೂನ್ 02: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜೂನ್ 2, 2023 ಶುಕ್ರವಾರ
ವರ್ಷ : 1945, ಶೋಭಾಕೃತ
ತಿಂಗಳು : ಜ್ಯೇಷ್ಠ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ತ್ರಯೋದಶೀ : Jun 01 01:39 pm – Jun 02 12:48 pm; ಚತುರ್ದಶೀ : Jun 02 12:48 pm – Jun 03 11:17 am
ನಕ್ಷತ್ರ : ಸ್ವಾತಿ: Jun 01 06:48 am – Jun 02 06:53 am; ವಿಶಾಖೆ: Jun 02 06:53 am – Jun 03 06:16 am
ಯೋಗ : ಪರಿಘ: Jun 01 06:59 pm – Jun 02 05:09 pm; ಶಿವ: Jun 02 05:09 pm – Jun 03 02:47 pm
ಕರಣ : ತೈತುಲ: Jun 02 01:19 am – Jun 02 12:48 pm; ಗರಿಜ: Jun 02 12:48 pm – Jun 03 12:07 am; ವಾಣಿಜ: Jun 03 12:07 am – Jun 03 11:17 am

Time to be Avoided
ರಾಹುಕಾಲ : 10:42 AM to 12:17 PM
ಯಮಗಂಡ : 3:28 PM to 5:03 PM
ದುರ್ಮುಹುರ್ತ : 08:28 AM to 09:19 AM, 12:42 PM to 01:33 PM
ವಿಷ : 12:20 PM to 01:54 PM
ಗುಳಿಕ : 7:31 AM to 9:06 AM

Good Time to be Used
ಅಮೃತಕಾಲ : 09:41 PM to 11:15 PM
ಅಭಿಜಿತ್ : 11:52 AM to 12:42 PM

Other Data
ಸೂರ್ಯೋದಯ : 5:56 AM
ಸುರ್ಯಾಸ್ತಮಯ : 6:38 PM

 

 

 

ಮೇಷ (Mesha)

ಹಿರಿಯರಿಗೆ ಕಫ‌, ಜ್ವರದಿಂದ ಆರೋಗ್ಯ ಕೆಡಲಿದೆ. ಸರಕಾರೀ ಅಧಿಕಾರಿಗಳಿಗೆ ತೆರಿಗೆ ವಂಚನೆಯ ಅಪವಾದ ಬಂದೀತು. ಮಹಿಳಾ ಅಧಿಕಾರಿಗಳಿಗೆ ಸ್ಥಾನ ಪಲ್ಲಟ ಯೋಗ ಬರಬಹುದು. ದಿನಾಂತ್ಯ ಶುಭ.

ವೃಷಭ (Vrushabh)


ಯಾಂತ್ರಿಕ ಕೆಲಸ ಕಾರ್ಯಗಳಿಗೆ ಖರ್ಚು ಬಂದೀತು. ಜೀನಸು, ಎಣ್ಣೆ ಪದಾರ್ಥ, ತಿಂಡಿ ತೀರ್ಥಗಳ ವ್ಯಾಪಾರಿಗಳಿಗೆ ತಕ್ಕಮಟ್ಟಿನ ಲಾಭವಿದೆ. ಮಕ್ಕಳಿಗೆ ಅಭ್ಯಾಸದಲ್ಲಿ ಉದಾಸೀನತೆ ಕಂಡುಬರಲಿದೆ.

ಮಿಥುನ (Mithuna)


ಮನೆಯಲ್ಲಿ ಮದುವೆ ಪ್ರಸ್ತಾಪ ಗರಿಕೆದರೀತು. ಮನೆಯಲ್ಲಿ ಗೃಹಿಣಿಯ ಆಕಾಂಕ್ಷೆಯೊಂದಿಗೆ ಸುಖಸಂತಾನ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ತೊಡಕುಗಳು ಕಂಡು ಬರುವುವು.

ಕರ್ಕ (Karka)


ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನ ಬಲದ ಉತ್ತಮ ಫ‌ಲಿತಾಂಶ ಸದ್ಯದಲ್ಲೇ ಕಂಡು ಬಂದೀತು. ಸಾಂಸಾರಿಕವಾಗಿ ಮಡದಿಯ ಕಿರಿಕಿರಿ ಹೆಚ್ಚಿ ಅಸಮಾಧಾನ ತರಲಿದೆ. ಹಳೇ ಬಾಕಿ ಮರುಪಾವತಿಯಾದೀತು.

ಸಿಂಹ (Simha)


ಮದುವೆಯ ಮಾತುಕತೆ ಮುಂದು ವರಿಯಲಿದೆ. ಮನೆಯಲ್ಲಿ ನೆಂಟರಿಷ್ಟರ ಸಮಾಗಮ ಸಮಾಧಾನ ತರಲಿದೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಕಾರ್ಯಕ್ಷೇತ್ರದಲ್ಲಿ ಮುನ್ನಡೆ ಇದೆ.

ಕನ್ಯಾರಾಶಿ (Kanya)


ಮಾತಿನ ಬಗ್ಗೆ ಹೆಚ್ಚಿನ ಕಡಿವಾಣ ವಿರಲಿ. ಕಾರ್ಯಕ್ಷೇತ್ರದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಮಾತಿಗೆ ಬೆಲೆ ಬಂದೀತು. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ಸಿಗಲಿದೆ. ನಾನಾ ರೀತಿಯಲ್ಲಿ ಧನಾಗಮನವಿದೆ‌.

ತುಲಾ (Tula)


ಧನಾಗಮನ ಉತ್ತಮವಿದ್ದರೂ ಧನಸಂಗ್ರಹಕ್ಕೆ ಕಡ್ಡಾಯವಾಗಿ ಮನಸ್ಸು ಮಾಡಿರಿ. ಶಿಕ್ಷಕ ವರ್ಗಕ್ಕೆ ಸಾಮಾಜಿಕ ಕಾರ್ಯಕರ್ತರಿಗೆ, ಕಲಾವಿದರಿಗೆ ಗೌರವ, ಸ್ಥಾನಮಾನ ಸಿಗಲಿದೆ. ವಯಸ್ಕರಿಗೆ ಶುಭ ವಾರ್ತೆ ಇದೆ.

ವೃಶ್ಚಿಕ (Vrushchika)


ಉದ್ಯೋಗಸ್ಥರಿಗೆ ಉತ್ತಮ ಉದ್ಯೋಗದ ಭರವಸೆ. ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆ ತೋರಿ ಬಂದರೂ ಜಾಗ್ರತೆ ಇರಲಿ. ಶ್ರೀ ದೇವರ ಅನುಗ್ರಹ ನಿಮಗೆ ಎಲ್ಲಾ ರೀತಿಯಲ್ಲಿ ಸಾಧಕವಾದೀತು.

ಧನು ರಾಶಿ (Dhanu)


ಆಗಾಗ ಉತ್ತಮ ಅವಕಾಶಗಳು ತೋರಿಬರಲಿವೆ. ವಿದ್ಯಾರ್ಥಿಗಳು, ನಿರುದ್ಯೋಗಿಗಳು ಅವಿವಾಹಿತರು ಸದುಪಯೋಗಿಸಿಕೊಳ್ಳಿರಿ. ಯಾವುದೇ ವಿಚಾರದಲ್ಲಿ ವಾದ-ವಿವಾದಗಳಿಗೆ ಕಾರಣರಾಗದಿರಿ.

ಮಕರ (Makara)


ಯೋಗ್ಯ ವಯಸ್ಕರ ವಿವಾಹ ಪ್ರಸ್ತಾವಗಳು ಕಂಕಣಬಲಕ್ಕೆ ನಾಂದಿ ಹಾಡಲಿವೆ. ಆರ್ಥಿಕವಾಗಿ ಸಮಾಧಾನದ ವಾತಾವರಣ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಬಂದ ಅವಕಾಶವನ್ನು ಸದುಪಯೋಗಿಸಿರಿ.

ಕುಂಭರಾಶಿ (Kumbha)


ಹಿರಿಯರಿಗೆ ತೀರ್ಥಯಾತ್ರಾ ಯೋಗವಿದೆ. ವಾಹನ ಖರೀದಿಗೆ ಇದು ಸಕಾಲ. ನಿಮ್ಮ ಕೆಲಸ ಕಾರ್ಯಗಳು ಶನಿಯ ಲಾಭಸ್ಥಾನದಿಂದ ಹಂತಹಂತವಾಗಿ ನೆರವೇರಲಿವೆ. ದಿನಾಂತ್ಯ ಅತಿಥಿಗಳು ಬಂದಾರು.

ಮೀನರಾಶಿ (Meena)


ನಿಮ್ಮ ಕಾರ್ಯಸಾಧನೆಗೆ ವೃತ್ತಿರಂಗದಲ್ಲಿ ಪ್ರಶಂಸೆ ಸಲ್ಲಲಿದೆ. ವ್ಯಾಪಾರ, ವ್ಯವಹಾರದಲ್ಲಿ ಧನಹಾನಿಯಾಗಳಾದರೂ ನಷ್ಟವಾಗದು.ಯೋಗ್ಯ ವಯಸ್ಕರು ಅನಿರೀಕ್ಷಿತ ರೂಪದಲ್ಲಿ ಕಂಕಣಬಲವನ್ನು ಹೊಂದಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top