fbpx
ಸಮಾಚಾರ

ಜುಲೈ 26: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 26, 2023 ಬುಧವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ

 

Panchangam
ತಿಥಿ : ಅಷ್ಟಮೀ : Jul 25 03:09 pm – Jul 26 03:52 pm; ನವಮೀ : Jul 26 03:52 pm – Jul 27 03:48 pm
ನಕ್ಷತ್ರ : ಸ್ವಾತಿ: Jul 26 12:03 am – Jul 27 01:10 am; ವಿಶಾಖೆ: Jul 27 01:10 am – Jul 28 01:28 am
ಯೋಗ : ಸಾಧ್ಯ: Jul 25 03:01 pm – Jul 26 02:39 pm; ಶುಭ: Jul 26 02:39 pm – Jul 27 01:38 pm
ಕರಣ : ಬಾವ: Jul 26 03:36 am – Jul 26 03:52 pm; ಬಾಲವ: Jul 26 03:53 pm – Jul 27 03:56 am; ಕುಲವ: Jul 27 03:56 am – Jul 27 03:48 pm

Time to be Avoided
ರಾಹುಕಾಲ : 12:26 PM to 2:00 PM
ಯಮಗಂಡ : 7:42 AM to 9:16 AM
ದುರ್ಮುಹುರ್ತ : 12:00 PM to 12:51 PM
ವಿಷ : 06:50 AM to 08:27 AM
ಗುಳಿಕ : 10:51 AM to 12:26 PM

Good Time to be Used
ಅಮೃತಕಾಲ : 03:57 PM to 05:38 PM

Other Data
ಸೂರ್ಯೋದಯ : 6:07 AM
ಸುರ್ಯಾಸ್ತಮಯ : 6:44 PM

 

 

 

 

 

 

ಕೆಲವು ಸಂಗತಿಗಳು ನಿಮ್ನನ್ನು ಗಾಢವಾಗಿ ಕಾಡುತ್ತಿವೆ. ಅವುಗಳನ್ನು ಈದಿನ ಬಗೆಹರಿಸಿಕೊಳ್ಳಿರಿ. ಅನಿವಾರ್ಯವಾಗಿ ನಿರ್ವಹಿಸುತ್ತಿದ್ದ ಜವಾಬ್ದಾರಿಯಿಂದ ಮುಕ್ತರಾಗುವಿರಿ. ನಿಮ್ಮ ಕೈಯಲ್ಲಿ ಆಗುವ ಕೆಲಸದ ಕಡೆ ಗಮನ ಹರಿಸಿದರೆ ಸಾಕು.

ಸಂಕಷ್ಟ ಸಂದರ್ಭವನ್ನು ಬಹು ಜಾಣ್ಮೆಯಿಂದ ನಿಭಾಯಿಸುವಿರಿ. ವೃತ್ತಿಯಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿರುವುದರಿಂದ ಅದನ್ನು ಸ್ವೀಕರಿಸಲು ಮನಸು ಅಧೈರ‍್ಯಪಡುತ್ತಿರುವುದು. ಆದರೆ ಅದರಿಂದ ಒಳಿತಾಗುವುದು. ಬದಲಾವಣೆಯನ್ನು ಒಪ್ಪಿಕೊಳ್ಳಿರಿ.

 

ಒತ್ತಡದಿಂದ ಬಿಡುಗಡೆ ಮತ್ತು ನಿರಾಳತೆಯ ಭಾವ. ಕೆಲವರು ನಿಮ್ಮ ಮೂಡ್‌ ಹಾಳು ಮಾಡಬೇಕೆಂದು ಉದ್ದೇಶಪೂರ್ವಕ ಗಾಸಿಪ್‌ಗಳನ್ನು ಹರಡಿಸಬಹುದು. ಆದರೆ ಅವುಗಳ ಬಗ್ಗೆ ಗಮನ ಕೊಡದಿರುವುದು ಒಳ್ಳೆಯದು.

 

ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿರಿ. ಸಿಟ್ಟಿನಿಂದ ನಿಮ್ಮ ಸುತ್ತಮುತ್ತಲಿನ ಪರಿಸರ ಹಾನಿಯಾಗುವುದು ಮತ್ತು ಇದರಿಂದ ಪತಿ-ಪತ್ನಿಯರಲ್ಲಿ ಕೆಲ ಸಮಯ ವಿರಸ ಉಂಟಾಗುವುದು.

 

 

ನಿಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲು ಹಿರಿಯರೊಬ್ಬರ ಸಹಾಯ ಮತ್ತು ಸಹಕಾರ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕ ಅಗತ್ಯ. ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಎದುರಿಸುವಿರಿ.

 

 

ಹಿತಶತ್ರುಗಳು ನಿಮ್ಮನ್ನು ಪೀಡಿಸುವಂತಹ ಸಾಧ್ಯತೆಗಳು ಹೇರಳವಾಗಿದೆ. ಆದರೆ ಅವರು ಪೀಡಿಸುತ್ತಾರೆ ಎಂಬ ಕಾರಣದಿಂದ ಇದ್ದ ಜವಾಬ್ದಾರಿ ಸ್ಥಾನದಿಂದ ಕೆಳಗಿಳಿಯುವುದು ತರವಲ್ಲ. ಆದಷ್ಟು ಕುಲದೇವರ ಪ್ರಾರ್ಥನೆ ಮಾಡಿರಿ.

 

ಪದೇ ಪದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಇತರರು ನಿಮ್ಮ ಮೇಲೆ ಇಟ್ಟ ಭರವಸೆಗೆ ಧಕ್ಕೆ ಉಂಟಾಗುವುದು. ಹಾಗಾಗಿ ಆದಷ್ಟು ಸರಿಯಾದ ಮತ್ತು ದೃಢ ನಿರ್ಧಾರ ತಳೆಯುವತ್ತ ಚಿಂತಿಸುವುದು ಒಳ್ಳೆಯದು.

 

ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆಯಿಂದು ನಿಮಗೆ ತಲುಪುವುದು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆ ಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಒದಗಿಬರುವುದು.

ಕೆಲಸದ ಸ್ಥಳದಲ್ಲಿ ನಿಮ್ಮ ಹೆಗಲಿಗೆ ಹೊಸದೇ ರೀತಿಯ ಜವಾಬ್ದಾರಿಗಳು ಏರಲಿವೆ. ಅಂತೆಯೇ ಸಾಕಷ್ಟು ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ನಿಷ್ಠುರತೆಯನ್ನು ತೋರದಿದ್ದಲ್ಲಿ ಮಹತ್ತರ ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ.

 

ನೇರ ಮಾತುಗಾರರಾದ ನೀವು ಇಂದು ತಮಾಷೆಗಾಗಿ ಆಡಿದ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯಪ್ರವೃತ್ತರಾಗಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ನೀವೇ ಮುಂದಾಗಿ ನಿಂತು ನಡೆಸುವ ಕೆಲಸಕ್ಕೆ ಮನಸ್ಸಿನ ಸಿದ್ಧತೆ ಬೇಕಾಗುವುದು. ಈ ದಿನ ಏಕಾಗ್ರತೆಯಿಂದ ಕೆಲಸವನ್ನು ಆರಂಭಿಸಿರಿ. ಮನೋಕಾಮನೆಗಳು ಪೂರ್ಣಗೊಳ್ಳುವುದು. ಆದಷ್ಟು ಈ ದಿನ ತಾಳ್ಮೆಯಿಂದಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top