ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗಷ್ಟೇ ಬೆಂಗಳೂರಿನ ಬಿಎಂಟಿಸಿ ಬಸ್ ಡಿಪೋಗೆ ತೆರಳಿ ಅಲ್ಲಿನ ಜನರಿಗೆ ಅಚ್ಚರಿ ಮೂಡಿಸಿದ್ದರು. ಸ್ಥಳೀಯ ಮಹಾನಗರ ಸಾರಿಗೆ ಸಂಸ್ಥೆಯ ಡಿಪೋ ಸಂಖ್ಯೆ 4ಕ್ಕೆ ಭೇಟಿ ನೀಡಿ ಅಲ್ಲಿನ ನೌಕರರೊಂದಿಗೆ ಕೆಲಕಾಲ ಸಂವಾದ ನಡೆಸಿದರು. ಸದ್ಯ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸುತ್ತಿದ್ದಾರೆ.
#WATCH | Superstar Rajinikanth paid a surprise visit to depot number 4 of BMTC (Bengaluru Metropolitan Transport Corporation) in Bengaluru, Karnataka today.
(Video Source: BMTC) pic.twitter.com/luzdpkdnNh
— ANI (@ANI) August 29, 2023
ಎಷ್ಟೇ ಸ್ಟಾರ್ ಆಗಿದ್ದರೂ ಎಲ್ಲಿಂದ ಬಂದವರು ಎಂಬುದನ್ನೂ ಮರೆತಿಲ್ಲ. ರಜನಿಕಾಂತ್ ಚಿತ್ರರಂಗಕ್ಕೆ ಬರುವ ಮುನ್ನ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದು ಗೊತ್ತೇ ಇದೆ. ಅದಕ್ಕಾಗಿಯೇ ಈಗ ಅವರು.. ಒಂದು ಕಾಲದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು.
ರಜನಿ ಅವರ ಇತ್ತೀಚಿನ ಚಿತ್ರ ಜೈಲರ್ ದೊಡ್ಡ ಹಿಟ್ ಆಯಿತು. ಎಲ್ಲಾ ಭಾಷೆಯಲ್ಲೂ ಚಿತ್ರದ ಕ್ರೇಜ್ ಇನ್ನೂ ಮುಂದುವರೆದಿದೆ. ಜೈಲರ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಕೆಲ ದಿನಗಳ ಹಿಂದೆ ರಜನಿಕಾಂತ್ ಉತ್ತರಾಖಂಡ ಮತ್ತು ಜಾರ್ಖಂಡ್‌ಗೂ ಭೇಟಿ ನೀಡಿದ್ದರು. ಶೀಘ್ರದಲ್ಲೇ ಅವರು ‘ತಲೈವರ್ 170’ ಚಿತ್ರಕ್ಕೆ ತಯಾರಿ ನಡೆಸಲಿದ್ದಾರೆ..
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
