ಆಗಸ್ಟ್ 8, 2023 ಮಂಗಳವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಅಷ್ಟಮೀ : Aug 08 04:14 am – Aug 09 03:52 am; ನವಮೀ : Aug 09 03:52 am – Aug 10 04:11 am
ನಕ್ಷತ್ರ : ಭರಣಿ: Aug 08 01:16 am – Aug 09 01:32 am; ಕೃತಿಕೆ: Aug 09 01:32 am – Aug 10 02:29 am
ಯೋಗ : ಗಂಡ: Aug 07 06:16 pm – Aug 08 04:41 pm; ವೃದ್ಹಿ: Aug 08 04:41 pm – Aug 09 03:40 pm
ಕರಣ : ಬಾಲವ: Aug 08 04:14 am – Aug 08 03:58 pm; ಕುಲವ: Aug 08 03:58 pm – Aug 09 03:52 am; ತೈತುಲ: Aug 09 03:52 am – Aug 09 03:57 pm
Time to be Avoided
ರಾಹುಕಾಲ : 3:32 PM to 5:06 PM
ಯಮಗಂಡ : 9:17 AM to 10:51 AM
ದುರ್ಮುಹುರ್ತ : 08:40 AM to 09:30 AM, 11:16 PM to 12:02 AM
ವಿಷ : 02:00 PM to 03:40 PM
ಗುಳಿಕ : 12:25 PM to 1:59 PM
Good Time to be Used
ಅಮೃತಕಾಲ : 08:41 PM to 10:18 PM
ಅಭಿಜಿತ್ : 12:00 PM to 12:50 PM
Other Data
ಸೂರ್ಯೋದಯ : 6:10 AM
ಸುರ್ಯಾಸ್ತಮಯ : 6:40 PM
ನಿಮ್ಮ ಗುರಿಯನ್ನು ಬೆನ್ನುಹತ್ತಿ ಸೋತಿದ್ದೀರಿ ಎನ್ನುವ ಬಳಲಿಕೆ ಬೇಡ. ಮುನ್ನುಗ್ಗಿರಿ ಜಯಶೀಲರಾಗುವಿರಿ. ಪತ್ನಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸಿ ಮತ್ತು ಅದರಂತೆ ಕಾರ್ಯ ಪ್ರವೃತ್ತರಾಗುವುದರಿಂದ ಒಳಿತಾಗುವುದು.
ನಿಮ್ಮ ಹತ್ತಿರದ ಜನರು ವಿನಾಕಾರಣ ಜಗಳಕ್ಕೆ ಮುಂದಾಗುವ ಸಂಭವವಿದೆ. ಬೇಸರ ಮಾಡಿಕೊಳ್ಳಬೇಡಿ. ಜೀವನದ ಪ್ರತಿ ಘಟನೆಯು ನಿಮಗೆ ಒಂದು ಉತ್ತಮ ಪಾಠವನ್ನು ಕಲಿಸುವುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.
ದಿಢೀರನೆ ನಿರ್ಧಾರ ತಳೆಯುವುದು ಒಳ್ಳೆಯದಲ್ಲ. ಯಾವುದಕ್ಕೂ ಹಿಂದುಮುಂದು ಯೋಚಿಸಿ ಕಾರ್ಯಪ್ರವೃತ್ತರಾಗಿ. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ. ಬಡವರಿಗೆ ಆಹಾರ ನೀಡಿ.
ಎಷ್ಟೇ ರೀತಿಯ ಜನರು ನಿಮ್ಮ ಮೇಲೆ ಪರಿಣಾಮ ಬೀರಿರಬಹುದು. ಆದರೆ ಇತ್ತೀಚೆಗೆ ಪರಿಚಯವಾದ ಗಣ್ಯರ ಮಾತು ನಿಮ್ಮ ಜನಜೀವನಕ್ಕೆ ಹತ್ತಿರವಾದಂತೆ ಎನಿಸುತ್ತಿರುವುದರಿಂದ ಅವರ ಬಗ್ಗೆ ಗೌರವ ಆದರಗಳು ಹೆಚ್ಚಾಗುವವು.
ನಿಮ್ಮ ಮಾತಿಗೆ ಬೆಲೆ ಉಂಟು ಎಂಬುದು ಒಳ್ಳೆಯದೇ. ಆದರೆ ಜನ ಒಂದೇ ರೀತಿಯಾಗಿ ಚಿಂತಿಸುವುದಿಲ್ಲ. ಮೇಲ್ನೋಟಕ್ಕೆ ನಿಮ್ಮಂತೆ ಇದ್ದರೂ ಅವರ ಒಳ ವಿಚಾರಗಳು ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುವುದೇ ಆಗಿರುತ್ತದೆ.
ನಿರೀಕ್ಷಿತ ವಿಷಯಗಳನ್ನು ಲೀಲಾಜಾಲವಾಗಿ ಎದುರಿಸಬಲ್ಲಿರಿ. ಅನಿರೀಕ್ಷಿತ ವಿಚಾರಗಳ ಬಗೆಗೂ ಗಮನವಿರಲಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವರು. ಅಂತೆಯೆ ಜೇಬಿನಲ್ಲಿರುವ ಹಣಕ್ಕೆ ತಕ್ಕಷ್ಟು ವ್ಯವಹರಿಸುವುದು ಉತ್ತಮ.
ವಿಚಿತ್ರವಾದ ರೀತಿಯಲ್ಲಿ ನಿಮ್ಮ ವಿರೋಧಿಗಳೇ ನಿಮ್ಮನ್ನು ಬೆಂಬಲಿಸುವರು. ಹಾಗಾಗಿ ನಿಮ್ಮ ಯಶಸ್ಸಿನ ಹಾದಿಗೆ ಅಡ್ಡಲಾಗಿದ್ದ ಕೆಲವು ವಿಚಾರಗಳು ಅಲ್ಲಿಯೇ ಸ್ಥಗಿತಗೊಂಡು ಯಶಸ್ಸಿನ ಹಾದಿ ಸುಗಮವಾಗಲಿದೆ.
ಕಿರಿಕಿರಿಗಳು ಸಮುದ್ರದ ಅಲೆಗಳಂತೆ ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಆದರೆ ಅದನ್ನು ಎದುರಿಸಿ ಅದರೊಂದಿಗೆ ಸ್ನೇಹ ಸಂಪರ್ಕ ಬೆಳೆಸಿಕೊಂಡಲ್ಲಿ ಮನಸ್ಸಿಗೆ ಹರ್ಷವುಂಟಾಗುವುದು.
ನಿಮ್ಮ ಎದುರೇ ಎದುರಾಳಿಗಳನ್ನು ಹೊಗಳುವ ಧೂರ್ತರ ಮೇಲೆ ಕಿಡಿಕಾರದಿರಿ. ಸಹನೆಯಿಂದ ಒಳಿತಾಗುವುದು ಮತ್ತು ಇದರಿಂದ ಒಂದು ದೊಡ್ಡ ಪಾಠ ಕಲಿಯುವಿರಿ. ನಿಮ್ಮ ಕೈಲಿ ಆದರೆ ಕೆಲಸಗಳನ್ನು ಒಪ್ಪಿಕೊಳ್ಳಿ. ಇಲ್ಲವೆ ನಯವಾಗಿ ತಿರಸ್ಕರಿಸಿ.
ಬರೀ ಬೊಗಳೆ ಮಾತಿನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ. ಸ್ವಾರ್ಥ ಜೀವನ ಎಂದೂ ಉನ್ನತಮಟ್ಟಕ್ಕೆ ಏರುವುದಿಲ್ಲ. ಹೃದಯ ವೈಶಾಲ್ಯತೆಯನ್ನು ಬೆಳಸಿಕೊಂಡು ನಿಮ್ಮ ಸುತ್ತಮುತ್ತಲಿನ ಜನಕ್ಕೆ ಸಹಾಯಹಸ್ತ ನೀಡಿ.
ಜನರ ಬಳಿ ಮಾತನಾಡುವಾಗ ಬೇಕಾಬಿಟ್ಟಿ ಮನ ಬಂದಂತೆ ಮಾತನಾಡದಿರಿ. ಹಿತಶತ್ರುಗಳು ನಿಮ್ಮನ್ನು ಮಣಿಸಲು ಹೊಂಚು ಹಾಕಿರುವರು. ಆದಷ್ಟು ಕುಲದೇವರನ್ನು ಆರಾಧನೆ ಮಾಡಿ. ಇದರಿಂದ ನೆಮ್ಮದಿ ಕಾಣುವಿರಿ.
ಹೆಚ್ಚಿನ ಲವಲವಿಕೆ ಹಾಗೂ ಮುತುವರ್ಜಿ ಪ್ರದರ್ಶಿಸಿ ಕಾರ್ಯ ಸಾಫಲ್ಯತೆ ಹೊಂದುವಿರಿ. ಮಕ್ಕಳು ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ಕೊಡುವುದರಿಂದ ಆಂತರಿಕವಾಗಿ ಹೆಚ್ಚು ಆನಂದಿತರಾಗುವಿರಿ. ಆರೋಗ್ಯದ ಕಡೆ ಗಮನ ಹರಿಸಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
