ಪ್ರಪಂಚದಲ್ಲೇ ಅತ್ಯಂತ ಸಾಮಾನ್ಯ ಮನೆಯ ಕೀಟಗಳೆಂದರೆ ಜಿರಳೆಗಳು, ಹೆಚ್ಚಾಗಿ ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ನಿಮ್ಮ ಮನೆಗೆ ಬರುವ ಅತಿಥಿಗಳು ಈ ಸಣ್ಣ ಜೀವಿಗಳು ನೋಡಲು ಕೊಳಕು ಮಾತ್ರವಲ್ಲ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಕೂಡ ರೋಗಗಳನ್ನು ಉಂಟಾಗುವ ವಿಭಿನ್ನ ಸೂಕ್ಷ್ಮಾಣು ಜೀವಿಗಳು ಮತ್ತು ಬ್ಯಾಕ್ಟೀರಿಗಳನ್ನೂ ನಿಮ್ಮ ಮನೆಗೆ ಹೊತ್ತು ತರುತ್ತವೆ .
ಜಿರಳೆಗಳನ್ನು ತೊಡೆದುಹಾಕಲು ಈ 10 ವಿಧಾನಗಳನ್ನು ಅನುಸರಿಸಿ .
ಬೋರಾಕ್ಸ್ ಮತ್ತು ಸಕ್ಕರೆ
ಬೋರಾಕ್ಸ್ ಜಿರಳೆಗಳ ಬೆಳವಣಿಗೆಯನ್ನು ನಿಯಂತ್ರಿಸಲು ಮತ್ತು ಇತರ ಕೀಟಗಳನ್ನು ಮನೆಯ ಒಳಗೆ ಪ್ರವೇಶ ಮಾಡದಂತೆ ಮಾಡುವ ಉತ್ತಮ ಪರಿಹಾರ ,
ಬೋರಾಕ್ಸ್ ಕೀಟಗಳ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ ಅಂತಿಮವಾಗಿ ಕೀಟಗಳ ಸಾವಿಗೆ ಕಾರಣವಾಗುತ್ತದೆ.
ಬೋರಾಕ್ಸ್ ಮೂರು ಭಾಗ ಮತ್ತು ಸಕ್ಕರೆ ಒಂದು ಭಾಗವನ್ನು ಮಿಶ್ರಣ ಮಾಡಿ ಜಿರಳೆಗಳು ಓಡಾಡುವ ಜಾಗದಲ್ಲಿ ರಾತ್ರಿ ಹೊತ್ತು ಇರಿಸಿ , ಬೆಳಗ್ಗೆ ಅಷ್ಟರಲ್ಲೇ ಸತ್ತ ಜಿರಳೆಗಳನ್ನು ಕಾಣಬಹುದು , ಬೋರಾಕ್ಸ್ ಸಿಗದಿದ್ದರೆ ಅಡುಗೆ ಸೋಡಾ ಸಹ ಬಳಸಬಹುದು.
ಬೇವಿನ ತೈಲ
ಬೇವಿನ ತೈಲ ಕೀಟ ನಿರೋಧಕಗಳಾಗಿ ವರ್ತಿಸುತ್ತವೆ , ನಿಯಮಿತ ಗಾತ್ರದ ಸ್ಪ್ರೇ ಬಾಟಲ್ನಲ್ಲಿ ನಾಲ್ಕೈದು ಚಮಚ ಬೇವಿನ ಎಣ್ಣೆಯನ್ನು ಹಾಕಿ ನೀರಿನಿಂದ ತುಂಬಿಸಿ. ರಾತ್ರಿ ಜಿರಳೆ ಹೆಚ್ಚಾಗಿರುವ ಸ್ಥಳಗಳಲ್ಲಿ ಸ್ಪ್ರೇ ಮಾಡಿ. ಅಗತ್ಯವಾದರೇ ಪುನರಾವರ್ತಿಸಿ.
ಬೋರಿಕ್ ಆಸಿಡ್
ಬೋರಿಕ್ ಆಸಿಡ್ ೨೦ ಗ್ರಾಂ ನಷ್ಟು ಮತ್ತು ಮೈದಾ ಹಿಟ್ಟು ಒಂದು ನಾಲ್ಕು ಚಮಚ ಮತ್ತು ಎರಡು ಚಮಚ ಸಕ್ಕರೆ ಮಿಶ್ರಣ ಮಾಡಿ ಜಿರ್ಲೆಲೆ ಓಡಾಡುವ ಜಾಗದಲ್ಲೆಲ್ಲ ಇಡೀ ,ಇದರಿಂದ ಜಿರಳೆಗಳು ಸಾಯುತ್ತವೆ .
ಫ್ಯಾಬ್ರಿಕ್ ಕಂಡೀಷನರ್ (ಕಂಫರ್ಟ್ ಅಥವಾ ಇನ್ನಾವುದಾದರೂ)
ಅರ್ಧ ಮುಚ್ಚಳ ಕಂಫರ್ಟ್ ಅಥವಾ ಇನ್ನಾವುದಾದರೂ ಫ್ಯಾಬ್ರಿಕ್ ಕಂಡೀಷನರ್ ಅನ್ನು ಒಂದು ಸ್ಪ್ರೇ ಬಾಟಲ್ ಬಳ್ಳಿ ಹಾಕಿ ನೀರು ತುಂಬಿ ಮತ್ತು ರಾತ್ರಿ ಹೊತ್ತು
ಕಾಫಿ ಪುಡಿ
ಕಾಫಿ ಪುಡಿಯನ್ನು ಜಿರಳೆಗಳು ಓಡಾಡುವ ಜಾಗದಲ್ಲಿ ರಾತ್ರಿ ವೇಳೆ ಸಿಂಪಡಿಸಿ ಇದರಿಂದ ಜಿರಳೆಗಳು ಸಾಯುತ್ತವೆ .
ಈರುಳ್ಳಿ , ಬೆಳ್ಳುಳ್ಳಿ ಮತ್ತು ಕರಿ ಮೆಣಸು .
ಸಮ ಪ್ರಮಾಣದಲ್ಲಿ ಈರುಳ್ಳಿ , ಬೆಳ್ಳುಳ್ಳಿ ಮತ್ತು ಕರಿ ಮೆಣಸಿನ ಪುಡಿ ಮಿಶ್ರಣ ಮಾಡಿ ಒಂದು ಸ್ಪ್ರೇ ಬಾಟಲ್ ನಲ್ಲಿ ಹಾಕಿಕೊಂಡು ಜಿರಳೆಗಳು ಇರುವ ಜಾಗದಲ್ಲಿ ಸಿಂಪಡಿಸಿ ಇದು ಕೂಡ ಜಿರಳೆಗಳು ಮಾಯವಾಗುವ ಹಾಗೆ ಮಾಡುತ್ತದೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
