fbpx
ಸಮಾಚಾರ

ಸೆಪ್ಟೆಂಬರ್ 07: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಸೆಪ್ಟೆಂಬರ್ 7, 2023 ಗುರುವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಷ್ಟಮೀ : Sep 06 03:38 pm – Sep 07 04:14 pm; ನವಮೀ : Sep 07 04:14 pm – Sep 08 05:30 pm
ನಕ್ಷತ್ರ : ರೋಹಿಣಿ: Sep 06 09:20 am – Sep 07 10:25 am; ಮೃಗಶಿರ: Sep 07 10:25 am – Sep 08 12:09 pm
ಯೋಗ : ವಜ್ರ: Sep 06 10:25 pm – Sep 07 10:01 pm; ಸಿಧ್ಧಿ: Sep 07 10:01 pm – Sep 08 10:07 pm
ಕರಣ : ಕುಲವ: Sep 07 03:51 am – Sep 07 04:14 pm; ತೈತುಲ: Sep 07 04:14 pm – Sep 08 04:48 am; ಗರಿಜ: Sep 08 04:48 am – Sep 08 05:30 pm

Time to be Avoided
ರಾಹುಕಾಲ : 1:49 PM to 3:20 PM
ಯಮಗಂಡ : 6:12 AM to 7:43 AM
ದುರ್ಮುಹುರ್ತ : 10:15 AM to 11:04 AM, 03:08 PM to 03:56 PM
ವಿಷ : 04:25 PM to 06:08 PM
ಗುಳಿಕ : 9:14 AM to 10:46 AM

Good Time to be Used
ಅಮೃತಕಾಲ : 07:04 AM to 08:44 AM, 02:43 AM to 04:26 AM
ಅಭಿಜಿತ್ : 11:53 AM to 12:42 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:23 PM

 

 

 

 ‘ಈಸಬೇಕು ಇದ್ದು ಜಯಿಸಬೇಕು’ ಎಂಬಂತೆ ಸೋಲಿಗೆ ಹೆದರಿ ಕಾರ್ಯ ಪ್ರವೃತ್ತರಾಗದೆ ಇರುವುದು ದಡ್ಡತನ. ಸೋಲೇ ಗೆಲುವಿನ ಸೋಪಾನ ಎಂದರು ಅನುಭಾವಿಗಳು. ಹಾಗಾಗಿ ಅನಗತ್ಯ ಕೀಳರಿಮೆ ಬೇಡ.

ಕೆಲಸ ಕಾರ್ಯಗಳನ್ನು ಎಷ್ಟೇ ಮುತುವರ್ಜಿ ವಹಿಸಿ ಮಾಡಿದರೂ ಒಂದಲ್ಲ ಒಂದು ನ್ಯೂನತೆ ಕಂಡು ಬರುವುದರಿಂದ ಹಮ್ಮಿಕೊಂಡ ಕಾರ್ಯಗಳು ಅರ್ಧಕ್ಕೆ ನಿಲ್ಲುವವು. ಭಗವಂತನನ್ನು ಮನಸಾ ಭಜಿಸಿ.

‘ಮುಷ್ಠಿಕಾಳು ಚೆಲ್ಲಿ ಮೂಟೆ ಕಾಳನ್ನು ಬಾಚು’ ಎನ್ನುವಂತೆ ನಿಮ್ಮಿಂದ ಅಧಿಕ ಖರ್ಚಾದರೂ ಅದು ಮುಂದೊಂದು ದಿನ ದುಪ್ಪಟ್ಟಾಗಿ ಕೈಸೇರಲಿದೆ. ಇದರಿಂದ ನಿಮ್ಮ ಯಶಸ್ಸಿಗೆ ದಾರಿ ಉಂಟಾಗುವುದು.

ಅತ್ಯಂತ ಉತ್ಸಾಹಶಾಲಿಯಾದ ನಿಮಗೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಕಾಣುವಿರಿ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

 

ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಿ. ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಆಂಜನೇಯ ಸ್ತೋತ್ರ ಪಠಿಸಿ.

 

ಏಕತಾನತೆ ದುಡಿಮೆಯಿಂದ ಹೊರಬಂದು ಕೆಲಕಾಲ ಸ್ನೇಹಿತರೊಂದಿಗೆ ಇಲ್ಲವೆ ಸಂಬಂಧಿಕರೊಂದಿಗೆ ಕಾಲ ಕಳೆಯಿರಿ. ಮನಸ್ಸು ಪ್ರಫುಲ್ಲವಾಗುವುದು. ಇದರಿಂದ ನೂತನ ಕಾರ್ಯ ಮಾಡಲು ಹುರುಪು ಬರುವುದು.

 

ಅತಿಯಾದ ಭಾವುಕತೆಯಿಂದ ಸಂಸಾರದ ಗುಟ್ಟನ್ನು ಪರರೊಂದಿಗೆ ಹಂಚಿಕೊಂಡು ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಹಾಗಾಗಿ ಅಪರಿಚಿತರೊಡನೆ ಹೆಚ್ಚಿನ ಮಾತುಕತೆ ಬೇಡ. ಸಂಗಾತಿಯ ಸಕಾಲಿಕ ಎಚ್ಚರಿಕೆ ನುಡಿಯನ್ನು ಆಲಿಸಿ.

 

ಇಷ್ಟಪಟ್ಟ ಕಾರ್ಯಗಳಲ್ಲಿ ಸ್ವಲ್ಪ ಅಡೆತಡೆಗಳು ಎದುರಾಗುವವು. ಆರೋಗ್ಯ ಸಮಸ್ಯೆ ಕಾಡುವುದು. ಗುರುಸ್ತೋತ್ರ ಪಠಿಸಿ ಮತ್ತು ಗುರುಹಿರಿಯರ ಆಶೀರ್ವಾದ ಪಡೆಯಿರಿ.

 

ನೀವಿಗ ಹೆಚ್ಚು ಬಲಶಾಲಿ. ನಿಮ್ಮ ಪರಿಶ್ರಮದಿಂದ ಮುಗಿಯದ ಹಳೆಯ ಕೆಲಸಗಳು ಮುಗಿಯುವವು. ಅಂತೆಯೇ ಹೆಚ್ಚಿನ ಜವಾಬ್ದಾರಿಯು ನಿಮ್ಮನ್ನು ಉತ್ತಮ ಮೂರ್ತಿಯನ್ನಾಗಿ ರೂಪಿಸುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ನಿಮ್ಮ ಕಾರ್ಯವೈಖರಿಯನ್ನು ಹತ್ತಿರದಿಂದ ಕಂಡ ಜನರು ನಿಮಗೆ ವಿಶೇಷ ಗೌರವ ಮರ್ಯಾದೆಯನ್ನು ನೀಡುವರು. ಬಂಧುಗಳು ಉತ್ತಮ ಸಹಕಾರ ನೀಡುವರು. ಆಸ್ತಿಗೆ ಸಂಬಂಧಪಟ್ಟ ತಕರಾರು ಕೊನೆಗೊಳ್ಳುವುದು.

 

 

ಈದಿನ ನಿಮಗೆ ಪೂರಕವಾಗಿದ್ದು ಉತ್ತಮ ಫಲಿತಾಂಶವನ್ನು ಕಾಣುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಖರ್ಚುವೆಚ್ಚಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಆರೋಗ್ಯ ಉತ್ತಮವಾಗಿರುವುದು.

 

ನಿಮ್ಮ ಮನದಿಚ್ಛೆಯಂತೆ ಕಾರ್ಯ ಕೈಗೂಡುವುದು. ಮಿತ್ರರು ನಿಮ್ಮ ಬೆಂಬಲಕ್ಕೆ ನಿಲ್ಲುವರು. ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ. ಇದರಿಂದ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top