fbpx
ಸಮಾಚಾರ

‘ನಟ ಶ್ರೇಯಸ್​ ತಲ್ಪಡೆ ಹೃದಯ 10 ನಿಮಿಷ ನಿಂತು ಹೋಗಿತ್ತು’: ಶಾಕಿಂಗ್​ ವಿಚಾರ ಬಹಿರಂಗ

ಬಾಲಿವುಡ್ ನ ಜನಪ್ರಿಯ ನಟ ಶ್ರೇಯಸ್ ತಲ್ಪಾಡೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಮುಂಬೈನಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಶ್ರೇಯಸ್ ಗುರುವಾರ ಸಂಜೆ ಶೂಟಿಂಗ್ ಮುಗಿಸಿ ಮನೆಗೆ ತೆರಳಿದ ಬಳಿಕ ಹೃದಯ ನೋವಿನಿಂದ ಕುಸಿದು ಬಿದ್ದಿದ್ದರು. ಅವರ ಕುಟುಂಬಸ್ಥರು ಅವರನ್ನು ಅಂಧೇರಿಯ ಬೆಲ್ಲೆವೊ ಆಸ್ಪತ್ರೆಗೆ ಕರೆದೊಯ್ದರು. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಸದ್ಯ ಶ್ರೇಯಸ್ ಗೆ 47 ವರ್ಷ.

ಆ ಕುರಿತು​ ನಟ ಬಾಬಿ ಡಿಯೋಲ್​ ಅವರು ಹೆಚ್ಚಿನ ಮಾಹಿತಿ ನೀಡಿದ್ದಾರೆ. ‘ಶ್ರೇಯಸ್​ ತಲ್ಪಡೆ ಹೃದಯ 10 ನಿಮಿಷ ನಿಂತು ಹೋಗಿತ್ತು’ ಎಂದು ಬಾಬಿ ಡಿಯೋಲ್ (Bobby Deol)​ ಅವರು ಹೇಳಿರುವುದಾಗಿ ವರದಿ ಆಗಿದೆ. ‘‘ಅವರ ಪತ್ನಿಯ ಬಳಿ ಈಗಷ್ಟೇ ಮಾತನಾಡಿದೆ. ಅವರು ತುಂಬ ನೊಂದಿದ್ದಾರೆ. ಶ್ರೇಯಸ್​ ತಲ್ಪಡೆ ಅವರ ಹೃದಯ 10 ನಿಮಿಷ ನಿಂತು ಹೋಗಿತ್ತು. ಈಗ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ’’ ಎಂದು ಬಾಬಿ ಡಿಯೋಲ್​ ಹೇಳಿದ್ದಾರೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಅಂದಹಾಗೆ ತಲ್ಪಾಡೆ ಅವರು ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ನಟಿಸಲು ಹೆಸರುವಾಸಿಯಾಗಿದ್ದಾರೆ. ಅವರು ‘ಇಕ್ಬಾಲ್’, ಗೋಲ್ಮಾಲ್ ರಿಟರ್ನ್, ಓಂ ಶಾಂತಿ ಓಂ, ಹೌಸ್‌ಫುಲ್ – 2 ನಂತಹ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದರು. ಸದ್ಯ ‘ವೆಲ್‌ಕಂ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್, ದಿಶಾ ಪಟಾನಿ, ಸುನೀಲ್ ಶೆಟ್ಟಿ, ಪರೇಶ್ ರಾವಲ್, ರವೀನಾ ಟಂಡನ್, ಜಾಕ್ವೆಲಿನ್ ಫರ್ನಾಂಡೀಸ್, ಸಂಜಯ್ ದತ್, ರಾಜಪಾಲ್ ಯಾದವ್, ಕಿಕು ಶಾರದ, ದಲೇರ್ ಮೆಹಂದಿ, ಮಿಕಾ ಸಿಂಗ್, ರಾಹುಲ್ ದೇವ್, ಮುಖೇಶ್ ತಿವಾರಿ, ಶರೀಬ್ ಹಶ್ಮಿ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top