ಹೃದಯಾಘಾತಕ್ಕೆ ವಯಸ್ಸಿನ ಭೇದವಿಲ್ಲ. ಹೊತ್ತಿನ ಪರಿವೇ ಇಲ್ಲ. ಆದರೆ ಚಳಿ ಅಂದರೆ ಹೃದಯ ಮುಡುಗುತ್ತದೆ. ಮನಸ್ಸು ಮರುಗುತ್ತದೆ. ಚಳಿಗಾಲದಲ್ಲಿ ಉಂಟಾಗುವ ವಾತಾವರಣ ಬದಲಾವಣೆಯಿಂದ ಹೃದಯಾಘಾತ ಮತ್ತು ಪಾಶ್ರ್ವವಾಯುವ ಸಂಭವಿಸುತ್ತವೆ. ಅದರಲ್ಲೂ ಜನವರಿ ತಿಂಗಳಲ್ಲಿ ಮಡುಗಟ್ಟುವ ಚಳಿಗೆ, ಹೃದಯ ನಡುಗಿ, ಹೃದಯಾಘಾತ ಸಂಭವಿಸುತ್ತದೆ. ಹೌದು ಜನವರಿ ತಿಂಗಳಲ್ಲಿನ ಚಳಿಗೆ ಹೃದಯಾಘಾತದಿಂದ ಸಾವನ್ನುಪ್ಪುವವರ ಪ್ರಮಾಣ ಹೆಚ್ಚಾಗಿದೆ ಎಂದು ಅಂತರರಾಷ್ಟ್ರೀಯ ಸಂಶೋಧನಾ ಕೇಂದ್ರಗಳು ಧೃಡ ಪಡಿಸಿದೆ.
ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ 1985ರಿಂದ 1996ರಲ್ಲಿ ಕಾಲಾವಧಿಯಲ್ಲಿ ಯಾವ ತಿಂಗಳಲ್ಲಿ ಅತೀ ಹೆಚ್ಚು ಹೃದಯಾಘಾತ ಸಂಭವಿಸಿದೆ ಎಂದು ಲಾಸ್ ಏಜೆಂಲ್‍ನಲ್ಲಿ ಸಮೀಕ್ಷೆ ನಡೆಸಿದಾಗ, ಅತಿ ಚಳಿಗಾಲವಾದ ಜನವರಿ ಹೆಚ್ಚು ಎಂಬ ವರದಿಯನ್ನು ಬಹಿರಂಗ ಪಡಿದೆ. ಇದೇ ರೀತಿ 2005-2008ರಲ್ಲಿ ಯುಎಸ್‍ಯ ಏಳು ಸ್ಥಳಗಳಲ್ಲಿ ಸಂಶೋಧನೆ ಕೈಗೊಂಡಾಗ ಶೀತದ ವಾತಾವರಣದಿಂದಲೇ ಹೃದಯಾಘಾತ ಸಂಭವಿಸಿದವರ ಸಂಖ್ಯೆ 1.7 ಮಿಲಿಯನ್‍ನಷ್ಟಿದೆ ಎಂದು ತಿಳಿಸಿದ್ದು, ಇದಕ್ಕೆ ಯುಕೆಯಲ್ಲಿಯೂ ಸಹ ಹೊರತಾಗಿಲ್ಲ.
ಚಳಿಗೆ ಹೃದಯಾಘಾತ ಹೆಚ್ಚು… ಹೆಚ್ಚಿನ ಹೃದಯಾಘಾತಗಳು ಚಳಿಗಾಲದಲ್ಲಿ ಅದೂ ನಸುಕ್ಕಿನಲ್ಲಿ ಸಂಭವಿಸು ಮುಖ್ಯ ಕಾರಣ, ಚಳಿಗಾಲದ ರಾತ್ರಿಯ ತಾಪಮಾನ ತುಂಬಾ ಕಡಿಮೆಯಾಗುವುದರಿಂದ ಅಪಧಮಿಗಳು ಸಂಕುಚಿತಗೊಂಡು, ರಕ್ತದೊತ್ತಡ ಹಾಗೂ ಪ್ರೋಟಿನ್‍ಗಳ ಪ್ರಮಾಣ ಏರುತ್ತದೆ. ಇವೆಲ್ಲವುಗಳ ಕ್ರೋಢೀಕರಣದಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು. ಹಾಗೆಯೇ ಈ ಅವಧಿಯಲ್ಲಿ ವೈರಲ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವುದರಿಂದ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳು ಉಂಟಾಗಿ ಹೃದಯದ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚಳಿಯ ವಾತಾವರಣಕ್ಕೆ ದೇಹದಲ್ಲಿನ ಸೆಲ್(ಜೀವಕೋಶ), ಜೀನ್ಸ್‍ನ ಜೈವಿಕ ಪ್ರಕ್ರಿಯೆಯಲ್ಲಿ ಏರುಪೇರು ಉಂಟಾಗುತ್ತದೆ. `ಡಿ’ ಜೀವಸ್ತ್ವದ ಕೊರತೆಯೂ ಹೃದಯಾಘಾತವನ್ನುಂಟು ಮಾಡಬಲ್ಲದು. ಸೂರ್ಯಕಿರಣಕ್ಕೆ ಮೈಯೊಡ್ಡದಿದ್ದಾಗ ದೇಹದ ಡಿ ಜೀವಸತ್ವದ ಉತ್ಪಾದನೆ ಕಡಿಮೆಯಾಗುತ್ತದೆ.
ಎತ್ತರ ಪ್ರದೇಶಗಳಲ್ಲಿ ವಾಸಿಸುವವರಿಗೆ ಹೃದಯಾಘಾತ ಪ್ರಮಾಣ ಕಡಿಮೆ, ಯಾಕೆಂದರೆ ಎತ್ತರಕ್ಕೆ ಹೋದಂತೆ ಸೂರ್ಯಕಿರಣಗಳಲ್ಲಿ ಅಲ್ಟ್ರಾವಲೆಯಟ್ ಪ್ರಮಾಣ ಹೆಚ್ಚಿರುವುದರಿಂದ ಡಿ ಜೀವಸ್ವತದ ಉತ್ಪಾದನಾ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದಲೇ ಏನೂ ರಕ್ತದೊತ್ತಡ ಇಲ್ಲದವರಿಗೂ ಕೊಲೆಸ್ಟ್ರಾಲ್ ಕಡಿಮೆ ಇರುವ ಕೆಳ ಪ್ರದೇಶದ ಅನೇಕರೂ ಹೃದಯಾಘಾತ ಪ್ರಮಾಣ ಹೆಚ್ಚಂತೆ. ಇದರ ಜತೆಗೆ ಹೃದಯದ ಹೊರಗಿನ ಸೂಕ್ಷ್ಮತಿಸೂಕ್ಷ್ಮ ಕಿರುನಾಳಗಳಲ್ಲಿ ರಕ್ತ ಪ್ರವಾಹ ನಿರಂತರವಾಗಿರುತ್ತದೆ.
ಈ ಕಿರುನಾಳಗಳ ಒಳಪದರ ಕಿರಿದಾಗಿದ್ದು, ಇದರಲ್ಲಿ ಕೊಬ್ಬಿನ ಕರಣೆ ಕಟ್ಟಿದರಂತೂ ಹೃದಯಾಘಾತ ಕಟ್ಟಿಟ್ಟ ಬುತ್ತಿ. ಚಳಿಗಾಲದಲ್ಲಿ ದೇಹದ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವೆಂದರೆ, ಸಿಂಥೇಜಿಕ್ ಡಿಸ್ಟಾರ್ಜ್ ಅಂದರೆ ಅಡ್ರಿನಾಲಿನ್ ಪಂಪಿಂಗ್ ಹೆಚ್ಚಾಗುವುದು. ಯಾವಾಗ ಅಡ್ರಿನಾಲಿನ್ ಪಂಪಿಂಗ್ ಹೆಚ್ಚಾಗುತ್ತದೆಯೋ ಆಗ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ, ಅದು ತನ್ನ ಕೆಲಸದ ಕಠಿಣತೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗುತ್ತದೆ, ಆಗ ಹೃದಯಾಘಾತ ಸಂಭವಿಸುವ ಸಾಧ್ಯತೆಯುಳ್ಳ ಅಥವಾ ಈಗಾಗಲೇ ಹೃದಯ ಸಂಬಂಧಿ ತೊಂದರೆಗಳಿಂದ ಬಳುತ್ತಿರುವವರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗಬಹುದು.
ಹೃದಯಾಘಾತ ತಡೆಯಬಹುದು…ಹೃದಯವನ್ನೇ ನಡುಗಿಸುವ ಜನವರಿ ತಿಂಗಳಲ್ಲಿ ಯಾವ ರೀತಿಯ ಜೀವನ ಶೈಲಿ ರೂಢಿಸಿಕೊಂಡರೆ ಹೃದಯಾಘಾತದಿಂದ ದೂರ ಉಳಿಯಬಹುದು ಎಂಬುದಕ್ಕೆ ಜೆಡಿಆರ್‍ಎಫ್ ಮತ್ತು ವೆಲ್‍ಕಮ್ ಟ್ರಸ್ಟ್ ಡಯಾಬಿಟಿಸ್ ಅಂಡ್ ಇಂಪ್ಲಾಮ್ಮಶನ್ ಲ್ಯಾಬೋರೇಟರಿಯೂ ಲಂಡನ್, ಅಮೆರಿಕಾ, ಐಸ್‍ಲ್ಯಾಂಡ್, ಆಸ್ಟ್ರೇಲಿಯಾ ಮತ್ತು ದಿ ಗ್ಯಾಂಬಿಯಾದ 16 ಸಾವಿರ ಜನ ರಕ್ತ ಮತ್ತು ದೇಹದ ಕೊಬ್ಬಿನಾಂಗಾಂಶ ಮಾದರಿಯನ್ನು ಪಡೆದು ಪರೀಕ್ಷೆ ಮಾಡಿದೆ.
ಚಳಿಗಾಲದಲ್ಲಿ ನಮ್ಮ ದೇಹ ಇತರೆ ಋತುಮಾನಗಳಿಗಿಂತ ಹೆಚ್ಚಾಗಿ ಜಡತ್ವದಿಂದ ಕೂಡಿರುತ್ತದೆ. ದೇಹದಲ್ಲಿನ ಪ್ರೋಟಿನ್, ರೋಗ ಪ್ರತಿರೋಧಕ ಶಕ್ತಿ ಹಾಗೂ ಅರೈಲ್ ಹೈಡ್ರೋ ಕಾರ್ಬನ್ ರಿಸೆಪ್ಟನ್ ನ್ಯೂಕ್ಲಿಯರ್ ಟ್ರಾನ್ಸೋಲ್‍ಕ್ಯಾಟೋರ್ ಲೈಕ್(ಎಆರ್‍ಎನ್‍ಟಿಎಲ್) ಜೀನ್‍ಗಳ ಈ ದಿನಗಳಲ್ಲಿ ಕಡಿಮೆಯಾಗುತ್ತವೆ. ಆದ್ದರಿಂದ ಬೇಸಿಗೆ, ಮಳೆಗಾಲಕ್ಕಿಂತ ಹೆಚ್ಚಾಗಿ ಈ ದಿನದಲ್ಲಿ ವ್ಯಾಯಾಮ ಮತ್ತು ಸಕ್ರಿಯದಿಂದ ಜೀವನ ಶೈಲಿ ರೂಢಿಸಿಕೊಂಡರೆ, ಹೃದಯಾಘಾತದಿಂದ ಪರಾಗಬಹುದು ಎಂದು ವರದಿಯಿಂದ ತಿಳಿಸಿದೆ. ಈ ಎಲ್ಲ ಸಂಶೋಧನೆಯಿಂದ ಜನವರಿ ತಿಂಗಳು ಮಾನವ ಆರೋಗ್ಯ ದೃಷ್ಟಿಯಿಂದ ಹೆಚ್ಚು ಅಪಾಯಕಾರಿ ಎಂಬುದು ತಿಳಿದು ಬರುತ್ತದೆ. ಹೃದಯದ ಅಪಧಮಿಯ ಮೇಲೆ ಚಳಿ ಹೆಚ್ಚಿನ ಪರಿಣಾಮ ಬೀರುತ್ತದೆ. ಆದ್ದರಿಂದ ಈ ದಿನಗಳಲ್ಲಿ ದೇಹವನ್ನು ಅದಷ್ಟು ಬೆಚ್ಚಗೆ ಇಟ್ಟಿಕೊಳ್ಳಬೇಕು, ಅಧಿಕ ಸಮಯ ನಿದ್ರೆ, ವಿಟಿಮಿನ್ ಡಿ ಹೆಚ್ಚಳ ಮಾಡಿಕೊಳ್ಳುವುದು. ಮಾಲಿನ್ಯ ಇರುವ ಪ್ರದೇಶದಿಂದ ದೂರ ಇರುವುದು ಈ ತಿಂಗಳಲ್ಲಿ ಮರೆಯದೇ ಮಾಡಬೇಕಾದ ಕೆಲಸ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
