ಭಾರತದ ಪ್ರತಿ ಭಾಗದಲ್ಲೂ ಔಷಧವಾಗಿ, ಅಡುಗೆಯಲ್ಲಿ ಇಂಗಿನಷ್ಟು ವ್ಯಾಪಕವಾಗಿ ಇನ್ಯಾವುದನ್ನೂ ಬಳಸುವುದಿಲ್ಲ. ಸಾಮಾನ್ಯವಾಗಿ ಹಿಂದೆ ಹಿರಿಯರು ಈರುಳ್ಳಿ, ಬೆಳ್ಳುಳ್ಳಿ ಸೇವಿಸುತ್ತಿರಲಿಲ್ಲ. ಅಂತಹ ಕಡೆಯಲ್ಲೆಲ್ಲ ಇಂಗಿನ ಬಳಕೆಯನ್ನೇ ಮಾಡುತ್ತಿದ್ದರು. ಇಂಗು ಕೇವಲ ರುಚಿ, ಸುವಾಸನೆಗಷ್ಟೇ ಉಪಯೋಗಿಸುವುದಿಲ್ಲ. ಇದು ಜೀರ್ಣಕ್ಕೆ ತುಂಬ ಸಹಕಾರಿ.
*ಇಂಗು ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಹೊಟ್ಟೆಯಲ್ಲಿ ಗ್ಯಾಸ್ನಿಂದ ಬರುವ ನೋವಿಗೆ ಮನೆಯ ಅಜ್ಜಿ ಮಜ್ಜಿಗೆ-ಇಂಗು-ಉಪ್ಪು ಬೆರೆಸಿ ಕೊಡುವ ಪದ್ಧತಿ ಇಂದಿಗೂ ಇದೆ.
*ಬೇಸಿಗೆಯಲ್ಲಿ ದಾಹ ನಿವಾರಣೆಗೆ ಹಾಗೂ ಉರಿ ಶಮನಕ್ಕೆ ಮಜ್ಜಿಗೆ ಮಾಡುತ್ತಾರೆ.
*ಈ ಮಜ್ಜಿಗೆಗೆ ಕರಿಬೇವು ಹಾಗೂ ಇಂಗು ಬೆರೆಸಿ ಒಗ್ಗರಣೆ ಕೊಡುತ್ತಾರೆ.
*ಇದು ರುಚಿಯಷ್ಟೇ ಅಲ್ಲ ದೇಹಕ್ಕೂ ತಂಪನ್ನು ನೀಡುತ್ತದೆ.
*ಉಬ್ಬಸ ಹಾಗೂ ಗೂರಲು ರೋಗ – ಉಬ್ಬಸ ಹಾಗೂ ಗೂರಲು ರೋಗಗಳ ಸಂದರ್ಭಗಳಲ್ಲಿ ಇದು ಉಪಯೋಗಕ್ಕೆ ಬರಬಲ್ಲದು[by whom?] ಎಂದೂ ಹೇಳಲಾಗುತ್ತದೆ. ಮಕ್ಕಳ ಶೀತಬಾಧೆಗೆ ಜಾನಪದ ಮದ್ದು: ಕಟು ವಾಸನೆ-ಬೀರುವ ಲೇಪವನ್ನಾಗಿ ಮಿಶ್ರ ಮಾಡಿ ಚೀಲದಲ್ಲಿಟ್ಟು ಬಾಧೆ ಪಡುತ್ತಿರುವ ಮಗುವಿನ ಕತ್ತಿನ ಸುತ್ತಾ ಕಟ್ಟಲಾಗುತ್ತದೆ
*ಸೂಕ್ಷ್ಮಜೀವಿವಿರೋಧಿ – ಅಸಾಫೋಟಿಡಾವು ಸಾಂಪ್ರದಾಯಿಕ ವೈದ್ಯದಲ್ಲಿ ಸೂಕ್ಷ್ಮಜೀವಿವಿರೋಧಿಯಾಗಿ ವ್ಯಾಪಕ ಬಳಕೆಯಲ್ಲಿದೆ, ಬೇರೂರಿದ ಗೂರಲು ರೋಗ ಹಾಗೂ ನಾಯಿಕೆಮ್ಮುಗಳ ಚಿಕಿತ್ಸೆಗೆ ಉಪಯುಕ್ತ ಹಾಗೂ ವಾಯುಬಾಧೆಯನ್ನು ಕಡಿಮೆ ಮಾಡುತ್ತದೆಂಬುದು ದಾಖಲಿತ ವಿಷಯವಾಗಿದೆ.
*ಗರ್ಭನಿರೋಧಕ/ಗರ್ಭಸ್ರಾವಕ – ಅಸಾಫೋಟಿಡಾವು ಗರ್ಭನಿರೋಧಕ/ಗರ್ಭಸ್ರಾವಕ ಸ್ವಭಾವಗಳನ್ನೂ ಹೊಂದಿದೆಯೆನ್ನಲಾಗಿದೆ,[೭] ಹಾಗೂ ಪ್ರಾಚೀನ ಫೆರುಲಾ ತಳಿಯ ಸಿಲ್‌ಫಿಯಂಗೆ (ಅಲ್ಲದೇ ಅದರ ಕಡಿಮೆ ಗುಣಮಟ್ಟದ ಬದಲಿಯಾಗಿದೆ) ಸಂಬಂಧಪಟ್ಟಿದೆ.
*ವಾತವನ್ನು ನಿಯಂತ್ರಿಸುವುದು – ಆಯುರ್ವೇದದಲ್ಲಿ, ಅಸಾಫೋಟಿಡಾವನ್ನು ವಾತ ದೋಷವನ್ನು ನಿವಾರಿಸುವ ಉತ್ತಮ ಸಂಬಾರ ದ್ರವ್ಯಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ
*ಜೀರ್ಣಕ್ರಿಯೆಗೆ ಸಹಕಾರಿಯಾಗಲೆಂದು ಉದರದ ಮೇಲೆ ‘ಮಹಾಹಿಂಗು’ ದ್ರಾವಣವನ್ನು ಲೇಪಿಸುವ ಪದ್ಧತಿ ಹೋಮಿಯೋಪಥಿ ವೈದ್ಯ ಪದ್ಧತಿಯಲ್ಲಿದೆ.
*ಮುಖದ ಮೇಲಿನ ಮೊಡವೆಗೆ ಇಂಗನ್ನು ಸ್ವಲ್ಪ ನೀರಿನೊಂದಿಗೆ ಕರಗಿಸಿ ಹಚ್ಚುವುದರಿಂದ ಮೊಡವೆ ನಿವಾರಣೆಯಾಗುತ್ತದೆಂಬುದು ಹಲವು ಅನುಭವಿಗಳ ಮಾತು.
*ಶೀತಜ್ವರಕ್ಕೆ ಸ್ಪ್ಯಾನಿಷ್ ಜನರು ಇಂಗನ್ನು ಬಳಸುತ್ತಿದ್ದರು. ಅಮೆರಿಕದ ವಿಜ್ಞಾನಿಗಳು, ಇದರ ಘಟಕಗಳು ಶೀತಜ್ವರದ ವಿರುದ್ಧದ ಔಷಧ ಅಭಿವೃದ್ಧಿಯಲ್ಲಿ ಪ್ರಮುಖ ಘಟಕವಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.
*ಜಠರವಾಯುವಿರೋಧಿ:ಅಸಾಫೋಟಿಡಾವು ಕರುಳಿನ ಸ್ಥಳೀಯ ಕಿರುವನಸ್ಪತಿಗಳ ಬೆಳವಣಿಗೆಯನ್ನು ತಡೆಹಿಡಿದು, ವಾಯುಬಾಧೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಚಿಪ್ಸಿನಲ್ಲೂ ಇಂಗಿನದೇ ಪ್ರಮುಖ ಪಾತ್ರ. ಬಾಳೇಕಾಯಿ ಚಿಪ್ಸು, ಹಲಸಿನಕಾಯಿ ಚಿಪ್ಸಿಗೆ ಇಂಗಿಲ್ಲದಿದ್ದರೆ ರುಚಿಯೇ ಇರುವುದಿಲ್ಲ. ಚಿಪ್ಸ್ ಕರಿದು ತೆಗೆದ ನಂತರ ಉಪ್ಪು-ಖಾರದ ಜತೆ ಇಂಗಿನ ಪುಡಿಯನ್ನೂ ಮಿಶ್ರ ಮಾಡುತ್ತಾರೆ. ಇದು ಚಿಪ್ಸಿಗೆ ಹೆಚ್ಚಿನ ರುಚಿ ಹಾಗೂ ಪರಿಮಳವನ್ನು ಕೊಡುತ್ತದೆ. ಉದ್ದಿನ ವಡೆ ಹಾಗೂ ಉದ್ದಿನ ಬೋಂಡಗಳಲ್ಲೂ ಇಂಗಿಲ್ಲದಿದ್ದರೆ ರುಚಿ ಇಲ್ಲ. ಇಂಗನ್ನು ವೈದ್ಯ ಚಿಕಿತ್ಸೆಯಲ್ಲಿ ಬಳಸುವ ಪದ್ಧತಿ ಭಾರತದಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶಗಳಲ್ಲೂ ಇದರ ಚಿಕಿತ್ಸೆ ಮಾಡುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
