ನೀವಿರುವ ಸ್ಥಳದಲ್ಲಿ ಅಥವಾ ನಿಮ್ಮ ಮನೆಯ ಸುತ್ತ ಮುತ್ತ ಮೊಬೈಲ್ ನೆಟ್ ವರ್ಕ್ ಸರಿಯಾಗುತ್ತಿಲ್ಲವೇ..?ದೂರದ ಊರುಗಳಿಗೆ ಹೋದಾಗ ನಿಮ್ಮ ಮೊಬೈಲ್ ನಲ್ಲಿ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲವೇ . ಈ ಸಮಸ್ಯೆ ಇದ್ರೆ ಆ ಜಾಗದಲ್ಲಿ ಸಿಗ್ನಲ್ ಶಕ್ತಿ ಕಡಿಮೆ ಇದೆ ಎಂದರ್ಥ.ಹಾಗಾದ್ರೆ ನೀವು ಇರೋ ಸ್ಥಳದ ಸುತ್ತ ಮುತ್ತ ಸಿಗ್ನಲ್ ಎಲ್ಲಿ ಚನ್ನಾಗಿ ಸಿಗುತ್ತದೆ ಎಂದು ನಾವು ನಿಮಗೆ ತಿಳಿಸಿಕೊಡ್ತೀವಿ ಬನ್ನಿ .
ನಿಮ್ಮ ಮೊಬೈಲ್ ಗೆ ಸಿಗ್ನಲ್ ಎಲ್ಲಿ ಚನ್ನಾಗಿ ಸಿಗುತ್ತದೆ ಎಂದು ನೀವು ತಿಳ್ಕೊಬೇಕಂದ್ರೆ ನೀವು G-NetTrack Lite ಎಂಬ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಫೋನ್ ನಲ್ಲಿ ಇನ್ಸ್ಟಾಲ್ ಮಾಡ್ಕೋಬೇಕು. ನೀವು ಇರುವ ಜಾಗದಲ್ಲಿ ಮೊಬೈಲ್ ಸಿಗ್ನಲ್ ಎಷ್ಟು ಶಕ್ತಿಯುತವಾಗಿದೆ, ಮೊಬೈಲ್ ಟವರ್ ಯಾವ ದಿಕ್ಕಿನಲ್ಲಿದೆ, ಇತ್ಯಾದಿ ಅನೇಕ ವಿಷಯಗಳನ್ನು ಈ ಆಪ್ ಮೂಲಕ ತಿಳಿದುಕೊಳ್ಳಬಹುದು.
G-NetTrack Lite ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿ ಅದರಲ್ಲಿ G-NetTrack Lite ಸರ್ಚ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ https://play.google.com/store/apps/details?id=com.gyokovsolutions.gnettracklite&hl=en ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್ ನಲ್ಲಿ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ನೀವಿರುವ ಸ್ಥಳದ ಸುತ್ತಮುತ್ತ ಎಲ್ಲಿ ಶಕ್ತಿಯುತ ಸಿಗ್ನಲ್ ಸಿಗುತ್ತದೆ ಎಂದು ತಿಳಿದುಕೊಳ್ಳಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
