ನಿಮಗೆಲ್ಲರಿಗೂ ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು….
ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಕೆ ಕಡಿಮೆಯಾಗುತ್ತಿದೆ, ಇದರಿಂದ ಪ್ರತಿವರ್ಷ ಗಣೇಶ ಪ್ರತಿಷ್ಟಾಪನೆ ನಂತರ ನೀರಿನಲ್ಲಿ ವಿಸರ್ಜನೆ ಮಾಡಿದ ಗಣೇಶ ಮೂರ್ತಿಗೆ ಬಳಿದ ರಾಸಾಯನಿಕ ಫ್ಲೋರೈಡ್ ಯುಕ್ತ ನೀರಿನಲ್ಲಿ ಶೇಖರಣೆಯಾಗಿ ಮತ್ತಷ್ಟು ಹಾನಿ ಮಾಡುತ್ತಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.
ಗಣೇಶ ಚತುರ್ಥಿ ಹಬ್ಬದಲ್ಲಿ ಜೇಡಿಮಣ್ಣಿನಲ್ಲಿ ಮಾಡಿದ, ವಿಷಕರ ಬಣ್ಣಗಳಿಲ್ಲದ ಮತ್ತು ನಿಸರ್ಗದತ್ತ ಬಣ್ಣಗಳನ್ನು ಮಾತ್ರ ಬಳಸಿದ ಗಣಪತಿಯ ಮೂರ್ತಿಗಳನ್ನೇ ಖರೀದಿಸಿ ಸ್ಥಾಪಿಸಬೇಕು ಮತ್ತು ಹಬ್ಬವನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿ ವಿಧಾನದಲ್ಲಿ ಆಚರಿಸಬೇಕು ಎಂಬ ಅಭಿಯಾನವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆಗಸ್ಟ್ ೫ರಿಂದ ಆರಂಭಿಸಿದೆ.
ಗಣೇಶ ಚತುರ್ಥಿಗೆಂದು ಈಗಾಗಲೇ ಬೆಂಗಳೂರಿನ ಬೀದಿಗಳಲ್ಲಿ ಗಣಪತಿ ಮೂರ್ತಿಗಳು ಮಾರಾಟಕ್ಕೆ ಲಭ್ಯವಾಗುತ್ತಿವೆ. ಆಳೆತ್ತರದ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಆದರೆ ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿಗಳನ್ನೇ ಬಳಸುವಂತೆ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಮನವಿ ಮಾಡಿವೆ.
ಮಣ್ಣಿನ ಗಣಪನೇ ನೈಜ, ಶ್ರೇಷ್ಠ ಗಣಪ; ವಿಷಕರ ಮೂರ್ತಿಗಳನ್ನು ಖರೀದಿಸಬೇಡಿ! ಹಾಗೆ ಮಾಡಿ ಜಲಮೂಲಗಳನ್ನು ಕಲುಷಿತಗೊಳಿಸಬೇಡಿ. ಇದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಳಕಳಿಯ ವಿನಂತಿ. ಹಬ್ಬವನ್ನು ನಿಸರ್ಗದತ್ತ ವಸ್ತುಗಳಿಂದ, ಹೂವು, ಹಣ್ಣುಗಳಿಂದ ಆಚರಿಸೋಣ. ಜೇಡಿ ಮಣ್ಣಿನ ಗಣಪನನ್ನು ಪೂಜಿಸೋಣ. ಸೀಸಯುಕ್ತ ಬಣ್ಣಗಳಿಂದ ಅಲಂಕೃತವಾದ ಗಣೇಶ ಮೂರ್ತಿಗಳನ್ನು ಖರೀದಿ ಮಾಡಬೇಡಿ.
`ಮಣ್ಣಿನಿಂದಲೇ ಮಾಡಿದ ಪುಟ್ಟ ಗಣಪನನ್ನು ಪೂಜಿಸಿ ಆನಂದಿಸಿ; ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸಿ’ `ಸಾಧ್ಯವಿದ್ದಷ್ಟೂ ಮಣ್ಣಿನ, ಚಿಕ್ಕ ಗಣಪನನ್ನೇ ಬಳಸಿ; ಪ್ಲಾಸ್ಟರ್ ಆಫ್ ಪ್ಯಾರಿಸ್ ರೂಪಿತ ಗಣಪ ಬೇಡ. ಬಣ್ಣ ಬೇಕೇ ಬೇಕು ಎಂದಿದ್ದರೆ ನಿಸರ್ಗದತ್ತ ಬಣ್ಣ (ನ್ಯಾಚುರಲ್ ಡೈ) ಹಚ್ಚಿ; ಪ್ಲಾಸ್ಟಿಕ್ ಅಲಂಕಾರ ಬೇಡ, ಪಟಾಕಿ ಸುಟ್ಟು ಕಸ ಮಾಡಬೇಡಿ, ಮೈಕ್ ಹಚ್ಚಿ ಗಲಾಟೆ ಮಾಡಬೇಡಿ; ಗಣಪನನ್ನು ದೊಡ್ಡ ಗಣಪ ಮೂರ್ತಿಗಳನ್ನು ಮರುಬಳಕೆ ಮಾಡಿ’
ಒಟ್ಟಿನಲ್ಲಿ ಶೃದ್ಧಾ ಭಕ್ತಿಯ ಹಬ್ಬದ ಅಬ್ಬರದಲ್ಲಿ ನಾವು ಪರಿಸರ ಕಾಳಜಿಯನ್ನು ಮರೆಯುತ್ತೇವೆ. ಆದರೆ ಹಬ್ಬದ ಜೊತೆಯಲ್ಲಿ ನಮಗೆ ನಮ್ಮ ಜವಾಬ್ದಾರಿ ನೆನಪಿಸುವ ಪ್ರಯತ್ನಕ್ಕೆ ಮುಂದಾಗಿ, ಮತ್ಯಾಕೆ ತಡ ನೀವು ನಿಮ್ಮ ಮನೆಗೆ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣಪನನ್ನು ಬುಕ್ ಮಾಡಲು ಈಗಲೇ ಕರೆ ಮಾಡಿ. ನಿಮಗೆಲ್ಲರಿಗೂ ಗೌರಿ – ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು….
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
