ಒಬ್ಬ ವ್ಯಕ್ತಿ ಒಬ್ಬರಲ್ಲ ಇಬ್ಬರಲ್ಲ ಏಳು ಯುವತಿಯರನ್ನು ಏಕಕಾಲಕ್ಕೆ ಮದುವೆಯಾದ. ಈ ಅಭೂತಪೂರ್ವ ಮದುವೆ ಉಗಾಂಡಾದಲ್ಲಿ ನಡೆದಿದೆ. ಈ ಮದುವೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಹಜ್ ಹಬೀಬ್ ಎನ್ಸಿಕೊನ್ನೆನ್ ಒಂದೇ ದಿನದಲ್ಲಿ ಏಳು ಮಹಿಳೆಯರನ್ನು ಮದುವೆಯಾಗುವ ಮೂಲಕ ಸಂಚಲನ ಮೂಡಿಸಿದರು.ವಿಚಿತ್ರವೆಂದರೆ ಮದುವೆಯಾದ ಇಬ್ಬರು ಹೆಂಡತಿಯರು ತನ್ನ ಸಹೋದರಿಯರೇ ಆಗಿದ್ದಾರೆ.. ಸದ್ಯ ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
thecitize.co.tz ಪ್ರಕಟಿಸಿದ ವರದಿಯ ಪ್ರಕಾರ ಸೆಪ್ಟೆಂಬರ್ 10 ರಂದು ಉಗಾಂಡಾದ ಮುಕೊನೊ ಜಿಲ್ಲೆಯ ಬುಗೆರೆಕಾ ಗ್ರಾಮದಲ್ಲಿ ವಿಚಿತ್ರ ಮದುವೆ ನಡೆದಿದೆ. ಈ ಹಜ್ ಹಬೀಬ್ ಏಳು ಮಹಿಳೆಯರನ್ನು ವಿವಾಹವಾದರು. ಸಾಯುವವರೆಗೂ ಪತ್ನಿಯರ ಜೊತೆ ಬಾಳುತ್ತೇನೆ ಎಂದು ಪ್ರಮಾಣ ಮಾಡಿದರು. ಇದರಲ್ಲಿ ಅವರ ಇಬ್ಬರು ಜೈವಿಕ ಸಹೋದರಿಯರು ಸೇರಿದ್ದಾರೆ. ವೈರಲ್ ಚಿತ್ರಗಳಲ್ಲಿ, ಹಜ್ ಹಬೀಬ್ ಅವರ ಏಳು ಪತ್ನಿಯರು ತಮ್ಮ ಹೆಸರನ್ನು ಹೊಂದಿರುವ ಕುರ್ಚಿಗಳ ಮೇಲೆ ಕುಳಿತಿದ್ದಾರೆ.
ಹೆಂಡತಿಯರಲ್ಲಿ ಅಸೂಯೆ ಬೆಳೆಯಬಾರದು
ಹೆಂಡತಿಯರಲ್ಲಿ ಅಸೂಯೆ ಬೆಳೆಯಬಾರದು.. ಅದಕ್ಕೇ ಅವರೆಲ್ಲರನ್ನೂ ಒಂದೇ ದಿನ ಮದುವೆ ಮಾಡಿದ್ದೇನೆ ಎಂದು ಹಾಜ್ ಹಬೀಬ್ ಹೇಳಿದ್ದು ದೊಡ್ಡ ಮತ್ತು ಸಂತೋಷದ ಕುಟುಂಬವನ್ನು ಬಯಸಿದ್ದಾರೆ. ಕುತೂಹಲಕಾರಿ ವಿಚಾರ ಏನೆಂದರೆ ಆತ ಏಳು ಮದುವೆಯಾಗಿದ್ದರೂ ಅದು ತೃಪ್ತಿಯಾಗಿಲ್ಲವಂತೆ. ಮತ್ತಷ್ಟು ಯುವತಿಯನ್ನು ಮದುವೆಯಾಗುವುದಾಗಿ ಹೇಳಿಕೊಂಡಿದ್ದಾನೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
