fbpx
ಸಮಾಚಾರ

ಸೆಪ್ಟೆಂಬರ್ 09: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಸೆಪ್ಟೆಂಬರ್ 9, 2023 ಶನಿವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದಶಮೀ : Sep 08 05:30 pm – Sep 09 07:18 pm; ಏಕಾದಶೀ : Sep 09 07:18 pm – Sep 10 09:28 pm
ನಕ್ಷತ್ರ : ಆರುಧ್ರ: Sep 08 12:09 pm – Sep 09 02:26 pm; ಪುನರ್ವಸು: Sep 09 02:26 pm – Sep 10 05:06 pm
ಯೋಗ : ವ್ಯತಿಪಾತ: Sep 08 10:07 pm – Sep 09 10:35 pm; ವಾರಿಯ: Sep 09 10:35 pm – Sep 10 11:19 pm
ಕರಣ : ವಾಣಿಜ: Sep 08 05:30 pm – Sep 09 06:21 am; ವಿಷ್ಟಿ: Sep 09 06:21 am – Sep 09 07:18 pm; ಬಾವ: Sep 09 07:18 pm – Sep 10 08:21 am

Time to be Avoided
ರಾಹುಕಾಲ : 9:14 AM to 10:45 AM
ಯಮಗಂಡ : 1:48 PM to 3:19 PM
ದುರ್ಮುಹುರ್ತ : 07:49 AM to 08:38 AM
ವಿಷ : 03:46 AM to 05:33 AM
ಗುಳಿಕ : 6:12 AM to 7:43 AM

Good Time to be Used
ಅಮೃತಕಾಲ : None
ಅಭಿಜಿತ್ : 11:52 AM to 12:41 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:21 PM

 

 

 

ಬಂಧು ಬಳಗದವರೊಡನೆ ಒಡನಾಟ. ಹಳೆಯ ನೆನಪುಗಳು ಮರುಕಳಿಸುವುವು. ಸಂಭ್ರಮದ ವಾತಾವರಣ. ಸಂತೋಷದ ಭರದಲ್ಲಿ ಇನ್ನೊಬ್ಬರ ಮನ ನೋಯದಂತೆ ಮಾತನಾಡದಿರುವುದೇ ಕ್ಷೇಮ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಅನಿರೀಕ್ಷಿತವಾಗಿ ಕೆಲವು ಅಡಚಣೆಗಳು ಎದುರಾಗುವುದರಿಂದ ಯೋಜಿತ ಕೆಲಸ-ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ದೂರದ ಪ್ರಯಾಣವನ್ನು ಮುಂದೂಡುವುದು ಒಳಿತು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಆರ್ಥಿಕ ಅಡೆತಡೆಗಳು ಹಂತಹಂತವಾಗಿ ನಿವಾರಣೆ ಆಗಲಿದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶಾರೀರಿಕ ಆಯಾಸ ತೋರಿಬಂದರೂ ದಿನದ ಅಂತ್ಯದಲ್ಲಿ ಕೆಲಸಗಳಲ್ಲಿ ಪ್ರಗತಿ ತೋರುವುದು.

ನಿಮ್ಮ ಒಳ್ಳೆಯತನದ ದುರುಪಯೋಗವಾಗದಂತೆ ಎಚ್ಚರ ವಹಿಸಿರಿ. ಅವಶ್ಯಕತೆಗಳಿಗಿಂತಲೂ ಹೆಚ್ಚಾಗಿ ಹಣಕಾಸು ನೆರವು ದೊರೆಯುವುದು. ಸಂತೋಷಕರ ಸುದ್ದಿಯನ್ನು ಕೇಳುವಿರಿ.

 

ಯಾವುದೇ ಋುಣಾತ್ಮಕ ವಿಚಾರಗಳಿಗೆ ಕಿವಿಗೊಡದೆ ಇರುವುದು ಒಳಿತು. ಅಂತೆಯೆ ವಾಹನದಲ್ಲಿ ಸಂಚರಿಸುವಾಗ ಶಿರಸ್ತ್ರಾಣ ಧರಿಸದೆ ಇದ್ದುದಕ್ಕೆ ದಂಡ ತೆರಬೇಕಾಗುವುದು. ಈ ಬಗ್ಗೆ ಮುಂಚೆಯೆ ಆಲೋಚಿಸುವುದು ಒಳ್ಳೆಯದು.

 

ನಿಮ್ಮ ದಾರಿ ಸ್ಪಷ್ಟವಾಗಿದೆ. ಯಾರೇನೇ ಹೇಳಲಿ. ಯಾವುದೇ ಗೊಂದಲಕ್ಕೆ ಬೀಳಬೇಡಿ. ಮತ್ತು ನಿರ್ಧಾರ ಬದಲಿಸಬೇಡಿ. ಶುಭ ಸಂಗತಿಗಳು ನಿಮ್ಮನ್ನು ಎದುರು ನೋಡುತ್ತಿವೆ. ಗ್ರಹಗಳು ನಿಮ್ಮನ್ನು ಹರಸಲು ಕಾದು ಕುಳಿತಿವೆ.

 

ಕೆಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡಿಸುತ್ತಿದ್ದ ಗೆಲುವು ಇಂದು ತಾನಾಗಿಯೇ ನಿಮ್ಮನ್ನು ಅರಸಿಕೊಂಡು ಬರುವುದು. ಇಂದಿನ ಪರಿಸ್ಥಿತಿ ನಿಮ್ಮ ಪರವಾಗಿಯೇ ಇದೆ. ನೀವು ಮಾಡಬೇಕೆಂದಿರುವ ಕೆಲಸವನ್ನು ಎರಡು ಬಾರಿ ಚಿಂತಿಸಿ ಮುಂದಡಿ ಇಡಿರಿ.

 

ಹಿಂದಿನ ದಾರಿಯನ್ನು ಒಮ್ಮೆ ನೋಡಿಕೊಂಡು ಮುಂದಡಿ ಇಡುವುದರಲ್ಲಿ ಜಾಣತನ ಅಡಗಿದೆ. ಜೀವನದಲ್ಲಿ ಅಂತಹ ಏರಿಳಿತಗಳು ಇಲ್ಲ. ಮುಂದಾಲೋಚನೆಯಿಂದ ಹಮ್ಮಿಕೊಳ್ಳುವ ಕೆಲಸ ಕಾರ್ಯಗಳಿಗೆ ದೈವದ ಬೆಂಬಲವಿರುತ್ತದೆ.

 

ನಿಮಗೂ ಸಂಕಷ್ಟಗಳಿಗೂ ಏನೋ ಸಂಬಂಧ. ನೀವು ಕಳಚಿಕೊಳ್ಳಲು ಯತ್ನಿಸಿದರೂ ಹೊಸ ಹೊಸ ಸಂಕಷ್ಟಗಳು ನಿಮ್ಮನ್ನು ಸುತ್ತಿಕೊಳ್ಳುವವು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿರಲಿ. ಸಂಗಾತಿ ಜೊತೆಯಲ್ಲಿ ವಾಗ್ವಾದಕ್ಕೆ ಇಳಿಯದಿರುವುದೇ ಕ್ಷೇಮಕರ.

ಈ ದಿನ ತಾಳ್ಮೆಯ ಪರೀಕ್ಷೆಯ ಕಾಲ. ಕೌಟುಂಬಿಕ ಜೀವನದಲ್ಲಿ ಮಾತ್ರವಲ್ಲದೆ ಸಾಮಾಜಿಕವಾಗಿಯೂ ಹಲವು ಪರೀಕ್ಷೆಗಳು ಎದುರಾಗುವುದು. ಧೈರ್ಯಗೆಡಬೇಡಿ. ಅಗತ್ಯ ಇರುವ ಸಂದರ್ಭದಲ್ಲಿ ಕೊಂಚ ಕಾಠಿಣ್ಯ ನಿಲುವು ಪ್ರದರ್ಶಿಸುವುದು ಒಳ್ಳೆಯದು.

 

 

ಹೊಸ ಹೊಸ ವಿಚಾರಗಳು ತಲೆಯಲ್ಲಿ ತುಂಬಿವೆ. ನಿಮ್ಮ ಹುಮ್ಮಸ್ಸು ಇತರರಿಗೂ ಸ್ಫೂರ್ತಿ ತುಂಬುವುದು. ಮತ್ತು ಅದರಿಂದ ಪರೋಕ್ಷ ವಾಗಿ ನಿಮಗೇ ಅನುಕೂಲವಾಗುವುದು. ಬಂದ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಳ್ಳಿರಿ.

 

ದೈವಕೃಪೆ ಇರುವುದರಿಂದ ನೀವು ನಡೆದದ್ದೇ ದಾರಿ. ಕೈಗೊಳ್ಳುವ ಕೆಲಸಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ನಿಮ್ಮ ಒಂದೇ ಒಂದು ದೌರ್ಬಲ್ಯ ಎಂದರೆ ದುಡುಕುವುದು. ತಾಳ್ಮೆ ಬೆಳೆಸಿಕೊಳ್ಳಲು ಯೋಗ ಧ್ಯಾನದ ಮೊರೆ ಹೋಗಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top