fbpx
ಸಮಾಚಾರ

ನಟ ಶಿವರಾಜ್ ಕೆ.ಆರ್ ಪೇಟೆ ತಂದೆ ವಿಧಿವಶ

ಕನ್ನಡ ಚಿತ್ರರಂಗದ ಖ್ಯಾತ ಕಾಮಿಡಿ ನಟ ಶಿವರಾಜ್ ಕೆ. ಆರ್ ಪೇಟೆ ಅವರಿಗೆ ಪಿತೃವಿಯೋಗವಾಗಿದೆ. ಅವರ ತಂದೆ ರಾಮೇಗೌಡ ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದ ನಿವಾಸಿಯಾಗಿದ್ದ ರಾಮೇಗೌಡ ಅವರು ಡ್ರಾಮಾ ಮಾಸ್ಟರ್ ಆಗಿದ್ದರು. ಸದ್ಯ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ೮೦ ವರ್ಷ ವಯಸ್ಸಿನ ರಾಮೇಗೌಡ ಅವರು ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ರಾಮೇಗೌಡ ಅವರ ಪತ್ನಿ ಸಾವಿತ್ರಮ್ಮ, ಈ ದಂಪತಿಗಳಿಗೆ ಚಿತ್ರನಟ ಕೆ.ಆರ್. ಪೇಟೆ ಶಿವರಾಜ್ (ಕಾಮಿಡಿ ಕಿಲಾಡಿಗಳು) ಸೇರಿದಂತೆ ನಾಲ್ಕು ಗಂಡು ಮಕ್ಕಳು ಇದ್ದರು. ಇಂದು ಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು 01-09-2023 ರ ಶುಕ್ರವಾರ ಮಧ್ಯಾಹ್ನ 01 ಘಂಟೆಗೆ ಮೃತರ ಸ್ವಗ್ರಾಮದ ರಾಜಘಟ್ಟದಲ್ಲಿ ನೇರವೇರಲಿದೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top