ಸೆಪ್ಟೆಂಬರ್ 1, 2023 ಶುಕ್ರವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ದ್ವಿತೀಯಾ : Sep 01 03:19 am – Sep 01 11:50 pm; ತೃತೀಯಾ : Sep 01 11:50 pm – Sep 02 08:49 pm
ನಕ್ಷತ್ರ : ಪೂರ್ವಾ ಭಾದ್ರ: Aug 31 05:45 pm – Sep 01 02:56 pm; ಉತ್ತರಾ ಭಾದ್ರ: Sep 01 02:56 pm – Sep 02 12:30 pm
ಯೋಗ : ಧೃತಿ: Aug 31 05:15 pm – Sep 01 01:09 pm; ಶೂಲ: Sep 01 01:09 pm – Sep 02 09:22 am
ಕರಣ : ತೈತುಲ: Sep 01 03:19 am – Sep 01 01:32 pm; ಗರಿಜ: Sep 01 01:32 pm – Sep 01 11:50 pm; ವಾಣಿಜ: Sep 01 11:50 pm – Sep 02 10:16 am
Time to be Avoided
ರಾಹುಕಾಲ : 10:47 AM to 12:19 PM
ಯಮಗಂಡ : 3:23 PM to 4:55 PM
ದುರ್ಮುಹುರ್ತ : 08:39 AM to 09:28 AM, 12:44 PM to 01:33 PM
ವಿಷ : 11:34 PM to 01:00 AM
ಗುಳಿಕ : 7:43 AM to 9:15 AM
Good Time to be Used
ಅಮೃತಕಾಲ : 07:52 AM to 09:17 AM
ಅಭಿಜಿತ್ : 11:55 AM to 12:44 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:27 PM
ಪರೋಪಕಾರಾರ್ಥಂ ಇದಂ ಶರೀರಂ ಎಂದು ಭಾವಿಸಿರುವ ನೀವು ಅನೇಕ ಜನರಿಗೆ ಸಹಾಯ ಹಸ್ತ ನೀಡುವಿರಿ. ಈ ನಿಮ್ಮ ಮನೋಭಾವನೆಯು ಸರ್ವ ಜನರಿಂದ ಮೆಚ್ಚುಗೆಗೆ ಪಾತ್ರವಾಗುವುದು. ಆದರೆ ಮಾತಿನಲ್ಲಿ ನಯ, ವಿನಯ ಇರಲಿ.
ಹೊಸ ಜನರ ಪರಿಚಯದೊಂದಿಗೆ ಹೊಸದಾದ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ರಾಜಕೀಯ ಇಲ್ಲವೆ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆತು ಅದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವವು.
ನಿಮ್ಮ ಹತ್ತಿರದ ಬಂಧು, ಬಾಂಧವರು ಮತ್ತು ಸ್ನೇಹಿತರು ನಿಮ್ಮ ಜೊತೆಗೆ ಬರುವರು. ನಿಮ್ಮ ಕಾರ್ಯವನ್ನು ಶ್ಲಾಘಿಸುವ ಜನರು ಹಣ ಕೊಡುವ ಮೂಲಕ ನಿಮ್ಮ ಕಾರ್ಯಗಳಿಗೆ ನೆರವಾಗುವರು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.
ಬೇರೆಯವರೊಂದಿಗೆ ಅತಿಯಾದ ಮಾತು, ಹರಟೆಯು ನಿಮ್ಮ ಸಂಗಾತಿಯ ಮುನಿಸಿಗೆ ಕಾರಣವಾಗುವುದು. ಸಣ್ಣ ವಿಷಯವೇ ದೊಡ್ಡ ರಾದ್ಧಾಂತವಾಗಿ ಪರಿಣಮಿಸುವುದರಿಂದ ಈ ಬಗ್ಗೆ ಜಾಗ್ರತೆ ಅಗತ್ಯ.
ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಗದೇ ಚಡಪಡಿಸಲಿದ್ದೀರಿ. ಈ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಮಾರ್ಗದರ್ಶಕರನ್ನು ಕಂಡು ನಿಮ್ಮ ಸಮಸ್ಯೆ, ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಿ.
ಮರಕ್ಕಿಂತ ಮರ ದೊಡ್ಡದು. ಅಂತೆಯೇ ನಿಮ್ಮ ಬುದ್ಧಿವಂತಿಕೆಯನ್ನು ಮೀರಿಸುವ ಜನರು ಜಗತ್ತಿನಲ್ಲಿ ಕಾಣಬರುತ್ತಾರೆ. ಹಾಗಾಗಿ ನಿಮ್ಮ ಬುದ್ಧಿಮತ್ತೆಯ ವಿಚಾರವಾಗಿ ಅಹಂಕಾರ ಪಡುವುದು ಸೂಕ್ತವಲ್ಲ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಮಾಜದಲ್ಲಿ ಕೀರ್ತಿ ಗೌರವ ಆದರಗಳಿಂದ ಮನಸ್ಸಿಗೆ ಸಂತೋಷ ಎನಿಸುವುದು. ವದಂತಿಗಳಿಗೆ ಕಿವಿಗೊಡದಿರಿ. ಮನೆಯ ಹಿರಿಯರನ್ನು ಗೌರವಿಸಿ ಹಿರಿತನದಿಂದ ಬಾಳಿ.
ಬಾಳಸಂಗಾತಿಯೊಂದಿಗೆ ಕಲಹ ಸಾಧ್ಯತೆ ಇದೆ. ಇದನ್ನು ಜಾಣ್ಮೆಯಿಂದ ಎದುರಿಸಿದಲ್ಲಿ ಒಳಿತಾಗುವುದು. ಅವರ ವಿಚಾರಧಾರೆಗಳಿಗೂ ಬೆಲೆ ಕೊಡುವುದರಿಂದ ನಿಮಗೆ ಹೆಚ್ಚಿನ ಲಾಭವುಂಟಾಗುವುದು.
ಹೆಚ್ಚಿನ ನಿರೀಕ್ಷೆಗಳಿಂದ ನಿರಾಸೆಯೇ ಉಂಟಾಗುವುದು. ಹಾಗಾಗಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ. ನಿಮಗೆ ದೊರಕಿದಷ್ಟರಲ್ಲೇ ತೃಪ್ತಿಯನ್ನು ಕಾಣಿ. ಇದರಿಂದ ನೀವು ಸಮಾಜದಲ್ಲಿ ಗೌರವಿಸಲ್ಪಡುವಿರಿ.
ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯಲಿದೆ. ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದ ವ್ಯಕ್ತಿಗಳು ನಿಮ್ಮದೆರು ಬಂದು ಕ್ಷ ಮೆ ಯಾಚಿಸುವ ಸಂದರ್ಭ ಎದುರಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ನಿಮ್ಮನ್ನು ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದೆ ಚಡಪಡಿಸುತ್ತಿದ್ದೀರಿ. ಆತಂಕರಾಗದಿರಿ. ಬಂದ ಸಮಸ್ಯೆಗಳು ಹಿರಿಯರ ಆಶೀರ್ವಾದದಿಂದ ಕಡಿಮೆ ಆಗುವುದು. ದುರ್ಗೆಯ ಆರಾಧನೆ ಮಾಡಿ.
ನಿಮ್ಮದೇ ಯೋಚನೆ ಹಾಗೂ ಪ್ರಪಂಚದಿಂದ ಹೊರಗೆ ಬನ್ನಿ. ನಿಮಗಿಂತಲೂ ಬಹು ಕಷ್ಟಜೀವನ ನಡೆಸುತ್ತಿರುವವರು ನಿಮ್ಮ ಕಣ್ಣಿಗೆ ಬೀಳುವರು. ಆಗ ನೀವು ಅನುಭವಿಸುತ್ತಿರುವ ಕಷ್ಟ ಕಷ್ಟವೇ ಅಲ್ಲ ಎಂದು ಗೊತ್ತಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
