ಸೆಪ್ಟೆಂಬರ್ 19, 2023 ಮಂಗಳವಾರ
ವರ್ಷ : 1945, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ಚತುರ್ಥೀ : Sep 18 12:39 pm – Sep 19 01:43 pm; ಪಂಚಮೀ : Sep 19 01:43 pm – Sep 20 02:16 pm
ನಕ್ಷತ್ರ : ಸ್ವಾತಿ: Sep 18 12:07 pm – Sep 19 01:48 pm; ವಿಶಾಖೆ: Sep 19 01:48 pm – Sep 20 02:58 pm
ಯೋಗ : ವೈಧೃತಿ: Sep 19 04:24 am – Sep 20 03:57 am; ವಿಷ್ಕಂಭ: Sep 20 03:57 am – Sep 21 03:05 am
ಕರಣ : ವಿಷ್ಟಿ: Sep 19 01:15 am – Sep 19 01:43 pm; ಬಾವ: Sep 19 01:43 pm – Sep 20 02:04 am; ಬಾಲವ: Sep 20 02:04 am – Sep 20 02:16 pm
Time to be Avoided
ರಾಹುಕಾಲ : 3:14 PM to 4:44 PM
ಯಮಗಂಡ : 9:12 AM to 10:43 AM
ದುರ್ಮುಹುರ್ತ : 08:36 AM to 09:24 AM, 11:01 PM to 11:49 PM
ವಿಷ : 07:40 PM to 09:21 PM
ಗುಳಿಕ : 12:13 PM to 1:43 PM
Good Time to be Used
ಅಮೃತಕಾಲ : None
ಅಭಿಜಿತ್ : 11:49 AM to 12:37 PM
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:14 PM
ಪ್ರಶಂಸೆಯ ಮಾತುಗಳಿಂದ ಹಿರಿಹಿರಿ ಹಿಗ್ಗದಿರಿ. ಧೂರ್ತರು ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ನಿಮಗೆ ಹಾನಿ ಮಾಡಲು ಸಂಚು ಹೂಡುವರು. ಮರೆಯದೇ ಕುಲದೇವರ ಪ್ರಾರ್ಥನೆ ಮತ್ತು ಶಿವನ ಆರಾಧನೆ ಮಾಡಿ.
ನಿಷ್ಠುರ ನುಡಿಯನ್ನಾಡುವ ನಿಮ್ಮ ಮುಂದೆ ಕೆಲವರು ತಗ್ಗಿ ಬಗ್ಗಿ ನಡೆಯುವರು. ಆದರೆ ಅವರು ಹೃದಯಪೂರ್ವಕವಾಗಿ ನಿಮ್ಮನ್ನು ಗೌರವಿಸುವರು ಎಂದು ನೀವು ತಪ್ಪಾಗಿ ಅಥೈರ್‍ಸಿಕೊಳ್ಳುವಿರಿ. ಆನಂತರ ವಿಷಯ ತಿಳಿದು ಪಶ್ಚಾತ್ತಾಪ ಪಡುತ್ತೀರ.
ಜನರು ನಿಮ್ಮನ್ನು ವಿನಾಕಾರಣ ಟೀಕಿಸುವರು. ಆದರೆ ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿರುವುದರಿಂದ ಹಾಗೂ ನೀವು ಮಾಡುತ್ತಿರುವ ಕಾರ್ಯ ಉತ್ತಮವಾಗಿರುವುದರಿಂದ ಅನ್ಯರ ಟೀಕೆಗಳಿಗೆ ಹೆದರುವ ಅವಶ್ಯಕತೆ ಇಲ್ಲ.
ನನ್ನ ಕೈಲಿ ಆಗುವುದಿಲ್ಲ ಎಂದು ಸುಮ್ಮನೆ ಕುಳಿತರೆ ಏನೂ ಪ್ರಯೋಜನವಿಲ್ಲ. ದೀರ್ಘವಾದ ದಾರಿ ಸವೆಸಲು ಮೊದಲ ಹೆಜ್ಜೆಯನ್ನು ಇಡಬೇಕು. ಮುಂದೆ ಹೆಜ್ಜೆ ಹಾಕುತ್ತಾ ಹೋದಂತೆ ನೀವು ಮುಟ್ಟುವ ಗುರಿಯ ದಾರಿ ಹತ್ತಿರವಾಗುತ್ತದೆ.
ನಿಮ್ಮವರೇ ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ. ಇದಕ್ಕೆ ಈ ಹಿಂದೆ ಮಾಡಿದ ಸ್ವಯಂಕೃತ ಅಪರಾಧದ ಫಲವೇ ಕಾರಣ. ಆದಷ್ಟು ತಾಳ್ಮೆಯಿಂದ ಇರಿ. ನಿಮ್ಮನ್ನು ನೀವು ವಿಮರ್ಶಿಸಿಕೊಳ್ಳಲು ಇದು ಸೂಕ್ತ ಕಾಲ.
ಮಿತ್ರರು ಬರುತ್ತಾರೆ, ಹೋಗುತ್ತಾರೆ ಎಂಬ ಭಾವನೆ ಬೇಡ. ಅವರ ಬೇಕು ಬೇಡಗಳನ್ನು ಕಿವಿಗೊಟ್ಟು ಆಲಿಸಿ. ಅವರ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ. ಇದರಿಂದ ಉಭಯರಿಗೂ ಹೆಚ್ಚು ಅನುಕೂಲವಾಗುವುದು.
ದೂರದೃಷ್ಟಿಯಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಕ್ಕೆ ಜನರಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುವುದು. ಇದರಿಂದ ನಿಮಗೆ ಹೆಚ್ಚು ಸಂತೋಷವಾಗುವುದು.
ಅನಿರೀಕ್ಷಿತ ಖರ್ಚುವೆಚ್ಚಗಳು ಹೆಚ್ಚಾಗುವವು. ನೆರೆಹೊರೆಯವರೊಡನೆ ಸೌಹಾರ್ದದಿಂದ ವರ್ತಿಸಿ. ನಿಮ್ಮ ಕೆಲಸ ಕಾರ್ಯದಲ್ಲಿನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು.
ಯಾವುದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದಿರಿ. ತಾಳಿದವನು ಬಾಳಿಯಾನು ಎಂಬ ಮಾತನ್ನು ಮರೆಯದಿರಿ. ಇದರಿಂದ ನಿಮ್ಮ ಇಚ್ಛಿತ ಗುರಿಯನ್ನು ತಲುಪಲು ಸಹಕಾರಿಯಾಗುವುದು. ದುರ್ಗಾದೇವಿ ಜಪ ಮಾಡಿ.
ನಿಮ್ಮ ಭಾವನೆಗಳಿಗೆ ಗೌರವ ಕೊಡುವ ಆತ್ಮೀಯರ ಸಂಖ್ಯೆ ಹೆಚ್ಚಾಗಲಿದೆ.ಆರೋಗ್ಯದ ವಿಷಯದಲ್ಲಿ ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ.
ಕುಟುಂಬದಲ್ಲಿ ಸೂಕ್ಷ ್ಮರೂಪದ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆ ಇರುವುದರಿಂದ ಮನೆಯ ಸದಸ್ಯರ ವಿಚಾರಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಪ್ರಗತಿ ತೋರುವುದಿಲ್ಲ.
ದಿಢೀರ್ ಶ್ರೀಮಂತರಾಗಬೇಕೆಂಬ ಯೋಜನೆಗಳನ್ನು ಕೈಬಿಡಿ. ಇದೇ ತೆರನಾದ ಯೋಜನೆಗಳಿಂದ ಈಗಾಗಲೇ ಸಾಕಷ್ಟು ಹಣ ಕಳೆದುಕೊಂಡಿರುವಿರಿ. ನಿಮ್ಮ ಇತಿಮಿತಿಗಳನ್ನು ಅರಿತು ನಡೆಯುವುದು ಒಳ್ಳೆಯದು. ಹಣವನ್ನು ನೀರಿನಂತೆ ಖರ್ಚು ಮಾಡದಿರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
