ವಂಚನೆ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸ್ ರಿಂದ ಬಂಧನಕ್ಕೆ ಒಳಗಾಗಿದ್ದ ಕಿರುತೆರೆ ಹಾಗೂ ಸಿನಿಮಾ ನಟಿ ಉಷಾ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ.
ಒಂದಲ್ಲ ಎರಡು ಸಲಗ ಮುಂತಾದ ಸಿನಿಮಾಗಳು ಹಾಗೂ ಕೆಲವು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದ ಉಷಾ ರವಿಶಂಕರ್ ಅವ್ರಿಗೆ ಫೇಸ್ಬುಕ್ ನಲ್ಲಿ ನೀನಾಸಂ ಫ್ರೆಂಡ್ಸ್ ಸರ್ಕಲ್ ಎಂಬ ಗ್ರೂಪ್ ಮೂಲಕ ಶಿವಮೊಗ್ಗ ಮೂಲದ ಶರವಣಂ ಎಂಬತಾ ಪರಿಚಯವಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ತಮ್ಮ ಮೊಬೈಲ್ ನಂಬರ್ ಗಳನ್ನು ವಿನಿಮಯ ಮಾಡಿಕೊಂಡು ವಾಟ್ಸಾಪ್ ಮೂಲಕ ಚಾಟಿಂಗ್ ಮಾಡುತ್ತಿದ್ದರು.
ದಿನ ಕಳೆದಂತೆ ನಟಿ ಉಷಾ ಅವರು ಶರವಣ್ ಮೇಲಿನ ಸಲಿಗೆಯಿಂದ ಆತನ ಕ್ರೆಡಿಟ್ ಕಾರ್ಡ್ ಬಳಸಿ ರೂ.4 ಲಕ್ಷ ಪಡೆದುಕೊಂಡಿದ್ದರು. ಈ ರೀತಿ ಹಂತ ಹಂತವಾಗಿ ಸುಮಾರು .7ರಿಂದ .8 ಲಕ್ಷಗಳನ್ನು ಪಡೆದುಕೊಂಡಿದ್ದು, ಹಣ ವಾಪಸ್ಸು ನೀಡಿಲ್ಲ ಎಂದು ಆರೋಪಿಸಲಾಗಿದೆ.
ಹಣ ವಾಪಸ್ ಕೊಡದ ಹಿನ್ನಲೆ ಶರವಣನ್ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ಪ್ರಯತ್ನಿಸಿದ್ದರು. ಆದರೆ, ಪೊಲೀಸರು ದೂರು ದಾಖಲು ಮಾಡಿಕೊಂಡಿರಲಿಲ್ಲ. ಹೀಗಾಗಿ, ಅವರು ಲಾಯರ್ ಮೂಲಕ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡಿದ್ದರು. ಉಷಾ ಮನೆ ವಿಳಾಸ ಸಿಕ್ಕಿರದ ಕಾರಣ ವಾಟ್ಸ್‌ಆ್ಯಪ್ ಮೂಲಕವೇ ನೋಟಿಸ್ ನೀಡಲಾಗಿತ್ತು.
ಅನಂತರ ಉಷಾ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ನ್ಯಾಯಾಲಯ ಒಂದು ತಿಂಗಳಲ್ಲಿ ಹಾಜರಾಗುವಂತೆ ಸೂಚಿಸಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಈ ಹಿನ್ನೆಲೆ ಕೋರ್ಚ್ ಆದೇಶದ ಮೇಲೆ ಶುಕ್ರವಾರ ವಿನೋಬನಗರ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಇದೀಗ ಉಷಾ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
