ರಷ್ಯಾದ ಕಡಲತೀರದಲ್ಲಿ ಈಜುತ್ತಿದ್ದ ಯುವಕನನ್ನು ಶಾರ್ಕ್ ತಿಂದು ಹಾಕಿದೆ. ಈಜಿಪ್ಟ್‌ನ ಹುರ್ಘದಾ ಬೀಚ್ ರೆಸಾರ್ಟ್‌ನಲ್ಲಿ ನಡೆದ ಘಟನೆಯ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಸಖತ್ತು ವೈರಲ್ ಆಗಿದೆ.
ರಷ್ಯಾದ 23 ವರ್ಷದ ವ್ಲಾದಿಮಿರ್ ಪೊಪೊವ್ ಎಂಬಾತ ತನ್ನ ಕುಟುಂಬದೊಂದಿಗೆ ಈಜಿಪ್ಟ್‌ಗೆ ಭೇಟಿ ನೀಡಿದ್ದನು. ಕೆಂಪು ಸಮುದ್ರದ ಕರಾವಳಿಯ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಅವನು ಗುರುವಾರ ತನ್ನ ಗೆಳತಿಯೊಂದಿಗೆ ಸಮುದ್ರತೀರದಲ್ಲಿ ಈಜುತ್ತಿದ್ದನು.
ಈ ವೇಳೆ ಕಡಲತೀರದಲ್ಲಿ ಹುಲಿ ಶಾರ್ಕ್ ಕಾಣಿಸಿಕೊಂಡಿತು. ಆ ಶಾರ್ಕ್ ವ್ಲಾಡಿಮಿರ್ ಪೊಪೊವ್ ಬಳಿ ಬಂದು ಒಮ್ಮೆಲೇ ದಾಳಿ ಮಾಡಿತು. ಶಾರ್ಕ್ ಯುವಕನ ಮೇಲೆ ದಾಳಿ ಮಾಡಿ ನಂತರ ಅವನನ್ನು ನುಂಗಿ ಹಾಕಿತು. ಆಗ ಅಲ್ಲಿದ್ದ ನೀರೆಲ್ಲ ರಕ್ತದಿಂದ ಕೆಂಪಾಯಿತು. ಆದರೆ ಆ ಯುವಕನ ಗೆಳತಿ ಶಾರ್ಕ್ ದಾಳಿಯಿಂದ ಪಾರಾಗಿದ್ದಾರೆ. ಅವಳು ದಡಕ್ಕೆ ಈಜಿ ಬಂದಳು.
ಇಲ್ಲಿದೆ ವಿಡಿಯೋ..
Tourists stunned watching a Tiger Shark chomping a Russian tourist who was out on a swim at an Egypt beach resort
23YO Vladimir Popov died in the attack, girlfriend escaped alive. Shark has been captured & killed pic.twitter.com/xUsitoCN5X
— Nabila Jamal (@nabilajamal_) June 9, 2023
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
