ಗಣಪನ ಹದಿನಾಲ್ಕು ರೂಪ ರಹಸ್ಯಗಳು. ಒಂದೊಂದು ರೂಪದ ಹಿಂದೆಯೂ ಒಂದೊಂದು ರಹಸ್ಯಗಳು ಅಡಗಿವೆ.
ನಿಮ್ಮ ಮೇಲೆ ಕ್ಷುದ್ರ ಶಕ್ತಿಯ ಪ್ರಭಾವ ವಾಗಿದ್ದರೆ ನೀವು ಯಾವ ಗಣಪನನ್ನು ಪೂಜಿಸಬೇಕು ? ಕೆಲಸಗಳು ಕೈಗೂಡಬೇಕು ಎಂದರೆ ಯಾವ ಗಣಪನನ್ನು ಆರಾಧಿಸಬೇಕು ? ದಾರಿದ್ರ್ಯ ದೂರವಾಗುವುದಕ್ಕೆ ಯಾವ ಗಣಪತಿಗೆ ವಂದಿಸಬೇಕು ? ಯಾವ್ಯಾವ ಗಣಪನ ಪೂಜೆಯಿಂದ ಯಾವ್ಯಾವ ಫಲ ಲಭಿಸುತ್ತದೆ. ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನೀವು ಇದುವರೆಗೂ ನೋಡಿರದ ಆ ಮಹಾನ ಗಣಪತಿಯ ಬಗ್ಗೆ ತಿಳಿದುಕೊಳ್ಳಿ. ಗಣಪನ ರೂಪನ ವರ್ಣನೆ ಮುದ್ಗಲ ಪುರಾಣದಲ್ಲಿ ಸಿಗುತ್ತದೆ. ಗಣಪತಿಯ ಅಪ್ರತಿಮ ಗುಣ ವಿಶೇಷತೆಗಳ ಬಗ್ಗೆ ಪುರಾಣದಲ್ಲಿ ತಿಳಿಸಿ ಕೊಡಲಾಗಿದೆ. ವಿನಾಯಕ ವಿಜ್ಞ ವಿನಾಶಕ ಅಷ್ಟೇ ಅಲ್ಲ, ಶತ್ರು ನಾಶಕ, ದುಷ್ಟ ಶಕ್ತಿ ಸೇರಿದಂತೆ ಹಲವು ತೊಂದರೆಗಳನ್ನು ನಾಶ ಪಡಿಸುತ್ತಾನೆ.. ಎನ್ನುವ ಬಗ್ಗೆ ವಿವರಣೆ ಇದೆ.
ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ವಿನಾಯಕ, ವಿಘ್ನ ವಿನಾಶಕ, ಗೌರಿಪುತ್ರ ,ವರದಹಸ್ತ, ಸಿದ್ಧಿ-ಬುದ್ಧಿ ಶ್ರೀಪತಿ , ಮಾಯ ಭೂಪತಿ, ಏಕದಂತ, ಇವು ಗಣಪನಿಗೆ ನಾಮಗಳು. ಸದ್ಯ ಭಾರತದಾದ್ಯಂತ ಸರ್ವಶಕ್ತನಾದ ಗಣಪನನ್ನು ಜನತೆ ಆರಾಧನೆ ಮಾಡಿ ಇಡೀ ದೇಶವೇ ಈಗ ಈಶ ಪುತ್ರನ ನಾಮಸ್ಮರಣೆ ಮಾಡುತ್ತಿದೆ. ಗಣಪತಿ ಅಗ್ರಪೂಜೆಗೆ ಅಧಿಪತಿ ಗೌರಿ ಪುತ್ರಂ, ಆ ಮೂರ್ತಿಯನ್ನು ಇಟ್ಟು ಪೂಜಿಸಿದರೆ ಸಕಲ ಕಷ್ಟಗಳು ನಿವಾರಣೆಯಾಗುತ್ತವೆ. ಭಾದ್ರಪದ ಮಾಸ ಶುಕ್ಲ ಪಕ್ಷದ ಚೌತಿಯ ದಿನ ಗಣಪನನ್ನು ಮಂಟಪದಲ್ಲಿ ಕೂರಿಸಿ, ವಿಜೃಂಭಣೆಯಿಂದ ಪೂಜಿಸಲಾಗುತ್ತದೆ .ವಿವಿಧ ರೂಪಗಳಿಂದ ಕಂಗೊಳಿಸುವ ಗಣಪತಿ ನಮ್ಮ ಮೆಚ್ಚಿನ ದೈವವಾಗಿದ್ದಾನೆ.
ಸರ್ವರಿಗೂ ಪ್ರಿಯನಾದ ಗಣಪತಿಯ ರೂಪಗಳು ಅತ್ಯಂತ ವಿಶಿಷ್ಟ. ವಿಶೇಷವಾಗಿ ಮುದ್ಗಲ ಪುರಾಣದಲ್ಲಿ ಈ ಪ್ರಥಮ ಪೂಜಿತ ವಿಶೇಷ ರೂಪಗಳ ಬಗ್ಗೆ ತಿಳಿಸಲಾಗಿದೆ. ಮುದ್ಗಲ ಪುರಾಣದಲ್ಲಿ ಗಣಪತಿಯ ವಿಶೇಷ ರೂಪಗಳು, ಗಣಪತಿಯ ವಿಶಿಷ್ಟ ರೂಪಗಳು ಗಣಪತಿ ಒಂದೊಂದು ರೂಪಕ್ಕಿದೆ ಒಂದೊಂದು ವಿಶೇಷತೆ. ಒಂದೊಂದು ರೂಪದ ಆರಾಧನೆಯಿಂದ ಒಂದೊಂದು ಫಲ. ಹಿಂದೂ ಪುರಾಣಗಳಲ್ಲಿ ಗಣಪತಿ ಪುರಾಣ ಮತ್ತು ಮುದ್ಗಲ ಪುರಾಣದಲ್ಲಿ ನಮಗೆ ಗೊತ್ತಿಲ್ಲದ ಗಣಪತಿಯ ರೂಪಗಳ ಬಗ್ಗೆ ಉಲ್ಲೇಖವಿದೆ. ಅದರಲ್ಲಿ ಹೇರಂಬ ಗಣಪತಿಯ ರೂಪ ಅತ್ಯಂತ ವಿಶಿಷ್ಟವಾಗಿದೆ
ಹೇರಂಬ ಗಣಪತಿಯ ರೂಪ:ಇದು ಗಣಪತಿಯ ವಿಶಿಷ್ಟ ರೂಪ ಮುದ್ಗಲ ಪುರಾಣದಲ್ಲಿದೆ. ಹೇರಂಬ ಗಣಪತಿಯ ಬಗ್ಗೆ ಉಲ್ಲೇಖವಿದೆ.ಹೆ ಎಂದರೆ ಆಸಹಾಯಕ, ರಂಬ ಎಂದರೆ ಅಸಹಾಯಕರನ್ನು ರಕ್ಷಿಸುವವನು ಎಂದರ್ಥ. ಸಿಹಿ ಕಡಬು ,ದಂತ ,ಜಪಮಾಲೆ, ಅಂಕುಶ ,ಪರಶುವನ್ನು ಕೈಯಲ್ಲಿ ಹಿಡಿದಿದ್ದಾನೆ. ಹೇರಂಬ ಗಣಪತಿಯ ಆರಾಧನೆ ನೇಪಾಳದಲ್ಲಿ ಬಹಳ ಜನಪ್ರಿಯ. ಕಾಶಿ ವಿಶ್ವನಾಥನ ದೇಗುಲದಲ್ಲಿ ಹೇರಂಬ ಗಣಪತಿಯ ಮೂರ್ತಿ ಕಾಣಸಿಗುತ್ತದೆ.
ಹೇರಂಬ ಗಣಪತಿ ಪೂಜಾ ವಿಧಾನ ಮತ್ತು ಫಲ:ಹೇರಂಬ ಗಣಪತಿಯನ್ನು ಪೂಜಿಸುವಾಗ ಈ ದಿವ್ಯ ಮಂತ್ರವನ್ನು ಹೇಳಲೇಬೇಕು. ಪೂಜೆಯ ವೇಳೆ “ ಓಂ ವಕ್ರತುಂಡಾಯ ನಮಃ” ಇದು ಹೇರಂಬ ಗಣಪತಿಯ ಮೂಲ ಮಂತ್ರ .ಈ ಮಂತ್ರ ಹೇಳಿಕೊಂಡು ಗಣಪತಿಗೆ ಪೂಜೆ ಸಲ್ಲಿಸಿ, ಇದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ. ಹೇರಂಭ ಗಣಪತಿ ಪಂಚ ಭೂತಗಳ ಸ್ವರೂಪ.ಈ ಗಣಪತಿಯ ಪೂಜೆ 5 ಪೂಜೆಗೆ ಸಮಾನ ಮತ್ತು ಐದು ಫಲಗಳು ಒಟ್ಟಿಗೆ ನಮಗೆ ಲಭಿಸುತ್ತವೆ. 5 ತಲೆಯುಳ್ಳ ಹೇರಂಬ ಗಣಪತಿ ಅತ್ಯಂತ ಮಹಿಮೆ ಉಳ್ಳವನು. ಇವನನ್ನು ಪೂಜಿಸುವಾಗ ಐದು ತಲೆಯ ಗಣಪತಿ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸಬೇಕು .
ಹರಿದ್ರ ಗಣಪತಿಯ ರೂಪ:ಮುದ್ಗಲ ಪುರಾಣದಲ್ಲಿ ಹರಿದ್ರಾ ಗಣಪತಿಯ ಬಗ್ಗೆ ಉಲ್ಲೇಖವಿದೆ. ಹರಿದ್ರಾ ಗಣಪತಿಯ ರೂಪ ಅರಿಶಿನ ಬಣ್ಣ. ಇವನಿಗೆ ನಾಲ್ಕು ಕೈಗಳಿವೆ, ಎಡಗೈಯಲ್ಲಿ ದಂತ ಹಿಡಿದಿದ್ದಾನೆ.
ಹರಿದ್ರಾ ಗಣಪತಿಯ ಪೂಜೆಯ ವಿಧಾನ ಮತ್ತು ಫಲ:“ಓಂ ಹುಂ ಗಂ ಗ್ಲೋo ಹರಿದ್ರಾ ಗಣಪತಯೇ , ವರ ವರದಾ ಸರ್ವ ಜನ ಹೃದಯಂ ಸ್ಥಂಭಯ ಸ್ಥಂಭಯ ಸ್ವಾಹಾ” ಇದು ಹರಿದ್ರಾ ಗಣಪತಿ ಮೂಲ ಮಂತ್ರ. ಈ ಮೂಲ ಮಂತ್ರವನ್ನು ಹೇಳಿಕೊಂಡು ಗಣಪತಿಯನ್ನು ಪೂಜಿಸಿದರೆ ಅತ್ಯಂತ ಶ್ರೇಯಸ್ಕರ, ಹರಿದ್ರಾ ಗಣಪತಿ ಆರಾಧನೆಯಿಂದ ದುಷ್ಟ ಶಕ್ತಿಗಳ ನಾಶವಾಗುತ್ತವೆ. ಮಾಟ ಮಂತ್ರ ಮಾಡಿಸುವ ಶತ್ರುಗಳ ನಾಶವಾಗುತ್ತಾರೆ. ಮಾಟ ಮಂತ್ರದಂತಹ ಪ್ರಯೋಗಗಳಿಂದ ಹರಿದ್ರಾ ಗಣಪತಿ ನಮ್ಮನ್ನು ತಪ್ಪಿಸುತ್ತಾನೆ. ಇಷ್ಟೇ ಅಲ್ಲದೆ ವಾಮಾಚಾರ ಮಾಡಿರುವವರಿಗೆ ಹರಿದ್ರಾ ಗಣಪತಿ ಶಿಕ್ಷೆ ಕೊಡುತ್ತಾನೆ. ಜೀವನದಲ್ಲಿ ಮಾಟ ಮಂತ್ರದ ಪ್ರಯೋಗಗಳು ಆಗದಂತೆ ತಡೆಯುತ್ತಾನೆ ಮತ್ತು ಭಕ್ತರಿಗೆ ಅಭಯ ನೀಡುತ್ತಾನೆ. ಅರಿಶಿನ ಬಣ್ಣದ ಹರಿದ್ರಾ ಗಣಪತಿ ರೂಪದಿಂದಷ್ಟೇ ಭಕ್ತರನ್ನು ಸೆಳೆಯುವುದಿಲ್ಲ ತನ್ನಲ್ಲಿರುವ ಅತ್ಯದ್ಭುತ ಮಹಿಮೆಗಳಿಂದಾಗಿ ಅಪಾರ ಸಂಖ್ಯೆಯ ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ.
ಲಕ್ಷ್ಮಿ ಗಣಪತಿ ರೂಪ:ಶ್ರೀ ಲಕ್ಷ್ಮೀ ದೇವಿಯನ್ನು ಎಡತೊಡೆಯ ಮೇಲೆ ಕೂರಿಸಿಕೊಂಡಿದ್ದಾರೆ. ಲಕ್ಷ್ಮಿ ಸರ್ವಾಲಂಕೃತಳಾಗಿ ಬಲಗಡೆಯ ಕೈಯಲ್ಲಿ ಕಮಲ ಪುಷ್ಪವನ್ನು ಹಿಡಿದಿದ್ದಾಳೆ. ಅಮೃತದ ಜರಿಯಂತೆ ಲಕ್ಷ್ಮಿ ಗಣಪ ಪ್ರಜ್ವಲಿಸುತ್ತಾನೆ.
ಲಕ್ಷ್ಮಿ ಗಣಪತಿಯ ಪೂಜಾ ವಿಧಾನ ಮತ್ತು ಫಲ:“ಓಂ ಲಕ್ಷ್ಮೀ ಗಣಪತಯೇ ನಮಃ” ಈ ಮಂತ್ರ ಪಠಣದಿಂದ ಲಕ್ಷ್ಮಿ ಗಣಪನನ್ನು ಪೂಜಿಸಬೇಕು. ಈ ಪೂಜೆಯಿಂದ ಸಂಪತ್ತು, ಐಶ್ವರ್ಯ, ನಿಮಗೆ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ, ಸಮೃದ್ಧಿ ಸ್ಥಿರವಾಗಿರುತ್ತದೆ. ಲಕ್ಷ್ಮಿ ಸಮೇತ ಗಣಪನನ್ನು ಪೂಜಿಸಿದರೆ ಲಕ್ಷ್ಮಿ ಮತ್ತು ವಿನಾಯಕರ ಅನುಗ್ರಹವಾಗುತ್ತದೆ. ಈ ಗಣಪನ ಉಪಾಸನೆಯಿಂದ ಆರ್ಥಿಕ ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ .
ತ್ರ್ಯಕ್ಷ ಗಣಪತಿ ರೂಪ:ಮುದ್ಗಲ ಪುರಾಣದಲ್ಲಿ ತ್ರ್ಯಕ್ಷ ಗಣಪನ ಬಗ್ಗೆ ಉಲ್ಲೇಖವಿದೆ. ಚಿನ್ನದ ಬಣ್ಣ ಉಳ್ಳವನು, ಇತರ ತ್ರ್ಯಕ್ಷ ಗಣಪ ಓ ,ಆ ಮತ್ತು ಮ. ಈ ಮೂರು ಧ್ವನಿಗಳ ಒಡೆಯ ತ್ರ್ಯಕ್ಷ ಗಣಪ. ಇವನಿಗೆ ಅತಿದೊಡ್ಡ ಕಿವಿಗಳಿವೆ. ಸ್ಥೂಲ ಶರೀರದ ಗಣಪನ ವಿಶೇಷ ಎಂದರೆ ಗಣಪತಿಯ ಸೊಂಡಿಲಿನಲ್ಲಿ ಮೋದಕವಿದೆ.
ತ್ರ್ಯಕ್ಷ ಗಣಪತಿ ಆರಾಧನೆಯ ವಿಧಾನ ಮತ್ತು ಫಲ:“ಓಂ ಹ್ರಾಂ ಹ್ರೀಂ ಹ್ರೀಂ ಓಂ” ಇದು ಅತ್ಯಂತ ಶಕ್ತಿಯುತವಾದ ಮಂತ್ರ. ಇದು ತ್ರ್ಯಕ್ಷ ಗಣಪತಿಯ ಮೂಲ ಮಂತ್ರ .ನೀವು ಗಣಪತಿಯನ್ನು ಆರಾಧಿಸುವಾಗ ಈ ಮಂತ್ರವನ್ನು ಹೇಳಿದರೆ ನಿಮಗೆ ಜೀವನದ ಎಲ್ಲ ಸುಖಗಳು ಸಿಗುತ್ತವೆ. ಸಕಲ ಸಂತೋಷಗಳು ಲಭಿಸುತ್ತವೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ತ್ರ್ಯಕ್ಷ ಗಣಪತಿಯನ್ನು ಪೂಜಿಸಿದರೆ ಮಾನಸಿಕ ಸಮಸ್ಯೆಯಿಂದ ಮುಕ್ತಿಯನ್ನು ಕಾಣಬಹುದು. ಪ್ರಥಮ ಪೂಜಿತನ ವಿಶೇಷವಾದರೂ ತ್ರ್ಯಕ್ಷ ಗಣಪತಿಯ ರೂಪ ಮತ್ತು ಮಹಿಮೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬಂಗಾರದ ವರ್ಣದಿಂದ ಹೊಳೆಯುವ ಈ ಗಣಪ ತನ್ನ ಭಕ್ತರಿಗೂ ಚಿನ್ನದಂತಹ ಬದುಕು ದಯ ಪಾಲಿಸುತ್ತಾನೆ.
ಗಣೇಶಾನಿ ರೂಪ:ಮುದ್ಗಲ ಪುರಾಣದಲ್ಲಿ ಗಣೇಶಾನಿ ರೂಪದ ಬಗ್ಗೆ ಉಲ್ಲೇಖವಿದೆ. ಇದು ಗಣಪತಿಯ ಸ್ತ್ರೀರೂಪ. ಗಣಪನ ದೇಹ ಮಾತ್ರ ಸ್ತ್ರೀ ರೂಪದಲ್ಲಿದೆ. ಮಧುರೈನ ದೇವಾಲಯದಲ್ಲಿ ಈ ಗಣೇಶಾನಿಯ ವಿಗ್ರಹವಿದೆ.
ಗಣೇಶಾನಿಯ ಪೂಜಾ ವಿಧಾನ ಮತ್ತು ಫಲ:“ಓಂ ಗಣೇಶಾನ್ಯಯೇ ನಮಃ” ಇದು ಗಣೇಶಾನಿಯ ಮೂಲ ಮಂತ್ರ. ನೀವು ಗಣೇಶಾನಿಯನ್ನು ಪೂಜಿಸುವಾಗ, ಈ ಮಂತ್ರ ಹೇಳಿ ಗಣಪನನ್ನು ಪೂಜಿಸಬೇಕು. ಗಣೇಶಾನಿಯ ಪೂಜೆಯಿಂದ ಸಾಂಸಾರಿಕ ಕಲಹಗಳು ನಿವಾರಣೆಯಾಗುತ್ತವೆ. ಕುಟುಂಬದಲ್ಲಿ ಶಾಂತಿ ಅಷ್ಟೇ ಅಲ್ಲ, ಪ್ರೀತಿಸಿದವರನ್ನು ವರಿಸುವುದಕ್ಕೆ ಸಹಾಯ ಮಾಡುತ್ತದೆ. ಗಣಪತಿ ಗಣೇಶಾನಿಯ ರೂಪ ಗಣಪನ ಅತ್ಯಂತ ವಿಶಿಷ್ಟ ರೂಪ. ಸ್ತ್ರೀ ರೂಪಿಯಾದ ಗಣೇಶಾನಿ ಭಕ್ತರ ಪ್ರಾರ್ಥನೆಯನ್ನು ಸ್ವೀಕರಿಸುವ ಮಹಾನ ಗಣಪ.
ಉಚ್ಚಿಷ್ಟ ಗಣಪ:ಮುದ್ಗಲ ಪುರಾಣದಲ್ಲಿ ಉಚ್ಚಿಷ್ಟ ಗಣಪತಿಯ ಬಗ್ಗೆ ಉಲ್ಲೇಖವಿದೆ. ಉಚ್ಚಿಷ್ಟ ಗಣಪತಿಯ ಬಣ್ಣ ಕಪ್ಪು. ಈ ಗಣಪನಿಗೆ 12 ಕೈಗಳು ಇವನ ಕೈಯಲ್ಲಿ ಪುಸ್ತಕ, ದಾಳಿಂಬೆ ಹಣ್ಣು ಹಿಡಿದಿದ್ದಾನೆ. ತೊಡೆಯ ಮೇಲೆ ಸ್ತ್ರೀಶಕ್ತಿ ಕುಳಿತಿದ್ದಾಳೆ . ಮುದ್ಗಲ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಇವನು ಕಾಮ ಮೋಹಿತ.
ಉಚ್ಚಿಷ್ಟ ಗಣಪತಿಯ ಪೂಜಾ ವಿಧಾನ ಮತ್ತುಫಲ:‘ಓಂ ಉಚ್ಚಿಷ್ಟ ಗಣಪತಯೇ ಸ್ವಾಹ” ಇದು ಉಚ್ಚಿಷ್ಟ ಗಣಪತಿಯ ಮೂಲ ಮಂತ್ರ. ಉಚ್ಚಿಷ್ಟ ಗಣಪತಿಯನ್ನು ಪೂಜಿಸುವಾಗ ಈ ದಿವ್ಯ ಮಂತ್ರವನ್ನು ಹೇಳಿಕೊಳ್ಳಬೇಕು. ತಾಂತ್ರಿಕ ಸಾಧನೆಗಾಗಿ ಈ ಗಣಪನನ್ನು ಪೂಜಿಸಲಾಗುತ್ತದೆ. ಪೂಜೆಯಿಂದ ಮಾಟ ಮಂತ್ರದ ಪ್ರಯೋಗ ದೂರವಾಗುತ್ತದೆ. ತಮಿಳುನಾಡಿನ ತಿರುಚಿ ದೇವಸ್ಥಾನದಲ್ಲಿ ಈ ಗಣಪನನ್ನು ಪೂಜಿಸುವ ಪರಿಪಾಠವಿದೆ. ಉಚ್ಚಿಷ್ಟ ಎಂದರೆ ಪ್ರಳಯ ಕಾಲದಲ್ಲಿ ಉಳಿದವನು ಎಂದರ್ಥ. ಉಚ್ಚಿಷ್ಟ ಯಕ್ಷಣಿ ಈ ಗಣಪನ ಹೆಂಡತಿ. ಈ ಗಣಪ ಶುದ್ಧ-ಅಶುದ್ಧತೆಯನ್ನು ನೋಡುವುದಿಲ್ಲ. ಶುದ್ಧವಾಗಿ ಪೂಜಿಸಿದರೂ ಸಹ ಸಂತೋಷವನ್ನು ಕರುಣಿಸುವನು.
ದ್ವಿಜ ಗಣಪತಿ ರೂಪ:ದ್ವಿಜ ಗಣಪನದ್ದು ವಿಶಿಷ್ಟ ರೂಪ. ಇವನದ್ದು ಜ್ಞಾನ ಸಂಪನ್ನ ರೂಪ. ಮುದ್ಗಲ ಪುರಾಣದಲ್ಲಿ ಗಣಪನ ಬಗ್ಗೆ ಉಲ್ಲೇಖವಿದೆ. ಗಣಪತಿಗೆ ನಾಲ್ಕು ಮುಖಗಳು, ನಾಲ್ಕು ಕೈಗಳು, ಗಣಪತಿಯ ಕೈಯಲ್ಲಿ ಪುಸ್ತಕ , ಜಪಮಾಲೆ ಇದೆ, ದಂಡ ಹಾಗೂ ಕಮಂಡಲ ಹಿಡಿದಿದ್ದಾನೆ. ದ್ವಿಜ ಗಣಪ ಶ್ವೇತವರ್ಣದವನು. ಸದಾ ಚಂದ್ರನಂತೆ ಕಂಗೊಳಿಸುತ್ತಿರುವನು ಈ ಗಣಪನು.
ದ್ವಿಜ ಗಣಪತಿಯ ಪೂಜಾ ವಿಧಾನ ಮತ್ತು ಫಲ:“ ಓಂ ಗಂ ಗಣಪತಯೇ ನಮಃ” ಇದು ದ್ವಿಜ ಗಣಪತಿಯ ಮೂಲ ಮಂತ್ರ.ಈ ಮೂಲ ಮಂತ್ರ ಹೇಳಿಕೊಂಡು ದ್ವಿಜ ಗಣಪನನ್ನು ಪೂಜಿಸಿದರೆ ವಿಶೇಷ ಫಲ. ದ್ವಿಜ ಗಣಪನ ಆರಾಧನೆಯಿಂದ ನಾವು ಮಾಡುವ ಕೆಲಸದಲ್ಲಿ ಆನಂದ ಮತ್ತು ಸಂತೃಪ್ತಿಯ ಭಾವ ಲಭಿಸುತ್ತದೆ. ಜೀವನದಲ್ಲಿ ಸಂತೋಷ, ಶಾಂತಿ ಪ್ರಾಪ್ತಿಯಾಗುತ್ತದೆ. ದ್ವಿಜ ಗಣಪ ಭಕ್ತರಿಗೆ ಧನ್ಯತಾಭಾವ ಕರುಣಿಸುತ್ತಾನೆ. ವಿಶೇಷವಾಗಿ ಮಹಾರಾಷ್ಟ್ರದ ಪಾಲಿಯಲ್ಲಿ ಬಲ್ಲಾಳೇಶ್ವರ ದೇವಾಲಯದಲ್ಲಿ ದ್ವಿಜ ಗಣಪತಿಯ ರೂಪ ಕಾಣಸಿಗುತ್ತದೆ.ದ್ವಿಜ ಗಣಪ ಸದಾ ಚಂದ್ರನಂತೆ ಕಂಗೊಳಿಸುತ್ತಿರುತ್ತದೆ. ಇವನ ಪೂಜೆಯಿಂದ ಭಕ್ತರ ಬಾಳಿನಲ್ಲಿ ಬೆಳಕು ಮೂಡುತ್ತದೆ.
ದುರ್ಗಾ ಗಣಪತಿ ರೂಪ:ಈ ದುರ್ಗ ಗಣಪತಿಯ ರೂಪದ ಬಗ್ಗೆ ಮುದ್ಗಲ ಪುರಾಣದಲ್ಲಿ ಉಲ್ಲೇಖವಿದೆ. ಇವನ ದೇಹ ಚಿನ್ನದಂತೆ ಹೊಳೆಯುತ್ತಿರುತ್ತದೆ. ದುರ್ಗ ಗಣಪತಿಗೆ ಎಂಟು ಕೈಗಳು ದೊಡ್ಡ ಶರೀರವನ್ನು ಹೊಂದಿದ್ದಾನೆ.ದುರ್ಗಾ ಗಣಪತಿ ಕೆಂಪು ಬಟ್ಟೆಯನ್ನು ಧರಿಸಿರುತ್ತಾನೆ.
ದುರ್ಗಾ ಗಣಪತಿಯ ಪೂಜಾ ವಿಧಾನ ಮತ್ತು ಫಲ:“ ಓಂ ದುರ್ಗಾ ಗಣಪತಯೇ ನಮಃ”ಈ ಮಂತ್ರದಿಂದ ದುರ್ಗ ಗಣಪತಿಯನ್ನು ಪೂಜಿಸಿ, ಗಣೇಶ ತಲ್ಪ ಶಾಸ್ತ್ರದಲ್ಲಿ ಇವನ ಪೂಜಾ ವಿಧಿ ವಿಧಾನದ ಬಗ್ಗೆ ಸಂಪೂರ್ಣ ವಿವರ ಸಿಗುತ್ತದೆ. ದುರ್ಗ ಗಣಪತಿ ಎಂದರೆ ದುರ್ಗತಿಯನ್ನು ನಾಶ ಮಾಡುವವನು. ಸದಾ ಕಾಲ ಭಕ್ತರಿಗೆ ಸಂತೋಷವನ್ನು ಕರುಣಿಸುತ್ತಾನೆ. ಕೈಗಳನ್ನು ಹೊಂದಿರುವ ದುರ್ಗಾ ಗಣಪತಿ ಭಕ್ತರ ದುಃಖವನ್ನು ದೂರ ಮಾಡುತ್ತಾನೆ. ಮಹಾರಾಷ್ಟ್ರದ ಕೊಲ್ಹಾಪುರದ ಮಹಾಲಕ್ಷ್ಮಿ ದೇಗುಲದಲ್ಲಿ ದುರ್ಗ ಗಣಪತಿಯ ಮೂರ್ತಿಯನ್ನು ನೋಡಬಹುದು. ದುರ್ಗ ಗಣಪತಿಯ ಆರಾಧನೆಯಿಂದ ತಾಯಿ ದುರ್ಗೆ ಮತ್ತು ಅವಳ ಮಗನಾದ ಗಣಪನ ಆಶೀರ್ವಾದ ಏಕಕಾಲದಲ್ಲಿ ಪ್ರಾಪ್ತಿಯಾಗುತ್ತದೆ.
ಯೋಗ ಗಣಪತಿ ರೂಪ:ಯೋಗ ಗಣಪತಿಯ ರೂಪ ಧ್ಯಾನ ಅವಸ್ಥೆಯಲ್ಲಿರುವ ಗಣಪನ ರೂಪವಿದು. ಮನೋಹರವಾಗಿ ಕಾಣುವ ಗಣಪ ಯೋಗ ಪೀಠದಲ್ಲಿ ವಿರಾಜಮಾನನಾಗಿದ್ದಾನೆ. ಉದಯಿಸುವ ಸೂರ್ಯನಂತೆ ಕಂಗೊಳಿಸುತ್ತಾನೆ . ಯೋಗ ಗಣಪತಿ ಇಂದ್ರನೀಲ ಮಣಿಯಂತೆ ಹೊಳೆಯುವ ನಿಲುವಂಗಿ ಧರಿಸಿದ್ದಾನೆ.
ಯೋಗ ಗಣಪತಿಯ ಪೂಜಾ ವಿಧಾನ ಮತ್ತು ಫಲ:“ಓಂ ಯೋಗ ಗಣಪತಯೇ ನಮಃ” ಈ ದಿವ್ಯ ಮಂತ್ರದಿಂದ ಗಣಪತಿಯನ್ನು ಪೂಜಿಸಬೇಕು. ಸಾಧಕರಿಗೆ ಆರಾಧ್ಯದೈವ ಯೋಗ ಗಣಪತಿ . ಇವನ ಆರಾಧನೆಯಿಂದ ಉತ್ತಮ ಸಾಧನೆಗೆ ದಾರಿ ಸಿಗುತ್ತದೆ. ಅಷ್ಟೇ ಅಲ್ಲ ಯೋಗ ಗಣಪತಿ ತನ್ನ ಭಕ್ತರಿಗೆ ಅದೃಷ್ಟವನ್ನು ತಂದು ಕೊಡುತ್ತಾನೆ . ಯೋಗ ಗಣಪತಿಯ ರೂಪ ಅತ್ಯಂತ ಸರಳ ಮತ್ತು ಸುಂದರ. ನಮ್ಮ ಜೀವನದಲ್ಲಿ ಅದೃಷ್ಟ ಇಲ್ಲ ಎಂದು ಕೊರಗುವವರು ಯೋಗ ಗಣಪತಿಯನ್ನು ಆರಾಧಿಸಿದರೆ ಅವರ ಅದೃಷ್ಟದ ಬಾಗಿಲು ತೆರೆಯುತ್ತದೆ.
ದುಂಡಿ ಗಣಪತಿ ರೂಪ:ಮುದ್ಗಲ ಪುರಾಣದಲ್ಲಿ ಡುಂಡಿ ಗಣಪತಿಯ ಉಲ್ಲೇಖವಿದೆ. ದುಂಡಿ ಗಣಪತಿಯ ಬಣ್ಣ ಕೆಂಪು, ಪದ್ಮಾಸನದಲ್ಲಿ ಕುಳಿತು ವಿರಾಜಮಾನನಾಗಿದ್ದಾನೆ.
ಗಣಪತಿಯ ಪೂಜಾ ವಿಧಾನ ಮತ್ತು ಪೂಜಾ ಫಲ:“ ಓಂ ದುಂಡಿ ಗಣಪತಯೇ ನಮಃ” ಈ ಮಂತ್ರದಿಂದ ಗಣಪನನ್ನು ಆರಾಧಿಸಬೇಕು. ಎಲ್ಲರಿಗೂ ಸಂತೋಷ ನೀಡುವ ವಿಶಿಷ್ಟ ಗಣಪ.ಇಷ್ಟಾರ್ಥಗಳನ್ನು ಅರಿತು ಕರುಣಿಸುವನು. ಕಾಶಿ ಕ್ಷೇತ್ರದ ನಿವಾಸಿಯಾಗಿದ್ದು, ವಿಶ್ವೇಶ್ವರ ದೇಗುಲದಲ್ಲಿ ಡುಂಡಿ ಗಣಪತಿಗೆ ಪೂಜೆ ನಡೆಯುತ್ತದೆ. ಕೇರಳದಲ್ಲಿರುವ ಎರ್ನಾಕುಲಂ ನಲ್ಲಿರುವ ದೇವಸ್ಥಾನವಾದ ಚೊಟ್ಟಾಣಿಕರ ಅಮ್ಮನ ದೇವಸ್ಥಾನದಲ್ಲಿಯೂ ಇದೆ. ದುಂಡಿ ಗಣಪತಿಯ ಮೂರ್ತಿ.
ಊರ್ಧ್ವ ಗಣಪತಿ ರೂಪ:ಊರ್ದ್ವ ಗಣಪತಿಯದ್ದು ಚಿನ್ನದ ಬಣ್ಣ, ಈ ಗಣಪ ಕಾಂತಿಯುಳ್ಳವನು, ಶಕ್ತಿ ದೇವತೆಯನ್ನು ಎಡ ತೊಡೆಯ ಮೇಲೆ ಕುಳ್ಳರಿಸಿಕೊಂಡು ಕಣ್ಣಿನ ದೃಷ್ಟಿ ಮೇಲ್ಮುಖವಾಗಿದೆ.
ಊರ್ದ್ವ ಗಣಪತಿಯ ಪೂಜಾ ವಿಧಾನ ಮತ್ತು ಫಲ:“ ಓಂ ನಮೋ ಭಗವತೇ ಏಕ ದಂಷ್ಟ್ರಾಯ, ಹಸ್ತಿ ಮುಖಾಯ ಲಂಬೋಧರಾಯ ಉಚ್ಚಿಷ್ಟ ಮಹಾತ್ಮನೇ ಆಂ ಕ್ರೌo ಹ್ರೀಂ ಗಂ ಘೆ ಘೆ ಸ್ವಾಹ”
ಈ ಮಂತ್ರದಿಂದ ಊರ್ಧ್ವ ಗಣಪತಿಯನ್ನು ಪೂಜಿಸಲಾಗುತ್ತದೆ. ಶಾಸ್ತ್ರ ಪರಂಪರೆಯಲ್ಲಿ ಊರ್ಧ್ವ ಗಣಪತಿಯ ಆರಾಧನೆ ಹೆಚ್ಚಾಗಿ ನಡೆಯುತ್ತದೆ. ವಿಶೇಷ ಶಕ್ತಿಗಾಗಿ ಗಣಪತಿಯ ಪೂಜೆಯನ್ನು ಮಾಡಲಾಗುತ್ತದೆ. ಯೋಗಿಗಳು ಮತ್ತು ಸಾಧಕರು ಗಣಪತಿಯನ್ನು ಹೆಚ್ಚಾಗಿ ಪೂಜಿಸುತ್ತಾರೆ. ಗಣಪತಿಗೆ ತನ್ನ ಭಕ್ತರ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ವಿಶೇಷ ಶಕ್ತಿ ಇದೆ. ಶಕ್ತಿ ಸಹಿತನಾಗಿರುವ ಓರ್ವ ಗಣಪತಿಯ ಆರಾಧನೆ ಅತ್ಯಂತ ಶ್ರೇಯಸ್ಕರ. ಜೀವನದಲ್ಲಿ ಮುಂದೆ ಬರಬೇಕು ಎನ್ನುವವರು ಈ ಗಣಪನ ಪಾದ ಹಿಡಿದರೆ ಯಶಸ್ಸು ಖಚಿತ.
ಉದ್ದಂಡ ಗಣಪತಿಯ ರೂಪ:ಉದ್ದಂಡ ಗಣಪತಿಯ ರೂಪ ಕೈಯಲ್ಲಿ ಶಸ್ತ್ರ ಹಿಡಿದು ಉದ್ದಂಡ ಗಣಪತಿಯ ಬಣ್ಣ ಕೆಂಪು, ಈ ಗಣಪನಿಗೆ ಹತ್ತು ಕೈಗಳು, ಕಬ್ಬಿನ ಜಲ್ಲೆಯಿಂದಾದ ಬಿಲ್ಲನ್ನು ಹಿಡಿದಿದ್ದಾನೆ, ಇವನ ಸೊಂಡಿಲು ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ ಮುಂದಕ್ಕೆ ಇದೆ .ಇದು ನೋಡಲು ಮನೋಹರ .ಶಕ್ತಿ ದೇವಿ ಸಹಿತನಾಗಿದ್ದಾನೆ.
ಉದ್ದಂಡ ಗಣಪತಿಯ ಪೂಜಾ ವಿಧಾನ ಮತ್ತುಫಲ:“ ಓಂ ಉದ್ದಂಡ ಗಣಪತಯೇ ನಮಃ” ಈ ಮಂತ್ರದಿಂದ ಗಣಪತಿಯನ್ನು ಪೂಜಿಸಿ ಉದ್ದಂಡ ಎಂದರೇ ಶತ್ರುಗಳನ್ನು ನಾಶ ಮಾಡುವವನು ಎಂದರ್ಥ. ಶತ್ರುಗಳ ಭಯ ಯಾರಿಗೆ ಹೆಚ್ಚಾಗಿ ಇರುತ್ತದೆ ಅವರು ಶತ್ರು ನಾಶಕಾಗಿ ಉದ್ದಂಡ ಗಣಪನನ್ನು ಪೂಜಿಸಬೇಕು. ಗಣಪತಿ ಧರ್ಮವನ್ನು ರಕ್ಷಿಸುವುದಾಗಿ ಶಾಕ್ತ ಪರಂಪರೆಯವರು ಉದ್ದಂಡ ಗಣಪತಿಯನ್ನು ಹೆಚ್ಚಾಗಿ ಪೂಜಿಸುತ್ತಾರೆ. ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಉದ್ದಂಡ ಗಣಪತಿಯ ಸುಂದರವಾದ ಮೂರ್ತಿ ಕಾಣಸಿಗುತ್ತದೆ.
ಸೃಷ್ಟಿ ಗಣಪತಿ ರೂಪ:ಈ ಗಣಪತಿ ಚತುರ್ಭುಜ ಉಳ್ಳವನು. ಸೃಷ್ಟಿ ಗಣಪತಿಯ ಬಣ್ಣ ಕೆಂಪು, ಸೃಷ್ಟಿ ಕಾರ್ಯದಲ್ಲಿ ಎದುರಾಗುವ ವಿಘ್ನಗಳನ್ನು ಬಗೆಹರಿಸುತ್ತಾನೆ.
ಸೃಷ್ಟಿ ಗಣಪತಿಯ ಪೂಜಾ ವಿಧಾನ ಮತ್ತುಫಲ:“ ಓಂ ಸೃಷ್ಟಿ ಗಣಪತಯೇ ನಮಃ” ಈ ಮಂತ್ರದಿಂದ ಸೃಷ್ಟಿ ಗಣಪತಿಯನ್ನು ಪೂಜಿಸಲಾಗುತ್ತದೆ. ಇವನು ಸೃಷ್ಟಿಯ ಗಣಪನಾದ್ದರಿಂದ ಇವನು ಸಂತಾನವಿಲ್ಲದವರಿಗೆ ವಿಶೇಷ ಆಶೀರ್ವಾದ ನೀಡುತ್ತಾನೆ. ಜೀವನವನ್ನು ಆನಂದ ಮಯವಾಗಿಸುತ್ತಾನೆ. ಸೃಷ್ಟಿ ಗಣಪತಿಯ ದೇವಸ್ಥಾನ ತಮಿಳುನಾಡಿನ ಕುಂಬಕೋಣಂ ಸಮೀಪದಲ್ಲಿದೆ. ಸ್ವಾಮಿ ದೇವಾಲಯದಲ್ಲಿ ಸೃಷ್ಟಿ ಗಣಪತಿಗೆ ವಿಜೃಂಭಣೆಯ ಪೂಜೆ ನಡೆಯುತ್ತದೆ.
ಸಿಂಹ ಗಣಪತಿ ರೂಪ:ಮುದ್ಗಲ ಪುರಾಣದಲ್ಲಿ ಸಿಂಹ ಗಣಪತಿಯ ಉಲ್ಲೇಖವಿದೆ. ಗಣಪತಿಯ ರೂಪಗಳಲ್ಲಿ ಸಿಂಹದ ರೂಪ ತುಂಬಾ ವಿಶಿಷ್ಟ. ಇವನು ಸಿಂಹದ ಮುಖವುಳ್ಳವನು ಮತ್ತು ಸಿಂಹದಂತೆ ದೊಡ್ಡ ಕಣ್ಣುಗಳು, ಚಿಕ್ಕ ಕಿವಿಗಳು, ತಲೆಯಲ್ಲಿ ದಟ್ಟವಾದ ಕೇಶ ಮತ್ತು ಈ ಗಣಪನ ಕೈಯಲ್ಲಿ ಕಲ್ಪವೃಕ್ಷದ ಬಳ್ಳಿ ಹೂವಿನ ಗೊಂಚಲು ಇದೆ. ಚಂದ್ರನಂತೆ ಬಿಳಿಯ ದೇಹ ಮತ್ತು ಕಾಂತಿಯಿಂದ ಕಂಗೊಳಿಸುತ್ತಾನೆ.
ಸಿಂಹ ಗಣಪತಿಯ ಪೂಜಾ ವಿಧಾನ ಮತ್ತು ಫಲ:“ ಓಂ ಸಿಂಹ ಗಣಪತಯೇ ನಮಃ” ಈ ಮಂತ್ರದಿಂದ ಸಿಂಹ ಗಣಪನನ್ನು ಪೂಜಿಸಿ, ಸಂಕಟಹರಣ ಗಣಪತಿ ರೂಪವೇ ಸಿಂಹ ಗಣಪತಿ ರೂಪ, ಜೀವನದ ಸಂಕಟಗಳಿಂದ ಪಾರಾಗಲು ಸಿಂಹ ಗಣಪತಿಯನ್ನು ಪೂಜಿಸಲಾಗುತ್ತದೆ. ರಾಜಕೀಯದಲ್ಲಿ ಹೆಸರು ಮಾಡಬೇಕು ಎನ್ನುವವರು ಸಿಂಹ ಗಣಪತಿಯನ್ನು ಆರಾಧಿಸುತ್ತಾರೆ. ತನ್ನ ಭಕ್ತರಿಗೆ ಸಿಂಹ ಸದೃಶವಾದ ಶಕ್ತಿ, ಸಾಮರ್ಥ್ಯ ದಯಪಾಲಿಸುವ ಸಿಂಹ ಗಣಪತಿ ಶತ್ರುಗಳಿಂದ ತಪ್ಪಿಸಿಕೊಳ್ಳುವ ರಕ್ಷಾ ಕವಚವಾಗಿರುತ್ತಾನೆ. ಏನೇ ಕಷ್ಟ ಬಂದರೂ ಸಿಂಹ ಗಣಪತಿಯನ್ನು ಆರಾಧಿಸಿದರೆ ಸಾಕು, ನೆನೆದರೆ ಸಾಕು ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತವೆ. ಮಹಾರಾಷ್ಟ್ರದ ಪಂಡರಾಪುರದಲ್ಲಿ ಸಿಂಹ ಗಣಪತಿಯ ಸುಂದರ ಮೂರ್ತಿಯನ್ನು ಕಾಣಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
