fbpx
ಸಮಾಚಾರ

ನವೆಂಬರ್ 15: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ನವೆಂಬರ್ 15, 2023 ಬುಧವಾರ
ವರ್ಷ : 1945, ಶೋಭಾಕೃತ
ತಿಂಗಳು : ಕಾರ್ತೀಕ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಿತೀಯಾ : Nov 14 02:36 pm – Nov 15 01:47 pm; ತೃತೀಯಾ : Nov 15 01:47 pm – Nov 16 12:35 pm
ನಕ್ಷತ್ರ : ಜ್ಯೇಷ್ಠ: Nov 15 03:24 am – Nov 16 03:01 am; ಮೂಲ: Nov 16 03:01 am – Nov 17 02:17 am
ಯೋಗ : ಅತಿಗಂಡ: Nov 14 01:56 pm – Nov 15 12:07 pm; ಸುಕರ್ಮ: Nov 15 12:07 pm – Nov 16 09:59 am
ಕರಣ : ಕುಲವ: Nov 15 02:15 am – Nov 15 01:47 pm; ತೈತುಲ: Nov 15 01:47 pm – Nov 16 01:14 am; ಗರಿಜ: Nov 16 01:14 am – Nov 16 12:35 pm

Time to be Avoided
ರಾಹುಕಾಲ : 12:04 PM to 1:29 PM
ಯಮಗಂಡ : 7:47 AM to 9:12 AM
ದುರ್ಮುಹುರ್ತ : 11:41 AM to 12:26 PM
ವಿಷ : 12:43 AM to 02:17 AM
ಗುಳಿಕ : 10:38 AM to 12:04 PM

Good Time to be Used
ಅಮೃತಕಾಲ : 06:21 PM to 07:56 PM

Other Data
ಸೂರ್ಯೋದಯ : 6:21 AM
ಸುರ್ಯಾಸ್ತಮಯ : 5:46 PM

 

 

 

ಈಗಾಗಲೆ ಮಾಡಿರುವ ಸಾಲ ಬೆಟ್ಟದಷ್ಟಿದೆ. ಸಾಲದಲ್ಲಿ ಸಾಲ ಎಂದು ಪುನಃ ಭಂಡ ಧೈರ್ಯದಿಂದ ಸಾಲ ಮಾಡದಿರಿ. ನಿಮ್ಮ ಮೇಲಿನ ಅಭಿಮಾನಕ್ಕೆ ಯಾರಾದರೂ ಸಾಲ ಕೊಡಲು ತಯಾರಿರುತ್ತಾರೆ. ಆದರೆ ಸಾಲ ತೀರುಸುವ ದಾರಿ ತಿಳಿದುಕೊಳ್ಳಿ.

ಆರ್ಥಿಕ ವಿಚಾರದಲ್ಲಿ ನಿಮ್ಮನ್ನು ಬೆಸ್ತು ಬೀಳಿಸುವ ಜನರು ನಿಮ್ಮ ಸುತ್ತಲೂ ಇರುವರು. ನಿಮಗೆ ಅವರು ಮಂಕುಬೂದಿ ಎರಚಿ ಹಣ ಲಪಟಾಯಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆಂಜನೇಯ ಸ್ತೋತ್ರ ಪಠಿಸಿ.

 

ವೃಥಾ ಒಂದು ಗಂಭೀರ ಆರೋಪ ಬಿರುಗಾಳಿಯಂತೆ ಬಂದು ಅಪ್ಪಳಿಸುವ ಸಾಧ್ಯತೆ ಇದೆ. ಅನಗತ್ಯ ಭಯ ಬೇಡ. ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಆರಾಧಿಸಿ. ಒಳಿತಾಗುವುದು.

ಮನೆಯಲ್ಲಿ ನೀವೇ ಒಂದು. ಉಳಿದವರು ಒಂದು ಎಂಬ ಭಾವನೆ ಬರಬಹುದು. ಆದರೂ ಮುಖದಲ್ಲಿ ನಗುವಿನ ಮುಖವಾಡವನ್ನು ಅನಿವಾರ್ಯವಾಗಿ ಧರಿಸಿಕೊಳ್ಳಬೇಕಾಗುವುದು. ನಗುವ ವ್ಯಕ್ತಿಯನ್ನು ಆದರಿಸುವವರೇ ಹೊರತು ಅಳುವವರನ್ನು ಅಲ್ಲ.

 

ನಿರಂತರವಾದ ವಾದವಿವಾದಗಳು ಪ್ರಯೋಜನ ನೀಡಲಾರವು. ಮೌನದಿಂದ ಕೆಲಸ ಸಾಧಿಸಿ ನಿರಾಳತೆಯಿಂದ ಬದುಕಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು. ಪಡೆಯಿರಿ.

 

ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದೇನೆ ಎಂಬ ಹಿಂಜರಿಕೆ ನಿಯಂತ್ರಿಸಿ. ಬುದ್ಧಿ ಚಾತುರ‍್ಯದಿಂದಲೇ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವಿರಿ ಮತ್ತು ನಿಮ್ಮ ಹೋರಾಟದಲ್ಲಿ ಜಯ ಸಾಧಿಸುವಿರಿ.

 

 

ನಿರಾಯಾಸ ಮಾತುಗಳಿಂದ ಹತ್ತು ಹಲವು ಕೆಲಸಗಳನ್ನು ಸಾಧಿಸುವಿರಿ. ಆದರೆ ಅದೇ ಅಹಂ ಆಗದಿರಲಿ. ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರ ಮನುಷ್ಯನ ಅಧಃಪತನಕ್ಕೆ ಕಾರಣವಾಗುವುದು.

 

 

ಸರಳತನ ಇರಬೇಕು. ಆದರೆ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುವಷ್ಟು ಇರಬಾರದು. ಕೆಲವು ವಿಷಯಗಳಲ್ಲಿ ನೀವು ಹುಂಬುತನದಿಂದ ವರ್ತಿಸುವುದನ್ನು ಬಿಟ್ಟಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

 

ಎಲ್ಲಾ ವಿಚಾರಗಳಿಗೂ ಗೆಳೆಯರನ್ನು ಆಶ್ರಯಿಸುವುದು ಸೂಕ್ತವಲ್ಲ. ಕೆಲವು ವಿಚಾರಗಳಲ್ಲಿ ಸ್ವತಂತ್ರ ನಿರ್ಧಾರ ತಳೆಯುವುದು ಒಳ್ಳೆಯದು. ಅಂತೆಯೇ ಕುಟುಂಬ ಸದಸ್ಯರ ಸಲಹೆಗಳು ಅಷ್ಟೇ ಮಹತ್ವಪೂರ್ಣವಾಗಿರುತ್ತವೆ.

ಹಣಕಾಸಿನ ವಿಷಯದಲ್ಲಿ ಬಿಗಿ ಹಿಡಿತ ಸಾಧಿಸಿರುವ ನೀವು ಕೆಲವೊಮ್ಮೆ ಧಾರಾಳತನವನ್ನೂ ತೋರಿಸಬೇಕಾಗುತ್ತದೆ. ಇದರಿಂದ ಸಾಮಾಜಕವಾಗಿ ನೀವು ಗೌರವಿಸಲ್ಪಡುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ಸಂಗಾತಿ ಬೆಂಬಲವಿದೆ.

 

ನಿಮ್ಮ ಅದೃಷ್ಟ ನಿಮ್ಮ ಬಾಗಿಲಿಗೆ ಬರುವಾಗ ಅದನ್ನು ಹೊರತಳ್ಳುವುದು ತರವಲ್ಲ. ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವುದು. ಕುಟುಂಬ ಸದಸ್ಯರ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ.

 

ಸಂಕಲ್ಪಿತ ಯೋಜನೆಗಳಿಗೆ ಕೊಂಚ ಅಡೆ, ತಡೆ ಕಂಡುಬರುವುದು. ಆದರೆ ಈ ಹಿಂದೆ ಹಮ್ಮಿಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ನಡೆದುಕೊಂಡು ಹೋಗುವವು. ಸಂಗಾತಿಯ ಬೇಕು ಬೇಡಗಳನ್ನು ವಿಚಾರಿಸಿಕೊಳ್ಳಿ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top