ಸೆಪ್ಟೆಂಬರ್ 20, 2023 ಬುಧವಾರ
ವರ್ಷ : 1945, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ
Panchangam
ತಿಥಿ : ಪಂಚಮೀ : Sep 19 01:43 pm – Sep 20 02:16 pm; ಷಷ್ಠೀ : Sep 20 02:16 pm – Sep 21 02:14 pm
ನಕ್ಷತ್ರ : ವಿಶಾಖೆ: Sep 19 01:48 pm – Sep 20 02:58 pm; ಅನುರಾಧ: Sep 20 02:58 pm – Sep 21 03:35 pm
ಯೋಗ : ವಿಷ್ಕಂಭ: Sep 20 03:57 am – Sep 21 03:05 am; ಪ್ರೀತಿ: Sep 21 03:05 am – Sep 22 01:44 am
ಕರಣ : ಬಾಲವ: Sep 20 02:04 am – Sep 20 02:16 pm; ಕುಲವ: Sep 20 02:16 pm – Sep 21 02:20 am; ತೈತುಲ: Sep 21 02:20 am – Sep 21 02:15 pm
Time to be Avoided
ರಾಹುಕಾಲ : 12:13 PM to 1:43 PM
ಯಮಗಂಡ : 7:42 AM to 9:12 AM
ದುರ್ಮುಹುರ್ತ : 11:49 AM to 12:37 PM
ವಿಷ : 07:04 PM to 08:43 PM
ಗುಳಿಕ : 10:42 AM to 12:13 PM
Good Time to be Used
ಅಮೃತಕಾಲ : None
Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:14 PM
ಮನೋಕಾಮನೆಗಳು ಈ ದಿನ ಈಡೇರುವುದು. ಬೆಲೆಯುಳ್ಳ ವಸ್ತು, ವಸ್ತ್ರಗಳ ಖರೀದಿ ಮಾಡುವಿರಿ. ಉದ್ಯೋಗದಲ್ಲಿ ಸ್ಥಿರತೆ ಕಂಡು ಬರುವುದು. ಮಿತ್ರರು ಸಕಾಲದಲ್ಲಿ ಸಹಾಯ ಮಾಡುವುದರಿಂದ ಈ ಯುಗಾದಿಯು ನಿಮ್ಮಲ್ಲಿ ಉತ್ಸಾಹ ತುಂಬುವುದು.
ಮಾನಸಿಕ ಕ್ಲೇಷವು ತುಸು ಮಟ್ಟಿಗೆ ಇರುತ್ತದೆ. ಆಂಜನೇಯ ಸ್ತೋತ್ರವನ್ನು ತಪ್ಪದೆ ಪಠಿಸಿರಿ. ಹಳೆಯ ಸ್ನೇಹಿತರ ಭೇಟಿ ಸಾಧ್ಯತೆಯಿದೆ. ಕಚೇರಿಯ ಪರೀಕ್ಷೆಯಲ್ಲಿ ತೇರ್ಗಡೆಗಾಗಿ ಬಹು ಪರಿಶ್ರಮ ಪಡಬೇಕಾಗುವುದು.ಈ ದಿನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಮಾತಾ ದುರ್ಗಾದೇವಿಯನ್ನು ಸ್ಮರಿಸಿ ಹೊರಗೆ ಹೊರಡಿ.
ಹೊಸ ಆಸ್ತಿ, ಮನೆ ಖರೀದಿಸುವ ಬಗ್ಗೆ ಚಿಂತಿಸುವಿರಿ. ಕೆಲವರು ಹಳೆ ಮನೆಯ ರಿಪೇರಿಯ ಅಂದಾಜು ವೆಚ್ಚ ತಯಾರಿಸುವಲ್ಲಿ ಮಗ್ನರಾಗುವಿರಿ. ಧನಕಾರಕ ಗುರುವು ನಿಮ್ಮ ಮನೋಕಾಮನೆಗಳನ್ನು ಪೂರ್ಣಗೊಳಿಸುವರು.
ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಕೌಟುಂಬಿಕ ಸಂಗತಿಗಳಲ್ಲಿ ಮಹತ್ವದ ಬದಲಾವಣೆ ಆಗುವುದು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ವಿಪರೀತ ಖರ್ಚು ಬರುವುದು. ಉದರ ಶೂಲೆಗೆ ಸಂಬಂಧಪಟ್ಟಂತೆ ಸೂಕ್ತ ಔಷಧಿ ಸೇವಿಸಿರಿ.
ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣವನ್ನು ಹಾಕಿಕೊಳ್ಳುವುದು ಒಳ್ಳೆಯದು. ಗುರು ಹಿರಿಯರ ಮಾರ್ಗದರ್ಶನ ಪಡೆಯಿರಿ.ಹಮ್ಮಿಕೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು. ಇದಕ್ಕೆ ಬಾಳಸಂಗಾತಿಯ ಸಹಾಯವು ಇರುತ್ತದೆ.
ಆರೋಗ್ಯದ ಕುರಿತು ಎಚ್ಚರಿಕೆ ಇರಲಿ. ವ್ಯವಹಾರಗಳಲ್ಲಿನ ವ್ಯತ್ಯಯಕ್ಕೆ ಚಿಂತಿಸದಿರಿ. ಎಲ್ಲವೂ ತನ್ನಿಂದ ತಾನೇ ಒಂದು ಹಂತಕ್ಕೆ ಬಂದು ನಿಲ್ಲುವುದು. ಗುರುವಿನ ಬೆಂಬಲವಿದ್ದು ಹಣಕಾಸಿಗೆ ಕೊರತೆಯಿರುವುದಿಲ್ಲ.
ಆರ್ಥಿಕವಾಗಿ ಈ ದಿನ ಉತ್ತಮ ದಿನವಾದರೂ ಮನಸ್ಸಿನ ಚಾಂಚಲ್ಯದಿಂದ ಆಧಿಕ ಖರ್ಚು ಮಾಡುವಿರಿ. ಮನೆಯಲ್ಲಿ ಮೃಷ್ಟಾನ್ನ ಭೋಜನ ಸವಿಯುವಿರಿ. ಬಂಧು-ಬಾಂಧವರಿಂದ ಸುವಾರ್ತೆ ಕೇಳುವಿರಿ.
ಈ ದಿನ ಇಚ್ಛಿಸಿದ ಕಾರ್ಯದಲ್ಲಿ ಅಲ್ಪ ಹಿನ್ನಡೆಯಾಗುವುದು. ಮನಸ್ಸಿಗೆ ಕಿರಿಕಿರಿ ಉಂಟಾಗುವುದು. ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎನ್ನುವಂತೆ ಈ ದಿನ ಮಾತುಕತೆಯಲ್ಲಿ ಮೃದುತ್ವವನ್ನು ರೂಢಿಸಿಕೊಳ್ಳಿರಿ.
ಕಚೇರಿಯ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುವುದು. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಆಸ್ತಿ ಮಾರಾಟಕ್ಕೆ ಯತ್ನ ಬೇಡ. ಅಧ್ಯಯನದಲ್ಲಿ ಗಮನಾರ್ಹ ಬೆಳವಣಿಗೆ ಕಂಡು ಬರುವುದು. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ.
ಎಲ್ಲರನ್ನು ಎಲ್ಲಾ ಕಾಲಕ್ಕೂ ಸಂತೋಷಪಡಿಸಲು ಅಗುವುದಿಲ್ಲ. ಆದರೆ ನೀವು ಆಡುವ ಮಾತು ಇನ್ನೊಬ್ಬರ ಮನ ನೋಯಿಸದಂತೆ ಇರಲಿ. ದೃಢ ನಿರ್ಧಾರವು ನಿಮ್ಮ ಜೀವನದ ಗತಿಯನ್ನು ಬದಲಿಸುವುದು. ಅಧ್ಯಯನದಲ್ಲಿ ಗಮನಾರ್ಹ ಬೆಳವಣಿಗೆ ಕಂಡು ಬರುವುದು.
ಗ್ರಹಗಳು ಈ ದಿನ ನಿಮ್ಮ ವಿರುದ್ಧವಾಗಿದ್ದು ಮಹತ್ತರ ಕಾರ್ಯಗಳನ್ನು ಹಮ್ಮಿಕೊಳ್ಳದಿರುವುದು ಕ್ಷೇಮಕರ. ಆದಷ್ಟು ತಾಳ್ಮೆಯಿಂದ ಇರಿ. ನಿಧಾನಗತಿಯಿಂದ ಕೆಲಸ ಕಾರ್ಯಗಳು ಆಗುವವು. ಹಿರಿಯರ ಆಶೀರ್ವಾದ ಪಡೆಯಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ.
ನೀವು ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಅಂತೆಯೇ ನೀವು ಮುಂದೆ ಮಾಡಬೇಕೆನ್ನುವ ಕ್ರೀಯಾಶೀಲ ಕೆಲಸಗಳಿಗೆ ಸ್ನೇಹಿತರ ನೆರವು ಪಡೆಯುವಿರಿ. ಹಿರಿಯರೊಡನೆ ಅನಗತ್ಯ ವಾದ ಬೇಡ. ಸಂಬಂಧಿಕರೊಂದಿಗೆ ನಿಷ್ಠುರ ಮಾತುಕತೆ ಮಾಡದಿರುವುದು ಕ್ಷೇಮಕರ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
