fbpx
ಸಮಾಚಾರ

ಶ್ರಾವಣ ಸೋಮವಾರದ ವ್ರತ ಹೀಗೆ ಮಾಡಿದ್ರೆ ತುಂಬಾ ಒಳ್ಳೇದು

ಶ್ರಾವಣ ಮಾಸ ಬಂತು ಎಂದರೆ ಸಾಕು ಸಾಲು ಸಾಲು ಹಬ್ಬಗಳ ಸಡಗರ. ಶ್ರಾವಣ ಮಾಸದಲ್ಲಿ ದೇವರನ್ನು ಪೂಜಿಸುವುದು ಮತ್ತು ಪ್ರಾರ್ಥಿಸುವುದು, ಜಪ , ಹೋಮ, ಪಾರಾಯಣಗಳನ್ನು ಮಾಡುವುದು ಮತ್ತು ಈ ರೀತಿಯಾಗಿ ಆಚರಿಸುವುದು ಅನಾದಿಕಾಲದಿಂದಲೂ ಬಂದಿದೆ.
ಶ್ರಾವಣ ಮಾಸ ತುಂಬಾ ಪ್ರಶಸ್ತವಾದ ಮಾಸ ಎಂದು ಹೇಳಲಾಗುತ್ತಿದೆ . ಹೀಗಾಗಿ ಈ ಮಾಸದಲ್ಲಿ ದೇವರನ್ನು ಒಲಿಸಿ ಕೊಳ್ಳುವುದಕ್ಕೆ ಅತ್ಯಂತ ಉತ್ತಮವಾದ ಸಮಯ ಎಂದು ಹೇಳುತ್ತಾರೆ. ಶಾಸ್ತ್ರಕಾರರು ಅದರಲ್ಲೂ ಮುಖ್ಯವಾಗಿ ಪರಮೇಶ್ವರನಿಗೆ ಹೆಚ್ಚಾಗಿ ಪೂಜೆಗಳನ್ನು ಈ ಶ್ರಾವಣ ಸೋಮವಾರದ ದಿನಗಳಲ್ಲಿ ಮಾಡಿದರೆ ಅದರ ಫಲ ದುಪ್ಪಟ್ಟಾಗಿ ಬರುತ್ತದೆ ಎಂದು ಹೇಳಲಾಗುತ್ತದೆ.
ಶ್ರಾವಣ ಸೋಮವಾರ ಭಕ್ತಿ ಶ್ರದ್ಧೆಯಿಂದ ಪಾರ್ವತಿ ಪರಮೇಶ್ವರರನ್ನು ಪೂಜಿಸಿದರೆ ಇಷ್ಟಾರ್ಥಗಳ ಸಿದ್ದಿಸುತ್ತವೆ. ಇನ್ನು ಮಹಾದೇವನು ಅಭಿಷೇಕ ಪ್ರಿಯ ಸರಳವಾದ ಪೂಜೆ ಭಕ್ತಿಯಿಂದ ಪ್ರಾರ್ಥಿಸಿದರೆ ಬೇಗನೆ ಒಲಿಸಿಕೊಳ್ಳಬಹುದು. ಹೀಗಾಗಿ ಪರಮೇಶ್ವರನ ಪೂಜೆಗೆ ಅತೀ ಉತ್ತಮವಾದ ಮಾಸ ಈ ಶ್ರಾವಣ ಮಾಸ ಎಂದು ಹಿರಿಯರು ಹೇಳಿದ್ದಾರೆ.

ಈ ಶ್ರಾವಣ ಮಾಸದಲ್ಲಿ ಶ್ರಾವಣ ಮಾಸದ ಮೊದಲನೇ ಸೋಮವಾರದಿಂದ ಆರಂಭ ಮಾಡುವ ವ್ರತ ಪದ್ಧತಿಯೊಂದು ಇದೆ.ಅದನ್ನು 16 ಸೋಮವಾರ ಆಚರಣೆ ಮಾಡಲಾಗುತ್ತದೆ .ಈ ಶ್ರಾವಣ ಸೋಮವಾರದಲ್ಲಿ ಮದುವೆ ಆಗಬೇಕಾದ ಕನ್ಯೆಯರು ಪರಮೇಶ್ವರನನ್ನು ಭಕ್ತಿ, ಶ್ರದ್ಧೆಗಳಿಂದ ಪೂಜಿಸಿದರೆ ಉತ್ತಮವಾದಂತಹ ಪತಿಯನ್ನು ಪಡೆಯಬಹುದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಮುಖ್ಯವಾಗಿ ಮದುವೆಗೆ ಸಂಬಂಧಪಟ್ಟ ವಿಚಾರಗಳಲ್ಲಿ ಏನಾದರೂ ಸಮಸ್ಯೆಗಳು ಕಾಣುತ್ತಾ ಇದ್ದರೆ ಸೋಮವಾರದ ದಿನ ಹಾಲು ಮತ್ತು ಕೇಸರಿಯನ್ನು ಮಿಶ್ರಣ ಮಾಡಿಕೊಂಡು ಪರಮೇಶ್ವರನ ಲಿಂಗಕ್ಕೆ ಅಭಿಷೇಕ ಮಾಡಿದರೆ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗುತ್ತವೆ.
ಈ ಶ್ರಾವಣ ಮಾಸದ ಸೋಮವಾರದ ದಿನಗಳಲ್ಲಿ ನೀರಿನಲ್ಲಿರುವ ಮೀನುಗಳಿಗೆ ಗೋಧಿಯಿಂದ ಮಾಡಿದ ಪದಾರ್ಥಗಳನ್ನು ಹಾಕುವುದರಿಂದ ಕೂಡ ಶಿವನ ಅನುಗ್ರಹವನ್ನು ಪಡೆದು ಕೊಳ್ಳಬಹುದು ಎಂದು ಹೇಳಲಾಗುತ್ತದೆ .

 

 

ಅನಾರೋಗ್ಯದಿಂದ ಬಳಲುತ್ತಿರುವವರು ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ನೀರು ಮಿಶ್ರಿತ ಹಾಲನ್ನು ಹಾಗೂ ಸ್ವಲ್ಪ ಎಳ್ಳನ್ನು ಪರಮೇಶ್ವರನಿಗೆ ಅರ್ಪಿಸುವುದರಿಂದ ಶೀಘ್ರವಾಗಿ ಆರೋಗ್ಯವಂತರಾಗುತ್ತಾರೆ, ಕಾಯಿಲೆಗಳಿಂದ ಗುಣಮುಖರಾಗುತ್ತಾರೆ. ಮತ್ತು ಮಹಾಮೃತ್ಯುಂಜಯ ಮಂತ್ರ ಅಥವಾ ಶಿವಪಂಚಾಕ್ಷರೀ ಮಂತ್ರವಾದ “ಓಂ ನಮಃ ಶಿವಾಯ” ಎನ್ನುವ ಮಂತ್ರವನ್ನು ಸಾಧ್ಯವಾದಷ್ಟು ಬಾರಿ ಜಪಿಸಿ ಕೊಳ್ಳಬೇಕು. ಇದರಿಂದ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಆದಷ್ಟು ಪೂಜೆ ಮಾಡುವಾಗ ಈ ಮಾಸದಲ್ಲಿ ಶಿವ ಲಿಂಗವನ್ನು ಸ್ಪರ್ಶಿಸಲು ಹೋಗಬಾರದು.ಶಿವನು ಧ್ಯಾನ ಪ್ರಿಯನಾಗಿರುವುದರಿಂದ ಆತನಿಗೆ ಭಂಗ ಉಂಟು ಮಾಡಿದಂತೆ ಆಗುತ್ತದೆ.ಆದ್ದರಿಂದ ಅಭಿಷೇಕ ಮಾಡಿದ ತಕ್ಷಣ ನೈವೇದ್ಯವನ್ನು ದೂರದಿಂದ ಸಮರ್ಪಿಸಬೇಕು. ಈ ಮಾಸವು ದಾನ-ಧರ್ಮಗಳಿಗೆ ಹೇಳಿ ಮಾಡಿಸಿದ ಮಾಸವಾಗಿದೆ. ಯಾವುದೇ ದಾನ ಧರ್ಮ ವನ್ನು ಮಾಡಿದರು ಆಚರಿಸಿದರು ಅದರ ಫಲ ದುಪ್ಪಟ್ಟಾಗಿ ಬರುತ್ತದೆ .
ಆದ್ದರಿಂದ ಶ್ರಾವಣ ಮಾಸವು ಶ್ರವಣ ಮಾತ್ರದಿಂದಲೇ ಸನ್ಮಂಗಳವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು ಎಂದು ಧರ್ಮ ಶಾಸ್ತ್ರಗಳು ಹೇಳುತ್ತವೆ. “ಶ್ರವಣಂ ಕೀರ್ತನಂ ಭಗವತ್ ಅರ್ಚನೆಯಿಂದ ಕೀರ್ತನೆಗಳಿಂದ ಶ್ರವಣ ಮಾತ್ರದಿಂದಲೇ ನಾವು ಈ ಶ್ರಾವಣಮಾಸದಲ್ಲಿ ಕೋಟಿ ಕೋಟಿ ಜನ್ಮಗಳ ಪಾಪಗಳನ್ನು ತೊಲಗಿಸಿ ಕೊಳ್ಳಬಹುದು ಕೋಟಿ ಜನ್ಮಗಳ ಪುಣ್ಯವನ್ನು ಸಹ ಒದಗಿಸಿ ಕೊಳ್ಳಬಹುದು ಎಂದು ಹೇಳಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top