H1N1 ಆಯ್ತು, ಕೊರೋನಾ ವೈರಸ್ ಬಂದು ಹೋಯ್ತು.. ಈಗ ಅದಕ್ಕಿಂತಲೂ ಮಾರಣಾಂತಿಕವಾದ ನಿಪಾ ವೈರಸ್ ದೇಶದ ಜನರನ್ನೇ ಬೆಚ್ಚಿಬೀಳಿಸಿದೆ. ಈಗಾಗ್ಲೇ ಕೇರಳದಲ್ಲಿ ನಿಫಾ ವೈರಸ್‌ಗೆ ಹತ್ತಾರು ಮಂದಿ ಬಲಿಯಾಗಿದ್ದು ಭೀತಿ ಮೂಡಿಸಿದೆ. ಹಂದಿ, ಬಾವುಲಿ ಸೋಂಕಿನಿಂದ ಬರುವ ವೈರಸ್ ಕಡಿಮೆ ಅವಧಿಯಲ್ಲಿಯೇ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ನಿಫಾ ವೈರಸ್ ಅಥವಾ ಬಾವಲಿ ಜ್ವರದ ಹೇಗೆ ಬರುತ್ತದೆ ಇದರ ಲಕ್ಷಣಗಳೇನು ಎಂಬುವುದರ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ:
‘ನಿಫಾ’ ವೈರಸ್ ಅಥವಾ ಬಾವುಲಿ ಜ್ವರ ಹೇಗೆ ಹರಡುತ್ತೆ?
1.ಇದು ಬಾವುಲಿ ಮತ್ತು ಹಂದಿಯಿಂದ ಹರಡುತ್ತದೆ. ಪಕ್ಷಿಗಳು ತಿಂದು ಹಾಕಿರುವ ಹಣ್ಣುಗಳನ್ನು ಸೇವಿಸುವುದರಿಂದ ಅದರಲ್ಲೂ ಪ್ರಮುಖವಾಗಿ ಬಾವಲಿಗಳು ತಿಂದು ಬಿಟ್ಟಿರುವ ಹಣ್ಣುಗಳನ್ನು ತಿನ್ನುವುದರಿಂದ ಬಾವುಲಿ ಜ್ವರ ಹರಡುತ್ತದೆ..ಈ ಸೋಂಕು ಪ್ರಾಣಿಗಳಲ್ಲೂ ಹರಡಲಿದ್ದು, ಅಂತಹ ಪ್ರಾಣಿಗಳ ದೇಹದಿಂದ ಹೊರಹೊಮ್ಮುವ ಉಸಿರು ಅಥವಾ ಎಂಜಲು ಮನುಷ್ಯನ ದೇಹ ಸೇರಿದರೆ ಆವರಿಗೂ ಆ ವೈರಸ್ ಅಂಟುತ್ತದೆ. ಸೋಂಕು ಅಂಟಿದ ಮನುಷ್ಯನ ದೇಹದಿಂದ ಹೊರಹೊಮ್ಮುವ ಉಸಿರು ಅಥವಾ ದ್ರವ (ಎಂಜಲು, ಬೆವರು, ಕೆಮ್ಮು ಅಥವಾ ಸೀನಿದಾಗ) ದಿಂದ ಒಬ್ಬರಿಂದ ಒಬ್ಬರಿಗೆ ಬಹುಬೇಗನೆ ಹರಡುತ್ತದೆ.
2. ಬಹುತೇಕ ಹಂದಿ ತಿನ್ನುವವರು ಹಾಗೂ ಹಂದಿಗಳೊಂದಿಗೆ ಕೆಲಸ ಮಾಡುವವರು ಹೆಚ್ಚು ಎಚ್ಚರಿಕೆಗಳಿಗೆ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದು ಅಂತಹವರು ಬಹಳ ಎಚ್ಚರಿಕೆಯಿಂದಿರಬೇಕು.
ನಿಫಾ ವೈರಸ್ ಅಥವಾ ಬಾವುಲಿ ಜ್ವರದ ಲಕ್ಷಣಗಳೇನು?.
1.ದೇಹಕ್ಕೆ ಪ್ರವೇಶಿಸಿದ 7-14 ದಿನಗಳಲ್ಲಿ ನಿಶ್ಚಲವಾಗಿರುವ ವೈರಸ್, ಅನಂತರ ವೇಗವಾಗಿ ಹರಡುತ್ತದೆ.
2.ಇದ್ದಕ್ಕಿದ್ದಂತೆ ಜ್ವರ ಬರುವುದು. ತಲೆನೋವು, ಮಾಂಸಖಂಡಗಳ ನೋವು, ತಲೆ ಸುತ್ತುವಿಕೆ. ವಾಂತಿ, ಬಳಿಕ ಅತಿಯಾದ ಸುಸ್ತು, ಮಿದುಳು ಊತ, ಉಸಿರು ಕಡಿಮೆ ಯಾಗುವುದು, ರಕ್ತದೊತ್ತಡ ಕಡಿಮೆಯಾಗುವುದು, ತಲೆನೋವು, ಮಿದುಳಿನ ಉರಿಯೂತ, ಶ್ವಾಸಕೋಶ ಸೋಂಕು,
3. ಕೆಲವೊಮ್ಮೆ ರೋಗಿ ಸಂಪೂರ್ಣ ಪ್ರಜ್ಞೆ ಕಳೆದುಕೊಂಡು ಅಂತಿಮವಾಗಿ ಕೋಮಾಗೂ ತೆರಳಬಹುದು.
ಮುನ್ನೆಚ್ಚರಿಕೆಯ ಕ್ರಮಗಳೇನು?
1.ಪ್ರಾಣಿ ಅಥವಾ ಪಕ್ಷಿಗಳು ತಿಂದಿರುವ ಹಾಗೂ ಮರದ ಕೆಳಗೆ ಬಿದ್ದ ಹಣ್ಣುಗಳನ್ನು ತಿನ್ನಬಾರದು.
2.ಬಾವಲಿಗಳು ಹೆಚ್ಚಾಗಿರುವ ಕಡೆಯಲ್ಲಿ ಹೆಚ್ಚು ಓಡಾಡದೇ ಅವುಗಳಿಂದ ಆದಷ್ಟು ದೂರವಿರಬೇಕು.
3.ಹಂದಿಗಳಿಂದ ದೂರವಿರುವುದು. ಹಂದಿಮಾಂಸದ ಸೇವನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದರೆ ಉತ್ತಮ,
4.ಮನೆಯಲ್ಲೇ ತಯಾರಿಸಿದ ಸ್ವಚ್ಛವಾದ ಆಹಾರ ಸೇವನೆ ಮಾಡುವುದು, ರಸ್ತೆಬದಿ ಹೋಟೆಲ್ ಊಟದಿಂದ ಆದಷ್ಟು ದೂರವಿದ್ದರೆ ಉತ್ತಮ. ಅಲ್ಲದೆ ಖಚ್ಚಾ ಹಣ್ಣುಗಳ ಸೇವನೆ ತಡೆಯುವುದು. ಆಹಾರ ಸೇವನೆಗೂ ಮುನ್ನ ಕೈಗಳ್ಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
5. ನೆಗಡಿ, ಕೆಮ್ಮು, ಜ್ವರ ಇರುವವರಿಂದ ಆದಷ್ಟು ದೂರ ಇರಬೇಕು. ಅಂತವರು ನಿಮ್ಮ ಸುತ್ತಮುತ್ತ ಇದ್ದರೇ ನೀವು ಮುಖ ಹಾಗು ಮೂಗಿಗೆ ಮಾಸ್ಕ್ ಹಾಕಿಕೊಳ್ಳುವುದು ಉತ್ತಮ.
.
6.ಬಾವಲಿಗಳು ಹೆಚ್ಚು ನೆಲೆಸಿರುವ ಜಾಗಗಳಲ್ಲಿ ಸೇಂದಿ, ಹೆಂಡ ಸೇರಿದಂತೆ ಇನ್ನಿತರೆ ಕಳಪೆ ಮದ್ಯ ಸೇವಿಸಬಾರದು.
7.ನೆಗಡಿ, ಕೆಮ್ಮು,ಜ್ವರ ಬಂದಾಕ್ಷಣ ಆಸ್ಪತ್ರೆಗೆ ಹೋಗಿ ತಕ್ಷಣ ವೈದ್ಯರ ಮುಖಾಂತರ ರಕ್ತ ಪರೀಕ್ಷೆ ಮಾಡಿಸಬೇಕು.
ಈ ವೈರಸ್ ನಿಂದಾಗಿ ಕೇರಳದ ಕಲ್ಲಿಕೋಟೆ ಜಿಲ್ಲೆಯ ಚಾಂಗ್ರೋತ್ ಗ್ರಾಮದಲ್ಲಿ ಕಳೆದ ವಾರ ಒಂದೇ ಗ್ರಾಮದ ಮೂವರು ಮೃತಪಟ್ಟಿದ್ದು ಸೋಂಕು ಹರಡುವ ಭೀತಿಯಿಂದ ಕರ್ನಾಟಕದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದಲ್ಲಿ ಸದ್ಯಕ್ಕೆ ಭಯವಿಲ್ಲವಾದರೂ ನಮ್ಮ ಸೇಫ್ಟಿಯಲ್ಲಿ ನಾವಿದ್ರೆ ಒಳ್ಳೆಯದು,.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
