90ರ ದಶಕದಲ್ಲಿ ಹುಡುಗರ ಕನಸಿನ ರಾಣಿಯಾಗಿದ್ದವರು ಹಿರಿಯ ನಟಿ ನಗ್ಮಾ. ಆಕೆಯನ್ನು ನೋಡಲು ಜನ ಥಿಯೇಟರ್‌ಗಳಲ್ಲಿ ಸಾಲುಗಟ್ಟಿ ನಿಂತಿದ್ದರು. ನಗ್ಮಾ ಗ್ಲಾಮರ್ ಸಿನಿಮಾಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಂತರ ರಾಜಕೀಯದಲ್ಲಿ ಬ್ಯುಸಿಯಾದರು. ಆದರೆ ಕಾರಣಾಂತರಗಳಿಂದ ಆಕೆ ಮದುವೆಯಿಂದ ದೂರ ಉಳಿದಿದ್ದಳು.
ಈ ಹಿಂದೆ ಕ್ರಿಕೆಟಿಗ ಗಂಗೂಲಿ, ನಟರಾದ ರವಿಕಿಶನ್ ಮತ್ತು ಶರತ್ ಕುಮಾರ್ ಜೊತೆ ನಗ್ಮಾ ಸಂಬಂಧದ ಬಗ್ಗೆ ಹಲವು ವದಂತಿಗಳು ಹಬ್ಬಿದ್ದವು. ಈ ನಟಿ ಯಾರನ್ನು ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆಕೆಯ ಸಹೋದರಿಯರಾದ ಜ್ಯೋತಿಕಾ ಮತ್ತು ರೋಶಿನಿ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದರೆ, ನಗ್ಮಾ ಇನ್ನೂ ಒಂಟಿಯಾಗಿದ್ದಾಳೆ.
ಆದರೆ ಇತ್ತೀಚೆಗಷ್ಟೇ ಹಿರಿಯ ನಾಯಕಿ ನಗ್ಮಾ ತಮ್ಮ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಾನೂ ಕೂಡ ಮದುವೆಯಾಗಲು ಬಯಸಿದ್ದನ್ನು ಬಹಿರಂಗಪಡಿಸಿದ್ದಾರೇ. ನಾನು ಮದುವೆಯಾಗಬಾರದೆಂಬ ನಿಯಮವನ್ನೇನೂ ಮಾಡಿಲ್ಲ. ಮದುವೆಯಾಗಿ ಮಕ್ಕಳನ್ನು ಹೊಂದಬೇಕು ಜೊತೆಗೊಂದು ಸಂಸಾರ ಬೇಕು ಅಂತ ನನಗೂ ಅನ್ನಿಸುತ್ತೆ. ಆದ್ರೆ ಸಮಯ ಬಂದರೆ ಮದುವೆ ಆಗುತ್ತೇನೋ ಅಂತ ನೋಡ್ತೀನಿ.. ಮದುವೆಯಾದರೆ ಫುಲ್ ಖುಶಿಯಾಗೇ ಇರುತ್ತೆ. ಆದರೆ ಸಂತೋಷ ಕೆಲ ಕಾಲಕ್ಕೆ ಸೀಮಿತವಾಗಬಾರದು… ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
