fbpx
ಸಮಾಚಾರ

ಸೆಪ್ಟೆಂಬರ್ 10: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಸೆಪ್ಟೆಂಬರ್ 10, 2023 ಭಾನುವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಏಕಾದಶೀ : Sep 09 07:18 pm – Sep 10 09:28 pm; ದ್ವಾದಶೀ : Sep 10 09:28 pm – Sep 11 11:52 pm
ನಕ್ಷತ್ರ : ಪುನರ್ವಸು: Sep 09 02:26 pm – Sep 10 05:06 pm; ಪುಷ್ಯ: Sep 10 05:06 pm – Sep 11 08:01 pm
ಯೋಗ : ವಾರಿಯ: Sep 09 10:35 pm – Sep 10 11:19 pm; ಪರಿಘ: Sep 10 11:19 pm – Sep 12 12:13 am
ಕರಣ : ಬಾವ: Sep 09 07:18 pm – Sep 10 08:21 am; ಬಾಲವ: Sep 10 08:21 am – Sep 10 09:28 pm; ಕುಲವ: Sep 10 09:28 pm – Sep 11 10:39 am

Time to be Avoided
ರಾಹುಕಾಲ : 4:50 PM to 6:21 PM
ಯಮಗಂಡ : 12:16 PM to 1:47 PM
ದುರ್ಮುಹುರ್ತ : 04:43 PM to 05:32 PM
ವಿಷ : 02:04 AM to 03:52 AM
ಗುಳಿಕ : 3:18 PM to 4:50 PM

Good Time to be Used
ಅಮೃತಕಾಲ : 02:26 PM to 04:13 PM
ಅಭಿಜಿತ್ : 11:52 AM to 12:41 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:21 PM

 

 

ಮೇಷ (Mesha)

ಮಾನಸಿಕವಾಗಿ ಸಣ್ಣ ಪುಟ್ಟ ಕಿರಿಕಿರಿಗಳು ಇಂದು ಕಾಡುವ ಸಾಧ್ಯತೆ. ವಾಹನ ಚಾಲನೆ ವೇಳೆ ರಸ್ತೆಯ ಕಡೆಗೆ ನಿಗಾ ಇರಲಿ. ಆರೋಗ್ಯ ಸಮಸ್ಯೆ ಬಗೆಹರಿಯುವುದು. ಆಹಾರ-ವಿಹಾರದಲ್ಲಿ ಎಚ್ಚರ. ಕೆಲವರಿಗೆ ಉದರಶೂಲೆ ಕಾಡುವ ಸಾಧ್ಯತೆ ಇದೆ.

 

ವೃಷಭ (Vrushabha)

ಈದಿನ ವೃತ್ತಿಗೆ ಸಂಬಂಧಿಸಿದಂತೆ ಉತ್ತಮ ಭರವಸೆ ನೀಡುವ ದಿನವಾಗಿದೆ. ಸಕಾರಾತ್ಮಕ ಚಿಂತನೆಯು ಯಶಸ್ಸು ತಂದುಕೊಡುವುದು. ಊರು ಎಂದರೆ ಹೊಲಗೇರಿ ಇರುವಂತೆ ನಿಮ್ಮನ್ನು ಕಂಡರೆ ಆಗದವರು ಇದ್ದಾರೆ. ಈಬಗ್ಗೆ ಎಚ್ಚರ ಅಗತ್ಯ.

 

ಮಿಥುನ (Mithuna)

ದಿಢೀರನೆ ಪ್ರಯಾಣ ಮಾಡಬೇಕಾಗಿ ಬರುವುದರಿಂದ ಖರ್ಚುಗಳು ಏಕಾಏಕಿ ಹೆಚ್ಚಾಗುವುದು. ಹಣಕಾಸಿನ ವಿಚಾರದಲ್ಲಿ ಈದಿನ ಕೈಗಡ ಪಡೆಯಬೇಕಾಗುವುದು. ನಿಮ್ಮ ಆತ್ಮೀಯ ಸ್ನೇಹಿತ ಈ ಸಂದರ್ಭದಲ್ಲಿ ಸಹಕಾರಿಯಾಗಿ ಬೆಂಬಲ ಸೂಚಿಸುವರು.

 

ಕರ್ಕ (Karka)

ಸ್ನೇಹಿತರು ಮತ್ತು ಬಂಧುಗಳ ಜತೆಗಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕವಾಗಿ ಸಂಕಷ್ಟದಿಂದ ಪಾರಾಗುವ ದಿನ. ನಿಮ್ಮ ಧೋರಣೆಯಲ್ಲೂ ಸಾಕಷ್ಟು ಬದಲಾವಣೆಗಳು ಕಂಡು ಬರುವುದು. ಕೌಟುಂಬಿಕ ಸದಸ್ಯರ ಬೆಂಬಲ ದೊರೆಯುವುದು.

 

ಸಿಂಹ (Simha)

ಗುಪ್ತ ಶತ್ರುಗಳಿಂದ ಎಚ್ಚರಿಕೆಯಿಂದ ಇರಿ. ಸಮಾಜದ ಜನರಿಂದ ಅಪಮಾನ ಪ್ರಸಂಗ ಎದುರಾಗುವುದು. ಇದಕ್ಕೆ ಪೂರಕವಾಗಿ ಮಡದಿ ಮಕ್ಕಳೂ ನಿಮ್ಮ ವಿಚಾರಧಾರೆಯ ವಿರುದ್ಧ ತಿರುಗಿ ನಿಲ್ಲುವರು. ಮನೋನಿಯಾಮಕ ರುದ್ರ ದೇವರನ್ನು ಸ್ಮರಿಸಿರಿ.

 

ಕನ್ಯಾರಾಶಿ (Kanya)

ಪರೋಪಕಾರದ ಕೆಲಸಗಳಿಂದ ಸಾಮಾಜಿಕ ಮನ್ನಣೆ ದೊರೆಯುವುದು. ಬಾಯಿ ತಪ್ಪಿ ಆಡಿದ ಮಾತಿನಿಂದಾಗಿ ಜರೂರು ಆಗಬೇಕಾದ ಕೆಲಸಕ್ಕೆ ಅಡೆತಡೆ ಉಂಟಾಗುವುದು. ಬಂಧು ಬಳಗದವರಿಂದ ಸಹಾನುಭೂತಿ ದೊರೆಯುವುದು.

 

ತುಲಾ (Tula)

ಕಲಾ ಕೌಶಲ್ಯದಲ್ಲಿ ಪ್ರಗತಿ ಹಾಗೂ ಮೆಚ್ಚುಗೆ ವ್ಯಕ್ತವಾಗುವುದು. ಕೌಟುಂಬಿಕ ಸೌಖ್ಯದಲ್ಲಿ ಉತ್ತಮ. ಉದ್ಯೋಗದಲ್ಲಿ ಪ್ರಗತಿ. ಬೆಲೆಯುಳ್ಳ ವಸ್ತು-ಒಡವೆಗಳ ಪ್ರಾಪ್ತಿ. ನೂತನ ವಾಹನ ಖರೀದಿಯ ಯೋಗವಿರುತ್ತದೆ.

 

ವೃಶ್ಚಿಕ (Vrushchika)

ಮಾನಸಿಕ ನೆಮ್ಮದಿ ದೊರೆಯುವುದು. ಕೌಟುಂಬಿಕ ಜೀವನದಲ್ಲಿ ಸಾಮರಸ್ಯದಿಂದ ಇರಲು ದೇವಿಯ ಪ್ರಾರ್ಥನೆ ಮಾಡಿ. ಕಣ್ಣಿನ ತೊಂದರೆ ಎದುರಾಗುವ ಸಂದರ್ಭವಿದೆ. ಮಡದಿ ಮಕ್ಕಳು ನಿಮ್ಮ ಸಂತಸದಲ್ಲಿ ಪಾಲ್ಗೊಳ್ಳುವರು.

 

ಧನು ರಾಶಿ (Dhanu)

ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಇಂದು ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ. ಗುರು ಹಿರಿಯರ ಸಲಹೆ ಪಡೆಯಿರಿ.

 

ಮಕರ (Makara)

ಬಯಸಿದ ಕಾರ‍್ಯವು ಈಡೇರಲು ಅಧಿಕ ಶ್ರಮ ಪಡುತ್ತಿದ್ದೀರಿ. ಆದರೆ ಯಶಸ್ಸು ಮರೀಚಿಕೆ ಆಗುತ್ತಿದೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿರಿ. ಒಳಿತಾಗುವುದು.

 

ಕುಂಭರಾಶಿ (Kumbha)

ಇಟ್ಟಗುರಿ ಬಿಟ್ಟ ಬಾಣ ನೇರವಾಗಿ ಇರಬೇಕು. ಆದರೆ ನಿಮ್ಮ ರಾಶಿಯಲ್ಲಿ ಕುಳಿತ ಶನಿಮಹಾರಾಜರು ನಿಮ್ಮಲ್ಲಿ ಸ್ವಲ್ಪ ಆಲಸ್ಯವನ್ನು ತುಂಬುವರು. ಹಾಗಾಗಿ ಈದಿನ ನಿರ್ದಿಷ್ಟ ಗುರಿಯನ್ನು ತಲುಪಲಾರಿರಿ.

 

ಮೀನರಾಶಿ (Meena)

ಲವೊಮ್ಮೆ ನಿಮ್ಮಿಂದ ತಪ್ಪಾದರೂ ನೀವು ಕ್ಷ ಮೆಯಾಚಿಸುವುದಿಲ್ಲ. ಇದರಿಂದಾಗಿ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು. ನಡೆನುಡಿಯಲ್ಲಿ ಸೌಮ್ಯತೆ ಇರಲಿ.ಲವೊಮ್ಮೆ ನಿಮ್ಮಿಂದ ತಪ್ಪಾದರೂ ನೀವು ಕ್ಷ ಮೆಯಾಚಿಸುವುದಿಲ್ಲ. ಇದರಿಂದಾಗಿ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು. ನಡೆನುಡಿಯಲ್ಲಿ ಸೌಮ್ಯತೆ ಇರಲಿ.

  

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top