9ರಂದು ಮುಂಜಾನೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿತ್ತು. ಯುವ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಜಗನ್ ಮೋಹನ್ ರೆಡ್ಡಿ ಸರ್ಕಾರ ಈ ಬಂಧನವನ್ನು ಮಾಡಿತ್ತು. ತನಿಖೆಯ ಬಳಿಕ ಚಂದ್ರಬಾಬು ನಾಯ್ಡು ಅವರನ್ನು ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ವಿಜಯವಾಡ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಆದೇಶಿಸಿದೆ.
ಚಂದ್ರಬಾಬು ನಾಯ್ಡು ಅವರನ್ನು ಸದ್ಯ ರಾಜಮಂಡ್ರಿ ಜೈಲಿನ ಸ್ನೇಹಾ ಬ್ಲಾಕ್‌ನಲ್ಲಿರುವ ಒಂಟಿ ಸೆಲ್‌ನಲ್ಲಿ ಇರಿಸಲಾಗಿದೆ. ಜೀವ ಬೆದರಿಕೆ ಹಾಗೂ ಝಡ್ ಪ್ಲಸ್ ಭದ್ರತೆ ಇರುವ ಕಾರಣ ಈ ಸೌಲಭ್ಯ ಕಲ್ಪಿಸುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಅಲ್ಲದೆ, ಮನೆಯಲ್ಲಿ ಬೇಯಿಸಿದ ಆಹಾರ ಮತ್ತು ಔಷಧಿಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ನಟ ರಜನಿಕಾಂತ್ ಅವರು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಇದನ್ನು ಆಂಧ್ರ ರಾಜ್ಯದ ಪರಿಸರ ಸಚಿವೆ ಹಾಗೂ ನಟಿ ರೋಜಾ ಖಂಡಿಸಿದ್ದಾರೆ.
ನಟಿ ಹಾಗೂ ಆಂಧ್ರ ಸಚಿವೆ ರೋಜಾ ರಜನಿಕಾಂತ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೋಜಾ ನೀಡಿರುವ ಸಂದರ್ಶನದಲ್ಲಿ, ಚಂದ್ರಬಾಬು ನಾಯ್ಡು ಒಳ್ಳೆಯವರು ಎಂದು ಯಾರೂ ನಂಬುವುದಿಲ್ಲ. ಜನರ ಹಿತಕ್ಕಾಗಿ ಜೈಲಿಗೆ ಹೋದರೆ ಸಾಂತ್ವನ ಹೇಳಿದ್ದು ಸರಿ ಎನ್ನಬಹುದು. ಆದರೆ ರಜನಿಕಾಂತ್ ಕಳ್ಳರನ್ನು ಏಕೆ ಬೆಂಬಲಿಸುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ನಾಯ್ಡು ಅವರನ್ನು ಬೆಂಬಲಿಸುವುದರಿಂದ ರಜನಿ ಅವರ ಗೌರವ ಕಡಿಮೆಯಾಗುತ್ತದೆ. ಜನ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಭಾವಿಸಿ ರಜನಿ ರಾಜಕೀಯಕ್ಕೆ ಬರಲಿಲ್ಲ ಎಂದು ರೋಜಾ ಆರೋಪಿಸಿದ್ದಾರೆ.
ರಜನಿಕಾಂತ್ ವಿರುದ್ಧ ರೋಜಾ ನೇರ ವಾಗ್ದಾಳಿ ನಡೆಸಿರುವುದು ತಮಿಳುನಾಡು, ಆಂಧ್ರಪ್ರದೇಶ ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
