ಸತತ ಎರಡನೇ ಬಾರಿಗೆ ಏಷ್ಯಾಕಪ್ ನಲ್ಲಿ ಮಳೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟಿಗರು ಮತ್ತು ಅಭಿಮಾನಿಗಳು ನಿರಾಸೆ ಅನುಭವಿಸಿದರು. ಕ್ಯಾಂಡಿಯಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ಅಪೂರ್ಣವಾಗಿತ್ತು. ಆದರೆ, ಸೆಪ್ಟೆಂಬರ್ 10ರ ಭಾನುವಾರದಂದು ಕೊಲಂಬೊದಲ್ಲಿ ನಡೆದ ಸೂಪರ್-4 ಸುತ್ತಿನ ಪಂದ್ಯದಲ್ಲಿ ಮಳೆಯ ಕಾರಣ, ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಬೇಕಾಯಿತು. ಭಾನುವಾರ ಸಂಜೆ ನಡೆದ ಪಂದ್ಯ ಆಟಗಾರರು ಹಾಗೂ ಅಭಿಮಾನಿಗಳಿಗೆ ಮುಜುಗರ ಉಂಟು ಮಾಡಿತ್ತು. ಆದರೆ, ಪಂದ್ಯ ಮುಂದೂಡಿದ ಬಳಿಕ ಎಲ್ಲರ ಮನ ಗೆಲ್ಲುವ ದೃಶ್ಯ ಕಂಡುಬಂತು. ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಇತ್ತೀಚೆಗೆ ತಂದೆಯಾದ ಪ್ರಸಿದ್ಧ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.
ಟೀಂ ಇಂಡಿಯಾ ಸ್ಟಾರ್ ವೇಗಿ ಬುಮ್ರಾ ಮೊದಲ ಬಾರಿಗೆ ತಂದೆಯಾದರು. ಅವರ ಪತ್ನಿ ಸಂಜನಾ ಗಣೇಶನ್ ಸೆಪ್ಟೆಂಬರ್ 4 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಜೀವನದಲ್ಲಿ ಈ ವಿಶೇಷ ಸಂದರ್ಭಕ್ಕಾಗಿ, ಏಷ್ಯಾ ಕಪ್ ಮಧ್ಯೆ ಬುಮ್ರಾ ಭಾರತಕ್ಕೆ ಮರಳಿದರು. ಇದರಿಂದಾಗಿ 4ರಂದು ನೇಪಾಳ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಮಗ ಅಂಗದ್‌ನ ಜನನದ ಶುಭ ಸುದ್ದಿಯನ್ನು ಬುಮ್ರಾ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
Spreading joy 🙌
Shaheen Afridi delivers smiles to new dad Jasprit Bumrah 👶🏼🎁#PAKvIND | #AsiaCup2023 pic.twitter.com/Nx04tdegjX
— Pakistan Cricket (@TheRealPCB) September 10, 2023
ಸತತ ಎರಡನೇ ಬಾರಿಗೆ ಏಷ್ಯಾಕಪ್ ನಲ್ಲಿ ಮಳೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟಿಗರು ಮತ್ತು ಅಭಿಮಾನಿಗಳು ನಿರಾಸೆ ಅನುಭವಿಸಿದರು. ಕ್ಯಾಂಡಿಯಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ಅಪೂರ್ಣವಾಗಿತ್ತು. ಆದರೆ, ಸೆಪ್ಟೆಂಬರ್ 10ರ ಭಾನುವಾರದಂದು ಕೊಲಂಬೊದಲ್ಲಿ ನಡೆದ ಸೂಪರ್-4 ಸುತ್ತಿನ ಪಂದ್ಯದಲ್ಲಿ ಮಳೆಯ ಕಾರಣ, ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಬೇಕಾಯಿತು. ಭಾನುವಾರ ಸಂಜೆ ನಡೆದ ಪಂದ್ಯ ಆಟಗಾರರು ಹಾಗೂ ಅಭಿಮಾನಿಗಳಿಗೆ ಮುಜುಗರ ಉಂಟು ಮಾಡಿತ್ತು. ಆದರೆ, ಪಂದ್ಯ ಮುಂದೂಡಿದ ಬಳಿಕ ಎಲ್ಲರ ಮನ ಗೆಲ್ಲುವ ದೃಶ್ಯ ಕಂಡುಬಂತು. ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಇತ್ತೀಚೆಗೆ ತಂದೆಯಾದ ಪ್ರಸಿದ್ಧ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.
ಟೀಂ ಇಂಡಿಯಾ ಸ್ಟಾರ್ ವೇಗಿ ಬುಮ್ರಾ ಮೊದಲ ಬಾರಿಗೆ ತಂದೆಯಾದರು. ಅವರ ಪತ್ನಿ ಸಂಜನಾ ಗಣೇಶನ್ ಸೆಪ್ಟೆಂಬರ್ 4 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಜೀವನದಲ್ಲಿ ಈ ವಿಶೇಷ ಸಂದರ್ಭಕ್ಕಾಗಿ, ಏಷ್ಯಾ ಕಪ್ ಮಧ್ಯೆ ಬುಮ್ರಾ ಭಾರತಕ್ಕೆ ಮರಳಿದರು. ಇದರಿಂದಾಗಿ 4ರಂದು ನೇಪಾಳ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಮಗ ಅಂಗದ್‌ನ ಜನನದ ಶುಭ ಸುದ್ದಿಯನ್ನು ಬುಮ್ರಾ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ