ಹೈಪೋಥೈರಾಯಿಡಿಸಂ ಅಂದರೆ ಥೈರಾಯ್ಡ್ ಗ್ರಂಥಿಗಳು ಹಾರ್ಮೋನ್ಗಳನ್ನು ಸ್ರವಿಸಲು ವಿಫಲವಾದಾಗ ಅಥವಾ ಕಡಿಮೆಯಾದಾಗ ಈ ಸಮಸ್ಯೆ ಉಂಟಾಗುತ್ತದೆ ಈ ಗ್ರಂಥಿಗಳು ಕತ್ತಿನ ಕೆಳಭಾಗದಲ್ಲಿದ್ದು ಇದು ಮನುಷ್ಯನ ಮೂಡ್ ,ಜೀರ್ಣ ಕ್ರಿಯೆ, ಮಾನಸಿಕ ಶಕ್ತಿ ,ತಾಪಮಾನ , ಹೃದಯದ ಬಡಿತ ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
ಈ ಹೈಪೋಥೈರಾಯಿಡಿಸಂ ಸಮಸ್ಯೆಯನ್ನು ನಾವು ಕೆಲವು ಆಹಾರಗಳನ್ನು ಸೇವಿಸುವುದರ ಮೂಲಕ ಸರಿಪಡಿಸಿಕೊಳ್ಳಬಹುದು ಬನ್ನಿ ಆ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ
ಹಲಸಿನ ಬೀಜ
ಹಲಸಿನ ಬೀಜದಲ್ಲಿರುವ ಸೆಲಿನಿಯಂ ಅಂಶವೂ ದೇಹದಲ್ಲಿ ಥೈರಾಯ್ಡ್ ಗ್ರಂಥಿಗಳ ಸ್ರವಿಸುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ .
ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯಲ್ಲಿರುವ ಕೊಬ್ಬಿನ ಅಂಶಗಳು ಥೈರಾಯ್ಡ್ ಹಾರ್ಮೋನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ ಆದ್ದರಿಂದ ನಾವು ಆಹಾರ ಪದಾರ್ಥಗಳನ್ನು ಅಡುಗೆ ಮಾಡುವಾಗ ಕೊಬ್ಬರಿ ಎಣ್ಣೆಯನ್ನು ಬಳಸುವುದು ಉತ್ತಮ .
ಯೋಗರ್ಟ್
ಯೋಗರ್ಟ್ ನಲ್ಲಿರುವ ವಿಟಮಿನ್ ಡಿ ಅಂಶಗಳು ಥೈರಾಯ್ಡ್ ಸಮಸ್ಯೆಗೆ ಒಂದು ಉತ್ತಮ ದಿನವೂ ಕನಿಷ್ಠ ಪಕ್ಷ ನಾಲ್ಕು ಚಮಚ ಯೋಗರ್ಟನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ದೊರಕುವುದು .
ಸಾಲ್ಮೋನ್ ಮೀನು
ಸಾಲ್ಮನ್ ಮೀನಿನಲ್ಲಿ ಒಮೆಗಾ ೩ ಕೊಬ್ಬಿನ ಅಂಶಗಳು ಬಹಳ ಹೆಚ್ಚಾಗಿವೆ ಇವು ಥೈರಾಯ್ಡ್ ಗ್ರಂಥಿಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ .
ಕಂದು ಅಕ್ಕಿ
ಕಂದು ಅಕ್ಕಿಯಲ್ಲಿ ಕಾರ್ಬೋ ಹೈಡ್ರೇಟ್ ಅಂಶಗಳು ಹೆಚ್ಚಾಗಿದ್ದು ಥೈರಾಯ್ಡ್ನ ಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ .
ದೊಡ್ಡ ಹುರುಳಿ
ಹುರುಳಿಯಲ್ಲಿ ಅಯೋಡಿನ್ ಲವಣದ ಅಂಶಗಳು ಹೆಚ್ಚಾಗಿದ್ದು ಪ್ರೋಟಿನ್ ತಾಮ್ರ ಪೋಟ್ಯಾಶಿಯಂ ಕ್ಯಾಲ್ಸಿಯಂ ಅಂಶಗಳು ಸಹ ಇವೆ ಇವುಗಳು ಥೈರಾಡ್ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತವೆ .
ಮೊಟ್ಟೆ
ಮೊಟ್ಟೆಯಲ್ಲಿ ಅಯೋಡಿನ್ ಹಾಗೂ ಸೆಲಿನಿಯಂ ಅಂಶಗಳು ಬಹಳ ಹೆಚ್ಚಾಗಿವೆ ಇವು ಥೈರಾಡ್ ಗ್ರಂಥಿಯ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ .
ಚಿಪ್ಪು ಮೀನು
ಚಿಪ್ಪು ಮೀನಿನಲ್ಲಿ ಜಿಂಕ್ ಅಂಶವು ಬಹಳ ಹೆಚ್ಚಾಗಿದೆ ಇದು ಥೈರಾಡ್ ಗ್ರಂಥಿಯ ಸಮಸ್ಯೆಗಳನ್ನು ಪರಿಹಾರ ಮಾಡಲು ಒಂದು ಉತ್ತಮ ವಿಧಾನ .
ಕೋಳಿ ಮಾಂಸ
ಕೋಳಿ ಮಾಂಸದಲ್ಲಿ ಅಮೈನೊ ಆಸಿಡ್ಗಳು ಬಹಳ ಹೆಚ್ಚಾಗಿದ್ದು ಈ ಅಮೈನೊ ಆಸಿಡ್ಗಳು ಥೈರಾಯ್ಡ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ ಆದ್ದರಿಂದ ಕೋಳಿಮಾಂಸವನ್ನು ಸೇವಿಸಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
