fbpx
ಸಮಾಚಾರ

ಸೆಪ್ಟೆಂಬರ್ 14: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಸೆಪ್ಟೆಂಬರ್ 14, 2023 ಗುರುವಾರ
ವರ್ಷ : 1945, ಶೋಭಾಕೃತ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಮಾವಾಸ್ಯೆ : Sep 14 04:49 am – Sep 15 07:09 am
ನಕ್ಷತ್ರ : ಪುಬ್ಬ: Sep 14 02:01 am – Sep 15 04:54 am; ಉತ್ತರ: Sep 15 04:54 am – Sep 16 07:36 am
ಯೋಗ : ಸಾಧ್ಯ: Sep 14 02:07 am – Sep 15 02:59 am; ಶುಭ: Sep 15 02:59 am – Sep 16 03:41 am
ಕರಣ : ಚತುಷ್ಪಾದa: Sep 14 04:49 am – Sep 14 06:00 pm; ನಾಗ: Sep 14 06:00 pm – Sep 15 07:09 am

Time to be Avoided
ರಾಹುಕಾಲ : 1:46 PM to 3:16 PM
ಯಮಗಂಡ : 6:12 AM to 7:42 AM
ದುರ್ಮುಹುರ್ತ : 10:14 AM to 11:02 AM, 03:04 PM to 03:53 PM
ವಿಷ : 12:54 PM to 02:41 PM
ಗುಳಿಕ : 9:13 AM to 10:44 AM

Good Time to be Used
ಅಮೃತಕಾಲ : 09:44 PM to 11:31 PM
ಅಭಿಜಿತ್ : 11:51 AM to 12:39 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:18 PM

 

 

 

ಹಣದ ಹರಿವು ಹೆಚ್ಚಾಗಲಿದೆ. ಖರ್ಚು-ವೆಚ್ಚಗಳ ಮೇಲೆ ನಿಗಾ ಇಡಿ. ಕುಟುಂಬದವರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದರಿಂದ ನೀವು ಕಳೆದುಕೊಳ್ಳುವುದು ಏನಿಲ್ಲ. ಇದರಿಂದ ನಿಮಗೆ ಹೆಚ್ಚಿನ ಗೌರವ ಬರುವುದು

ನೀವು ಹೋಗುತ್ತಿರುವ ದಾರಿ ಸರಿಯಾದುದೇ. ಆದರೆ ನಿಮ್ಮ ಸಂಗಡ ಇತರರನ್ನು ಕರೆದುಕೊಂಡು ಹೋಗಬೇಕೆನ್ನುವ ನಿಮ್ಮ ಜಾಣ್ಮೆ ಮೆಚ್ಚಬೇಕಾದ್ದು. ಈ ಬಗ್ಗೆ ಸಮಾಜದಲ್ಲಿ ಗೌರವಿಸಲ್ಪಡುವಿರಿ. ಹಣಕಾಸು ಉತ್ತಮವಾಗಿರುವುದು.

ಸರಿ ಕಂಡದ್ದನ್ನು ಧೈರ್ಯವಾಗಿ ಎಲ್ಲರ ಮುಂದೆ ಮಾತನಾಡುವಿರಿ. ಇದರಿಂದ ವಿರೋಧಿಗಳು ಹಿಮ್ಮೆಟ್ಟುವರು. ಆರೋಗ್ಯದ ಕಡೆ ಗಮನ ಕೊಡುವುದು ಒಳಿತು. ಆರ್ಥಿಕ ಸಮಸ್ಯೆಯು ಈದಿನ ಬರಲಾರದು.

ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತಗೊಳಿಸುವುದು. ಈ ದಿನ ನಿಮ್ಮ ಮನಸ್ಸಿಗೆ ಒಪ್ಪುವಂತಹ ಶುಭ ವಾರ್ತೆ ಕೇಳುವಿರಿ. ಮಕ್ಕಳ ಅಭ್ಯುದಯವು ನಿಮಗೆ ಹೊಸ ಹುರುಪನ್ನು ತಂದುಕೊಡುವುದು.

 

ಪ್ರಮುಖ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸು ದೊರೆಯುವುದು. ಜೀವನ ಮತ್ತು ವೃತ್ತಿಯ ಬದುಕಿನಲ್ಲಿ ಬದಲಾವಣೆ ಕಂಡುಬರುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದರಿಂದ ಹಣಕಾಸಿನ ಚಿಂತೆ ಇಲ್ಲ.

 

ಸ್ನೇಹಿತರು ಮತ್ತು ಬಂಧುಗಳ ಜತೆಗಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕವಾಗಿ ಸಂಕಷ್ಟದಿಂದ ಪಾರಾಗುವ ದಿನ. ನಿಮ್ಮ ಧೋರಣೆಯಲ್ಲೂ ಸಾಕಷ್ಟು ಬದಲಾವಣೆಗಳು ಕಂಡು ಬರುವುದು. ಕೌಟುಂಬಿಕ ಸದಸ್ಯರ ಬೆಂಬಲ ದೊರೆಯುವುದು.

 

ನೀವು ಈದಿನ ಪ್ರಯಾಣವನ್ನು ಹಮ್ಮಿಕೊಳ್ಳದಿರುವುದು ಮೇಲು. ಆಸ್ತಿ ವಿಚಾರದಲ್ಲಿ ಇದ್ದ ಸಮಸ್ಯೆಗಳು ಅಚ್ಚರಿ ಎಂಬಂತೆ ಬಗೆಹರಿಯುವುದು. ಈದಿನ ಕುಟುಂಬದ ಸದಸ್ಯರೊಡನೆ ಸಮಯ ಕಳೆಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿದೆ.

 

ನಿಮ್ಮ ಕರ್ತವ್ಯಪರತೆಯೇ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು. ಸ್ವಾಭಾವಿಕವಾಗಿ ಆ ಕಾರಣದಿಂದ ಈದಿನ ಆನಂದ ನಿಮ್ಮ ಕೆಲಸದಲ್ಲಿ ಪ್ರಕಟಗೊಳ್ಳುವುದು. ಶತ್ರುಗಳು ನಿಮ್ಮ ವಿಚಾರಧಾರೆಯನ್ನು ಒಪ್ಪಿಕೊಳ್ಳುವರು.

 

ಜಗತ್ತಿನ ಎಲ್ಲ ವೈಭೋಗಗಳು ನಿಮ್ಮಲ್ಲಿವೆ ಎಂದು ಭಾವಿಸುವಿರಿ. ಗುರುವಿನ ಕೃಪೆಯಿಂದ ಅಂತಃಶಕ್ತಿಯನ್ನು ಗಳಿಸುವ ನಿಮ್ಮ ಮುಖದಲ್ಲಿ ತೇಜಸ್ಸು ಹೊರಹೊಮ್ಮುವುದು. ಸಂಗಾತಿಯ ಸಾಂಗತ್ಯ, ಸಲ್ಲಾಪ ಮುದ ನೀಡುವುದು

ನಿಮ್ಮ ದೌರ್ಬಲ್ಯ ಎಂದರೆ ಅತಿ ಮುಂಗೋಪ. ಸಿಟ್ಟಿನಿಂದ ಕೆಲವು ಅವಕಾಶಗಳನ್ನು ಇಂದು ಕಳೆದುಕೊಳ್ಳುವಿರಿ. ನಿಮ್ಮನ್ನು ಕೆರಳಿಸುವ, ಪ್ರಚೋದಿಸುವ ಹಲವು ವಿದ್ಯಾಮಾನಗಳು ನಡೆಯಬಹುದು. ಯಾವುದಕ್ಕೂ ಪ್ರತಿಕ್ರಿಯಿಸದೇ ಸುಮ್ಮನಿದ್ದು ಬಿಡಿ.

 

 

ಮಾನಸಿಕವಾಗಿ ಸಣ್ಣ ಪುಟ್ಟ ಕಿರಿಕಿರಿಗಳು ಇಂದು ಕಾಡುವ ಸಾಧ್ಯತೆ. ವಾಹನ ಚಾಲನೆ ವೇಳೆ ರಸ್ತೆಯ ಕಡೆಗೆ ನಿಗಾ ಇರಲಿ. ಆರೋಗ್ಯ ಸಮಸ್ಯೆ ಬಗೆಹರಿಯುವುದು. ಆಹಾರ-ವಿಹಾರದಲ್ಲಿ ಎಚ್ಚರ.

ಕಚೇರಿ ಕೆಲಸಗಳು ಸುಗಮವಾಗಿ ನಡೆಯುವುದು. ಕೌಟುಂಬಿಕ ವಿಚಾರಗಳಲ್ಲಿ ಹಿರಿಯರ ಮಾರ್ಗದರ್ಶನ ಪಡೆಯಿರಿ. ನಿಮ್ಮ ಕೌಶಲ್ಯ, ಸಾಮರ್ಥ್ಯ‌ ನಿರೂಪಿಸುವ ಇಲ್ಲವೇ ಸಾಬೀತು ಪಡಿಸುವ ಅವಕಾಶ ಸಿಕ್ಕರೆ ಬಿಡಬೇಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top