ಇಂದು ಬೆಳಿಗ್ಗೆಯಿಂದ ನಟಿ ರಮ್ಯಾ ಬಗ್ಗೆ ಸುದ್ದಿಯೊಂದು ಎಲ್ಲೆಡೆ ಪ್ರಸಾರಗೊಂಡಿತ್ತು. ಅದೇನೆಂದರೆ ನಟಿ ರಮ್ಯಾ ಅವರಿಗೆ ಹೃದಯಾಘಾತವಾಗಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು. ಈ ಸುದ್ದಿ ಕೇಳಿ ಕನ್ನಡಿಗರು ಒಮ್ಮೆಲೇ ದಿಗ್ಬ್ರಾಂತರಾಗಿದ್ದರು. ಇದೀಗ ಈ ಸುದ್ದಿಗೆ ಸ್ವತಃ ರಮ್ಯಾ ಅವರ ಆಪ್ತ ಬಳಗವೇ ಸ್ಪಷ್ಟಿಕರಣ ನೀಡಿದೆ.
ಕೆಲ ವೆಬ್‌ಸೈಟ್‌ಗಳು ಮತ್ತು ತಮಿಳು ಮೂಲದ ಸೋಷಿಯಲ್ ಮೀಡಿಯಾ ಬಳಕೆದಾರರು ರಮ್ಯಾ ಅವರ ಸಾವಾಗಿದೆ, ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಡಿಯಾಕ್ ಅರೆಸ್ಟ್ ಆಗಿದೆ ಎಂಬೆಲ್ಲ ವದಂತಿಗಳನ್ನು ಹಬ್ಬಿಸಿದ್ದರು. ಅದನ್ನೇ ಆಧರಿಸಿ ಕೆಲ ಡಿಜಿಟಲ್ ಸುದ್ದಿ ಮಾಧ್ಯಮಗಳು ನಿಖರತೆ ಖಚಿತಪಡಿಸಿಕೊಳ್ಳದೆ ವರದಿ ಬಿತ್ತರಿಸಿದ್ದವು. ರಮ್ಯಾ ಸಾವಿನ ವದಂತಿ ಹರಡುತ್ತಿದ್ದಂತೆ ಟ್ವಿಟರ್‌ನಲ್ಲಿ #DivyaSpandana ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.
ಸದ್ಯ ರಮ್ಯಾ ಅವರು ಜಿನೆವಾದಲ್ಲಿ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ರಮ್ಯಾ ಆಪ್ತರು ಟ್ವೀಟ್ ಮೂಲಕ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. “ನಾನು ಈಗಷ್ಟೇ ರಮ್ಯ ಜೊತೆ ಮಾತನಾಡಿದೆ, ಆಕೆ ಆರಾಮವಾಗಿದ್ದಾರೆ. ನಾಳೆ ಬೆಂಗಳೂರಿಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
