fbpx
ಸಮಾಚಾರ

IRS ಅಧಿಕಾರಿಯಿಂದ ದುಬಾರಿ ಗಿಫ್ಟ್​ ಪಡೆದ ನಟಿ ನವ್ಯಾಗೆ ಇಡಿ ಶಾಕ್​! ಸಂಬಂಧದ ಬಗ್ಗೆ ಶಂಕೆ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಲಯಾಳಂ ನಟಿ ನವ್ಯಾ ನಾಯರ್ ಐಆರ್‌ಎಸ್ ಅಧಿಕಾರಿ ಸಚಿನ್ ಸಾವಂತ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಗುರುತಿಸಿದೆ. ಈ ಪ್ರಕರಣದಲ್ಲಿ ನವ್ಯಾ ನಾಯರ್ ಅವರನ್ನು ಇಡಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ಚಾರ್ಜ್‌ಶೀಟ್‌ನ ಭಾಗವಾಗಿರುವ ನವ್ಯಾ ನಾಯರ್ ಅವರ ಹೇಳಿಕೆಯನ್ನು ಅಧಿಕಾರಿಗಳು ಕಳೆದ ವಾರ ವಿಶೇಷ ಇಡಿ ನ್ಯಾಯಾಲಯದಲ್ಲಿ ಮಂಡಿಸಿದ್ದರು.

ಸಿಬಿಐ ಎಫ್‌ಐಆರ್ ಆಧರಿಸಿ ಸಚಿನ್ ಸಾವಂತ್ ಮನಿ ಲಾಂಡರಿಂಗ್ ಪ್ರಕರಣದ ತನಿಖೆಯ ಸಮಯದಲ್ಲಿ, ತನಿಖಾ ಸಂಸ್ಥೆಯು ಸಾವಂತ್‌ನಿಂದ ಮೊಬೈಲ್ ಡೇಟಾ, ಚಾಟ್‌ಗಳು ಮತ್ತು ಹೇಳಿಕೆಗಳನ್ನು ಸಂಗ್ರಹಿಸುವ ಮೂಲಕ ನಾಯರ್‌ನ ಶಾಮೀಲಾಗಿರುವುದನ್ನು ಪತ್ತೆ ಹಚ್ಚಿತು. ಐಆರ್‌ಎಸ್ ಅಧಿಕಾರಿ ಸಚಿನ್ ಸಾವಂತ್ ಮತ್ತು ನವ್ಯಾ ನಾಯರ್ ತುಂಬಾ ಆತ್ಮೀಯರಾಗಿದ್ದಾರೆ ಎಂದು ಇಡಿ ಅಧಿಕಾರಿಗಳು ಕಂಡುಕೊಂಡಿದ್ದಾರೆ. ನಾಯರ್ ಅವರನ್ನು ಭೇಟಿಯಾಗಲು ಸಾವಂತ್ 8-10 ಬಾರಿ ಕೊಚ್ಚಿನ್‌ಗೆ ಹೋಗಿದ್ದರು ಎಂದು ವರದಿಯಾಗಿದೆ. ಆದರೆ, ಇಡಿ ವಿಚಾರಣೆಗೆ ಒಳಪಡಿಸಿದಾಗ ನವ್ಯಾ ನಾಯರ್ ಅವರು ಸಚಿನ್ ಜೊತೆ ತನಗೆ ಯಾವುದೇ ಸಂಬಂಧ ಅಥವಾ ಆಪ್ತತೆ ಇಲ್ಲ.. ಅವರಿಬ್ಬರು ಕೇವಲ ಸ್ನೇಹಿತರು ಎಂದು ಹೇಳಿದ್ದಾರೆ.

ನಂತರದ ತನಿಖೆಯಲ್ಲಿ ಸಚಿನ್ ಸಾವಂತ್ ಅವರು ಮಲಯಾಳಂ ನಟಿ ನವ್ಯಾ ನಾಯರ್ ಅವರಿಗೆ ಆಭರಣ ಮತ್ತು ಕೆಲವು ಉಡುಗೊರೆಗಳನ್ನು ನೀಡಿರುವುದು ಪತ್ತೆಯಾಗಿದೆ. ಸಚಿನ್ ಅವರಿಗೆ ಸ್ನೇಹದ ಸಂಕೇತವಾಗಿ ಕೆಲವು ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂದು ನಾಯರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ನವ್ಯಾ ನಾಯರ್ ಹೇಳಿಕೆಯನ್ನು ಇಡಿ ಲಗತ್ತಿಸಿದೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ನಾಯರ್ ಜೊತೆಗೆ ಸಾವಂತ್ ಅವರ ಇನ್ನೊಬ್ಬ ಮಹಿಳಾ ಸ್ನೇಹಿತೆಯ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ.

2002 ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ED) ಕಸ್ಟಮ್ಸ್ ಹೆಚ್ಚುವರಿ ಕಮಿಷನರ್ ಸಚಿನ್ ಬಾಳಾಸಾಹೇಬ್ ಸಾವಂತ್ ಅವರನ್ನು ಜೂನ್ 27, 2023 ರಂದು ಲಕ್ನೋದಲ್ಲಿ ಬಂಧಿಸಿತು. ಸಾವಂತ್ ಈ ಹಿಂದೆ ಇಡಿ ಮುಂಬೈ ವಲಯ 2ರ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಚಿನ್ ಬಾಳಾಸಾಹೇಬ್ ಸಾವಂತ್ ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. PMLA ತನಿಖೆಯ ಸಮಯದಲ್ಲಿ, ಸಂಸ್ಥೆಯು ಬೇನಾಮಿ ಆಸ್ತಿಗಳು, ಘಟಕಗಳು ಮತ್ತು ಹಣಕಾಸು ವ್ಯವಹಾರಗಳಲ್ಲಿ ಆಪಾದಿತ ಅಕ್ರಮಗಳ ಮೇಲೆ ಕೇಂದ್ರೀಕರಿಸಿದೆ. ಈ ತನಿಖೆಯಲ್ಲಿ ಸುಮಾರು ರೂ. 1.25 ಕೋಟಿ ನಗದು ಠೇವಣಿಗಳನ್ನು ಸಾವಂತ್ ಕುಟುಂಬದ ಸದಸ್ಯರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top