ತೃತೀಯ ಲಿಂಗಿಗಳೂ ಸೇರಿದಂತೆ ಲಿಂಗ ಜಾತಿ ಬೇಧವಿಲ್ಲದೆ ಆಶ್ರಯಕ್ಕಾಗಿ ‘ನಕ್ಷತ್ರ’ ಎಂಬ ಮಂಗಳಮುಖಿ ಅವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ‘ನಮ್ಮನೆ ಸುಮ್ಮನೆ’ ಎಂಬ ಆಶ್ರಮದ ನಿರ್ಮಾಣಕ್ಕಾಗಿ ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್ ಅವರು ಸಹಾಯ ಹಸ್ತ ಚಾಚಿದ್ದಾರೆ.
ನಿರ್ಗತಿಕರಿಗೆ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಔದ್ಯೋಗಿಕ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ‘ನಮ್ಮನೆ ಸುಮ್ಮನೆ’ ಆಶ್ರಮದ ನಿರ್ಮಾಣಕ್ಕಾಗಿ ಸುಮಾರು 10 ಲಕ್ಷ ನೀಡುವುದಾಗಿ ತಮ್ಮ ಸಂಸದರ ಸ್ಥಳೀಯ ಪರಿಹಾರ ನಿಧಿಯಿಂದ ಹಣಕಾಸಿನ ನೆರವು ನೀಡುವುದಾಗಿ ಸ್ವತಃ ಸಂಸದ ಚಂದ್ರಶೇಖರ್ ಅವರೇ ನಕ್ಷತ್ರ ಅವರಿಗೆ ಭರವಸೆ ನೀಡಿದ್ದು ಸದ್ಯ 5 ಲಕ್ಷ ಹಣ ಮಂಜೂರು ಮಾಡಿದ್ದು ಕಾರ್ಯಪ್ರಗತಿ ನಡೆಯುತ್ತಿದ್ದಂತೆ ಮಿಕ್ಕ ಹಣವನ್ನು ಮಂಜೂರು ಮಾಡುವುದಾಗಿ ಹೇಳಿದ್ದಾರೆ.
ಇತ್ತೀಚಿಗೆ ನಕ್ಷತ್ರ ಎಂಬುವವರು ಸಂಸದ ಜೆಸಿ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ನಮ್ಮನೆ ಸುಮ್ಮನೆ ಆಶ್ರಮದ ಬಗ್ಗೆ ವಿವರಿಸಿದರು ಮತ್ತು ಈ ವೇಳೆ ನಿರ್ಮಾಣದ ಹಂತದಲ್ಲಿರುವ ಆಶ್ರಮಕ್ಕೆ ನೆರವು ನೀಡುವಂತೆ ಮನವಿ ಮಾಡಿಕೊಂಡರು. ನಕ್ಷತ್ರ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಂಸದ ಜಿಸಿ ಚಂದ್ರಶೇಖರ್ ಅವರು ತಾವು ತಮ್ಮ ಸಂಸದರ ನಿಧಿಯಿಂದ ಹಣವನ್ನು ನೀಡುವುದಾಗಿ ಸ್ಥಳದಲ್ಲೇ ಭರವಸೆ ನೀಡಿದರು.
ಈ ವಿಚಾರವನ್ನು ಸ್ವತಹ ಚೀಸಿ ಚಂದ್ರಶೇಖರ್ ಅವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಕನಿಷ್ಠ 1000 ಅನಾಥರಿಗೆ ಆಶ್ರಯಧಾಮ ಕಟ್ಟಲು ಮುಂದಾಗಿರುವ ಮಂಗಳಮುಖಿ ನಕ್ಷತ್ರ ನಮ್ಮ ಕಚೇರಿಗೆ ಬಂದಿದ್ದರು, ಅವರಿಗೆ ಈ ಆಶ್ರಮ ಕಟ್ಟಲು ನಮ್ಮ ಸಂಸದರ ನಿಧಿಯಿಂದ 5 ಲಕ್ಷ ಈಗ ಬಿಡುಗಡೆ ಮಾಡಲಾಗಿದೆ.”ಎಂದು ಬರೆದುಕೊಂಡಿದ್ದಾರೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
