fbpx
ಸಮಾಚಾರ

ಕನಸಲ್ಲಿ ಈ ಪ್ರಾಣಿಗಳು ಕಂಡ್ರೆ ಪುರಾಣ ಶಾಸ್ತ್ರದ ಪ್ರಕಾರ ಶುಭವೇ ಅಥವಾ ಅಶುಭವೇ ತಿಳ್ಕೊಳಿ

ಸಾಮಾನ್ಯವಾಗಿ ನಾವು  ಗಾಢವಾಗಿ ನಿದ್ರೆ ಮಾಡುವಾಗ  ಅನೇಕ ಸಂಗತಿಗಳನ್ನು ಕನಸಿನ ಮೂಲಕ ನೋಡುತ್ತೇವೆ. ಅದರಲ್ಲಿ ಪ್ರಾಣಿಗಳು, ಮನುಷ್ಯರು, ಕೆಲವು ಸ್ಥಳಗಳು , ಬೇರೆ ವಸ್ತುಗಳು ಹೀಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ನಾವು ಆಗಾಗ್ಗೆ ನಿದ್ದೆಯಲ್ಲಿ ಕನಸನ್ನು ಕಾಣುತ್ತಿರುತ್ತೇವೆ. ಅಂತಹ ಕನಸುಗಳ ಬಗ್ಗೆ  ಇಂದು ನಾವು ಕನಸಿನಲ್ಲಿ ಕೆಲವು ಪ್ರಾಣಿಗಳನ್ನು ಕಂಡರೆ ಫಲವೇನು ? ಮತ್ತು ರಥದಲ್ಲಿ ಕೂತು ಎಲ್ಲಿಗೋ ಹೋಗುತ್ತಿರುವಂತೆ ಕನಸು ಬಿದ್ದರೆ ಫಲವೇನು ? ಎಂಬುದನ್ನು ತಿಳಿದುಕೊಳ್ಳೋಣ

 

ಆನೆ.

 

 

ಸ್ವಪ್ನದಲ್ಲಿ ಆನೆಯನ್ನು ಕಂಡರೆ ನಮಗೆ ಉನ್ನತವಾದ ಸ್ಥಾನಮಾನ ಅಧಿಕಾರ ಪ್ರಾಪ್ತಿಯಾಗಲಿದೆ. ದೊಡ್ಡ ಉದ್ಯೋಗ ದೊರೆಯಲಿದೆ ಎಂಬುದನ್ನು ಸೂಚಿಸುತ್ತದೆ. ಆನೆ ಕನಸಿನಲ್ಲಿ ಕಾಣುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.ನಾವು ದೈವತ್ವ ಭಾವನೆಯಿಂದ ಪೂಜೆ ಮಾಡುವ ಕೆಲವೇ ಕೆಲವು ಪ್ರಾಣಿಗಳಲ್ಲಿ ಆನೆಯೂ ಕೂಡ ಒಂದು , ಆದ್ದರಿಂದ ಆನೆ ಕನಸಿನಲ್ಲಿ ಕಂಡರೆ ಇದು ಶುಭ ಎಂದು ಹೇಳಲಾಗಿದೆ .

 

ಹಸು.

 

 

ಹಸು ಕನಸಿನಲ್ಲಿ ಬಂದರೆ ನಾವು ಮಾಡುತ್ತಿರುವ ಕೆಲಸದಲ್ಲಿ ಬಡ್ತಿ ಪ್ರಾಪ್ತಿಯಾಗುತ್ತದೆ. ಹಸು ಹಾಲು ಕೊಡುವ ಹೆಣ್ಣು ಪ್ರಾಣಿಯಾಗಿದೆ. ನೀವೇನು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೀರೋ, ಅದರಲ್ಲಿ ವಿಶೇಷ ಲಾಭವನ್ನು ಕಾಣಲಿದ್ದೀರಿ ಹಾಗೂ ಹಸು ಕನಸಿನಲ್ಲಿ ಬರುವುದು ಅತ್ಯಂತ ಶುಭಕರ ಎಂದು ಪರಿಗಣಿಸಲಾಗಿದೆ.

 

ಎತ್ತು.

 

 

ಎತ್ತು ಗಂಡು ಪ್ರಾಣಿಯಾಗಿದೆ. ಎತ್ತು ಕನಸಿನಲ್ಲಿ ಬಂದರೆ ವಿಶೇಷವಾದ ಶುಭ ಫಲಗಳು ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಇದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ.

 

ರಥದಲ್ಲಿ ಸಂಚರಿಸುವಂತೆ ಕನಸು.

 

ಕನಸಿನಲ್ಲಿ ನೀವು ರಥದಲ್ಲಿ ಕುಳಿತು ಪ್ರಯಾಣ ಮಾಡಿದಂತೆ ಕಂಡು ಬಂದರೆ ಇದು ಅತ್ಯಂತ ಶುಭ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಆನೆ ಕುದುರೆ ಎತ್ತುಗಳು ಮತ್ತು ಹಸುಗಳು ಈ ರೀತಿಯ ಪ್ರಾಣಿಗಳು ಕನಸಿನಲ್ಲಿ ಕಂಡರೆ ಇದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ ಈ ರೀತಿಯ ಪ್ರಾಣಿಗಳನ್ನು ರಥಕ್ಕೆ ಕಟ್ಟಿಕೊಂಡು ಹೋಗುತ್ತಿದ್ದರೆ, ಈ ರೀತಿಯ ಪ್ರಾಣಿಗಳು ಇರುವ ರಥವನ್ನು ಏರಿ ಪ್ರಯಾಣ ಮಾಡುತ್ತಿರುವ ಕನಸನ್ನು ಕಂಡರೆ ಅಂಥವರು ಅತಿ ಶೀಘ್ರದಲ್ಲಿ ರಾಜ್ಯವನ್ನು ಆಳುವಂತಹ ಅಥವಾ ಆ ಪ್ರದೇಶವನ್ನು ಆಳುವಂತಹ ಸಕ್ರಿಯವಾದ ಉನ್ನತವಾಗಿರುವಂತಹ  ಸ್ಥಾನ ಮಾನವನ್ನು ಪಡೆಯುವಂತಹ ಒಂದು ಯೋಗ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತದೆ ಶಾಸ್ತ್ರ.

 

 

ಹಿಂದಿನ ಕಾಲದಲ್ಲಿ ಇಂತಹ ಕನಸನ್ನು ಕಂಡರೆ ರಾಜನಾಗುತ್ತಿದ್ದ ಎಂದು ಒಂದು ಶಾಸ್ತ್ರ ಇತ್ತು. ಆದರೆ ಈಗಿನ ಕಾಲದಲ್ಲಿ ರಾಜ್ಯಕ್ಕೆ ಸಂಬಂಧಪಟ್ಟಂತೆ ಒಂದು ಉನ್ನತ ವಾಗಿರುವಂತಹ ಸ್ಥಾನ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಈ ರೀತಿ ರಥದಲ್ಲಿ ನೀವು ಏರಿ ಹೋಗುವ ಕನಸು ಕಂಡರೆ ಅತ್ಯಂತ ಶುಭ ಎಂದು ಹೇಳಲಾಗಿದೆ. ಅತ್ಯಂತ ಶುಭ ಫಲಗಳನ್ನು ಕಾಣಬಹುದಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top