fbpx
ಸಮಾಚಾರ

ಜುಲೈ 27: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 27, 2023 ಗುರುವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ

 

 

Panchangam
ತಿಥಿ : ನವಮೀ : Jul 26 03:52 pm – Jul 27 03:48 pm; ದಶಮೀ : Jul 27 03:48 pm – Jul 28 02:51 pm
ನಕ್ಷತ್ರ : ವಿಶಾಖೆ: Jul 27 01:10 am – Jul 28 01:28 am; ಅನುರಾಧ: Jul 28 01:28 am – Jul 29 12:55 am
ಯೋಗ : ಶುಭ: Jul 26 02:39 pm – Jul 27 01:38 pm; ಶುಕ್ಲ: Jul 27 01:38 pm – Jul 28 11:56 am
ಕರಣ : ಕುಲವ: Jul 27 03:56 am – Jul 27 03:48 pm; ತೈತುಲ: Jul 27 03:48 pm – Jul 28 03:26 am; ಗರಿಜ: Jul 28 03:26 am – Jul 28 02:51 pm

Time to be Avoided
ರಾಹುಕಾಲ : 2:00 PM to 3:35 PM
ಯಮಗಂಡ : 6:07 AM to 7:42 AM
ದುರ್ಮುಹುರ್ತ : 10:20 AM to 11:10 AM, 03:22 PM to 04:12 PM
ವಿಷ : 05:22 AM to 06:56 AM
ಗುಳಿಕ : 9:16 AM to 10:51 AM

Good Time to be Used
ಅಮೃತಕಾಲ : 04:33 PM to 06:11 PM
ಅಭಿಜಿತ್ : 12:00 PM to 12:51 PM

Other Data
ಸೂರ್ಯೋದಯ : 6:07 AM
ಸುರ್ಯಾಸ್ತಮಯ : 6:44 PM

 

 

 

ಮೇಷ (Mesha)

ಆಸ್ತಿ ವಿವಾದಗಳಿಂದ ಮುಕ್ತಿಯ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವಿಸಬಹುದು. ಕುಲದೇವತಾ ಸೇವೆಯಿಂದ ನಿಯೋಜಿತ ಕೆಲಸಗಳು ಪೂರ್ಣಗೊಳ್ಳುವವು.

ವೃಷಭ (Vrushabh)


ಉದ್ಯೋಗದಲ್ಲಿ ಬಡ್ತಿ ಅಥವಾ ಬದಲಾವಣೆಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ವಿವಾಹಾಕಾಂಕ್ಷಿಗಳಿಗೆ ಅಭಿಲಾಷೆಗೆ ತಕ್ಕ ಸಂಗಾತಿ ದೊರೆತು ವಿವಾಹ ಕೂಡಿಬರುವುದು.

ಮಿಥುನ (Mithuna)


ವಿಶೇಷ ವ್ಯಕ್ತಿಯೊಬ್ಬರ ಪರಿಚಯ ಅಥವಾ ದರ್ಶನ ಭಾಗ್ಯ ಒದಗಿ ಬರುವುದು. ವಿದ್ಯಾರ್ಥಿಗಳಿಗೆ ವಿಶೇಷ ಆಸಕ್ತಿ ಮೂಡಿ ಪ್ರಗತಿ ಕಾಣುವಿರಿ. ಸೋದರರ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ.

ಕರ್ಕ (Karka)


ಅಜಾಗರೂಕತೆಯಿಂದಾಗಿ ವಿಪರೀತ ಖರ್ಚು ಸಂಭವಿಸಬಹುದು. ಬೇರೆಯವರ ಮಾತಿನ ಮೇಲೆ ಹಣ ತೊಡಗಿಸುವುದು ಉಚಿತವಲ್ಲ. ಆತ್ಮ ವಿಶ್ವಾಸ ಕಳೆದುಕೊಳ್ಳದೇ ಧೈರ್ಯದಿಂದ ವ್ಯವಹರಿಸಿ.

ಸಿಂಹ (Simha)


ಹಿರಿಯರ ಆಶೀರ್ವಾದದಿಂದ ಸಂತೃಪ್ತ ಜೀವನ ನಿಮ್ಮದಾಗಲಿದೆ. ಹೊಸ ಹೊಸ ಯೋಜನೆಗಳನ್ನು ಆರಂಭಿಸಲು ಸಕಾಲವಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವುದು.

ಕನ್ಯಾರಾಶಿ (Kanya)


ಹಿತ ಶತ್ರುಗಳ ಬಾಧೆ ಉಂಟಾಗುವ ಸಾಧ್ಯತೆ. ಮಹಿಳೆಯಿಂದ ಆತಂಕದ ಕ್ಷಣ ನಿರ್ಮಾಣವಾಗಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ. ಸಾಂಸ್ಕೃತಿಕ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶ ದೊರಕಲಿದೆ.

ತುಲಾ (Tula)


ಅಪ್ಪ ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ. ಅನವಶ್ಯಕ ಕೆಲಸ ಕಾರ್ಯಗಳಲ್ಲಿ ತೊಡಗದಿರುವುದು ಉತ್ತಮ. ಶುಭಕಾರ್ಯಗಳಲ್ಲಿ ಆತುರತೆಯಿಂದಾಗಿ ತೊಂದರೆ ಉಂಟಾಗಬಹುದು.

ವೃಶ್ಚಿಕ (Vrushchika)


ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ. ವ್ಯಸನಗಳಿಗೆ ಮಾರು ಹೋಗದಿರಿ. ಬೇರೆಯವರ ಸಮಸ್ಯೆಗಳಿಗೆ ಸ್ಪಂದಿಸುವ ಸಾಧ್ಯತೆ. ಅನವಶ್ಯಕ ಮಾತುಗಳಿಂದ ಬೇಸರವಾಗಲಿದೆ.

ಧನು ರಾಶಿ (Dhanu)


ಮಿತ್ರ ವ್ಯವಹಾರಗಳಲ್ಲಿ ಜಾಗ್ರತೆ ಅವಶ್ಯ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಕ್ಕಳಿಂದ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಸಫಲತೆ.

ಮಕರ (Makara)


ಮಾತೃ ವರ್ಗದವರಿಂದ ಸಹಕಾರ. ಆರೋಗ್ಯದಲ್ಲಿ ಏರುಪೇರು. ಅನಾವಶ್ಯಕ ವ್ಯವಹಾರಕ್ಕೆ ತಲೆ ಹಾಕದಿರುವುದು ಉತ್ತಮ. ಬಂಧುಗಳ ಆಗಮನದಿಂದ ಸಂತಸ.

ಕುಂಭರಾಶಿ (Kumbha)


ಕುಟುಂಬದಲ್ಲಿ ನೆಮ್ಮದಿ. ಸೋದರರಿಂದ ಸಲಹೆ, ಸಹಕಾರ ದೊರಕಿ ಗೃಹ ನಿರ್ಮಾಣ ಕಾರ್ಯದಲ್ಲಿ ಪ್ರಗತಿ. ವಿದೇಶದಿಂದ ಪ್ರಮುಖ ಸುದ್ದಿ ಕೇಳುವಿರಿ.

ಮೀನರಾಶಿ (Meena)


ಹಿರಿಯರ ಸಲಹೆ, ಸೂಚನೆಗಳನ್ನು ನಿರ್ಲಕ್ಷಿಸದಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರದಿಂದ ಗಂಡಾಂತರ. ಹಿತ ಶತ್ರುಗಳಿಂದ ಸಮಸ್ಯೆ ಎದುರಿಸಬೇಕಾದೀತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top