fbpx
ಸಮಾಚಾರ

ಎಂಎಸ್ ಧೋನಿಯ ಜೆರ್ಸಿ ನಂ.7 ನಿವೃತ್ತಿ; ಐಕಾನಿಕ್ ಶರ್ಟ್ ಆಯ್ಕೆ ಮಾಡದಂತೆ ಆಟಗಾರರಿಗೆ ಬಿಸಿಸಿಐ ಸೂಚನೆ

ಭಾರತ ಕ್ರಿಕೆಟ್ ತಂಡದಲ್ಲಿ ಮಾಜಿ ನಾಯಕ ಎಂಎಸ್ ಧೋನಿಗೆ ವಿಶೇಷ ಸ್ಥಾನವಿದೆ. ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಆಗಿದ್ದಲ್ಲದೆ, ನಾಯಕನಾಗಿಯೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಸೇರಿದಂತೆ 2013ರ ಚಾಂಪಿಯನ್ ಟ್ರೋಫಿಯನ್ನು ಧೋನಿ ಭಾರತ ತಂಡಕ್ಕೆ ನೀಡಿದ್ದರು. ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎಂಬ ಅಪರೂಪದ ದಾಖಲೆಯನ್ನು ಧೋನಿ ನಿರ್ಮಿಸಿದ್ದಾರೆ. ವಿಶ್ವದ ಅತ್ಯಂತ ಯಶಸ್ವಿ ನಾಯಕನಾಗಿ ಮುಂದುವರಿದಿರುವ ಮಹಿ 2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಭಾರತ ತಂಡಕ್ಕೆ ಸಾಕಷ್ಟು ಸೇವೆ ಸಲ್ಲಿಸಿರುವ ಧೋನಿ ಗೌರವಾರ್ಥ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ.

ಎಂಎಸ್ ಧೋನಿ ಅವರ ‘ಜೆರ್ಸಿ ನಂಬರ್ 7’ಗೆ ನಿವೃತ್ತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಯಾವುದೇ ಭಾರತೀಯ ಕ್ರಿಕೆಟಿಗರು ಈ ಜೆರ್ಸಿಯನ್ನು ಧರಿಸಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಿಲ್ಲ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ‘ಜೆರ್ಸಿ ನಂಬರ್ 10’ಗೆ ಬಿಸಿಸಿಐ ಈ ಹಿಂದೆ ನಿವೃತ್ತಿ ನೀಡಿದ್ದು ಗೊತ್ತೇ ಇದೆ. ಜರ್ಸಿ ಸಂಖ್ಯೆ 10 ರ ನಂತರ, ಈಗ ಜರ್ಸಿ ಸಂಖ್ಯೆ 7 ಅನ್ನು ಬಿಸಿಸಿಐ ನಿವೃತ್ತಿ ಮಾಡಿದೆ. ಭಾರತೀಯ ಕ್ರಿಕೆಟ್‌ಗೆ ಎಂಎಸ್ ಧೋನಿ ಅವರ ಸೇವೆಯನ್ನು ಗುರುತಿಸಿ ಈ ಅಪರೂಪದ ಗೌರವವನ್ನು ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂ.10 ಜೆರ್ಸಿಯನ್ನು ಆಯ್ಕೆ ಮಾಡಲು ಯಾರಿಗೂ ಅವಕಾಶವಿಲ್ಲದಂತೆ, ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಧರಿಸುವಾಗ ತಮ್ಮ ಬೆನ್ನಿನಲ್ಲಿ ನಂ.7 ಅನ್ನು ಧರಿಸುವಂತಿಲ್ಲ ಎಂದು ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ತಿಳಿಸಿದೆ ಎಂದು ಗೊತ್ತಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ನಂ.7 ಜೆರ್ಸಿ ಭಾರತೀಯ ಆಟಗಾರರ ಕಪಾಟಿನಲ್ಲಿಲ್ಲ ಎಂದು ದೃಢಪಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top