fbpx
ಸಮಾಚಾರ

ಜಗದೋದ್ಧಾರನ ಆಡಿಸಿದಳೆಶೋದಾ – ಇದು ಶ್ರೀ ಕೃಷ್ಣನ ಜನ್ಮ ರಹಸ್ಯದ ಕಥೆ

ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನವನ್ನು ಹಬ್ಬವನ್ನಾಗಿ ಭಾರತದಲ್ಲಿ ಎಲ್ಲಾ ಕಡೆಯೂ ಆಚರಿಸಲಾಗುತ್ತದೆ.ಕೃಷ್ಣ ಹುಟ್ಟಿದ ದಿನವನ್ನು ಅಂದರೆ ಕೃಷ್ಣನ ಹುಟ್ಟು ಹಬ್ಬದ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು  ಅತ್ಯಂತ ಸಡಗರ ಮತ್ತು ಸಂಭ್ರಮದಿಂದ  ಆಚರಿಸಲಾಗುತ್ತದೆ.

ಈ ವರ್ಷ 2017 ಆಗಸ್ಟ್ 14 ರಂದು ಶ್ರಾವಣ ಮಾಸದಲ್ಲಿ ರೋಹಿಣಿ ನಕ್ಷತ್ರ, ಅಷ್ಟಮಿಯ ತಿಥಿಯ ದಿನ  ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಬಂದಿದೆ.

ಕೃಷ್ಣ ಹುಟ್ಟಿದ್ದು  ಅತ್ಯಂತ ಶ್ರೇಷ್ಠ ಮಾಸ ಎಂದು ಕರೆಯಲ್ಪಡುವ  ಶ್ರಾವಣ ಮಾಸದಲ್ಲಿ. ಶ್ರಾವಣ ಮಾಸದ ಅಷ್ಟಮಿಯ ತಿಥಿಯ ದಿನ 8 ನೇ ಮಗುವಾಗಿ ದೇವಕಿ ಮತ್ತು ವಸುದೇವನಿಗೆ ಉತ್ತರ ಪ್ರದೇಶದಲ್ಲಿರುವ  ಮಥುರಾ ನಗರದಲ್ಲಿ ಯಾದವ ಕುಲದಲ್ಲಿ ಮಧ್ಯರಾತ್ರಿ 12 ಗಂಟೆಗೆ ಜನಿಸಿದ.ಕೃಷ್ಣನು  ಜನನವಾಗಿದ್ದು  ರೋಹಿಣಿ ನಕ್ಷತ್ರದಲ್ಲಿ  ಎಂದು  ಪುರಾಣಗಳು ಹೇಳುತ್ತವೆ.

ವಸುದೇವ  ಕೃಷ್ಣನ ತಂದೆ ಇನ್ನೂ ದೇವಕಿ ಜನ್ಮಕೊಟ್ಟ ತಾಯಿಯಾದರೆ ಯಶೋದೆ ಸಾಕಿ ಬೆಳೆಸಿದ ತಾಯಿ ಆದ್ದರಿಂದ ಕೃಷ್ಣನಿಗೆ ಇಬ್ಬರು ತಾಯಂದಿರು.

ದೇವಕಿ ಮತ್ತು ವಸುದೇವನಿಗೆ ಮದುವೆ ಮಾಡಿಸಿದ್ದು ದೇವಕಿಯ ಅಣ್ಣ ಕಂಸ.ವಿವಾಹವಾದ ನಂತರ  ಕಂಸ ಸತಿ ಪತಿಯರಾದ ದೇವಕಿ ಮತ್ತು ವಸುದೇವನನ್ನು ಅವರ ಮನೆಗೆ ಕಳಿಸಲು ಹೋಗುವಾಗ ದಾರಿ ಮಾರ್ಗದಲ್ಲಿ  ಯಾವುದೋ ಒಂದು ಅಶರೀರವಾಣಿಯು  ಹೇಳಿತು ದೇವಕಿಗೆ ಹುಟ್ಟುವ 8 ನೇ ಮಗುವು ನಿನ್ನ ಸಂಹಾರ ಮಾಡುವುದೆಂದು.ಆಗ ಕಂಸ ಕೋಪಗೊಂಡು ಅಲ್ಲಿಯೇ ದೇವಕಿಯನ್ನು ಸಂಹಾರ ಮಾಡಲು ಮುಂದಾದನು.ಆದರೆ ವಸುದೇವ ಹೇಳಿದನು ದೇವಕಿಗೆ ಹುಟ್ಟುವ ಪ್ರತಿಯೊಂದು ಮಗುವನ್ನು ನಿನಗೆ ತಂದು ಕೊಡುವೆನು ಆದರೆ ದೇವಕಿಗೆ ಮಾತ್ರ ಏನು ಮಾಡಬೇಡ ಎಂದು ಹೇಳಿದನು.ನಂತರ ಹೀಗೆ ದೇವಕಿಗೆ ಹುಟ್ಟಿದ 7 ಮಕ್ಕಳನ್ನು ಸಹ ಕಂಸನು ಕೊಂದು ಬಿಟ್ಟನು.

 

ನಂತರ ದೇವಕಿಗೆ  ಹುಟ್ಟಿದ 8ನೇ ಮಗುವೇ ಶ್ರೀ ಕೃಷ್ಣ ಅದು ಅಷ್ಟಮಿ ತಿಥಿಯ , ರೋಹಿಣಿ ನಕ್ಷತ್ರದ ದಿನ,ಮಧ್ಯರಾತ್ರಿ ಜನಿಸಿದ ಮಗುವೇ ಶ್ರೀ ಕೃಷ್ಣ.ಆದರೆ ಈ ಮಗುವನ್ನು ಸಹ ಕಂಸನು ಕೊಲ್ಲುವನು ಎಂದು ಯೋಶೋದೆಗೆ ಹುಟ್ಟಿದ ಹೆಣ್ಣು ಮಗುವನ್ನು ದೇವಿಕಿಯ ಬಳಿ ತಂದಿರಿಸಿ ,ದೇವಕಿಗೆ ಹುಟ್ಟಿದ ಗಂಡು ಮಗುವನ್ನು ಯಶೋದೆಯ ಬಳಿ ಇರಿಸಿದನು.

ಹುಟ್ಟಿದ ತಕ್ಷಣವೇ ಯಮುನಾ ನದಿಯನ್ನು ದಾಟಿ ಗೋಕುಲಕ್ಕೆ ಎತ್ತು ಕೊಂಡು ಹೋಗಿ ಕೃಷ್ಣನನ್ನು ಯಶೋದೆಯ ಬಳಿ ಇರಿಸಿ  ಅಲ್ಲಿಂದ ಹೆಣ್ಣು ಮಗುವನ್ನು ಮಥುರಾ ನಗರಕ್ಕೆ ತಂದು ದೇವಕೀಯ ಪಕ್ಕ ಇರಿಸಿದನು ವಸುದೇವ.

ಮಾರನೇ ದಿನ ದೇವಕಿಗೆ 8 ನೇ ಮಗುವು ಹುಟ್ಟಿದೆ ಎಂದು ತಿಳಿದು ಅದನ್ನು ಸಹ ಸಂಹಾರ ಮಾಡಲು ಬಂದನು.

ಸಂಹಾರ ಮಾಡಲು ಮುಂದಾದಾಗ ಆಗ ಅ ಹೆಣ್ಣು ಮಗು  ವಿಷ್ಣುವಿನ ಸಹಾಯಕಿಯಾದ  ಯೋಗಮಾಯ ಎಂಬುವಳ ಅವತಾರ ತಾಳಿದ ಆ ಹೆಣ್ಣು ಮಗುವು ಈ ರೀತಿ ಹೇಳಿದಳು.  ‘ಕೃಷ್ಣನು ಕಂಸನನ್ನು ಸಾಯಿಸಲು ಕಾರಣ ಏನೆಂದು ತಿಳಿಯಲು ನಾನು ಹೊರಡುತ್ತೇನೆ’ ಎಂದು ಹೇಳಿ ಮಾಯವಾಗಿಬಿಟ್ಟಳು.

ನಂತರ ಬಾಲ ಮುದ್ದು ಕೃಷ್ಣನು ಗೋಕುಲದಲ್ಲಿ  ನಂದರಾಜ ಎಂಬುವರ ಮನೆಯಲ್ಲಿ ಯಶೋದೆಯ ಮಗನಾಗಿ ,ಬಲರಾಮನ ತಮ್ಮನಾಗಿ ಆಡಿ ನಲಿದು ,ಬೆಣ್ಣೆಯನ್ನು ಕದ್ದು ತಿನ್ನುತ್ತಾ ಬೆಳೆದನು.ಹೀಗೆ ಕೃಷ್ಣನಿಗೆ ಬಲರಾಮನು ಅಣ್ಣನಾದನು,ಯಶೋದೆಯು ತಾಯಿಯಾದಳು.

ನಂತರ ಕೃಷ್ಣ ಬೆಳೆದು ದೊಡ್ಡವನಾದಾಗ ಅನೇಕ ವರ್ಷಗಳ ಬಳಿಕ ಕಂಸ ಅಲ್ಲಿಗೆ ಬಂದನು ಆಗ ಕಂಸನನ್ನು  ಸ್ವತಃ ಶ್ರೀ ಕೃಷ್ಣನೇ ಸಂಹಾರ ಮಾಡಿದನು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top