ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಮತ್ತು ವ್ಯೂಸ್ ಗಳನ್ನು ಗಳಿಸುವ ದೃಷ್ಟಿಯಿಂದ ಜನರು ಇಂತಹ ಕೆಲಸವನ್ನು ಸಹ ಮಾಡಲು ಮುಂದಾಗುತ್ತಾರೆ. ಇದಕ್ಕೆ ಹಲವಾರು ಉದಾಹರಣೆಗಳನ್ನು ಸಹ ನಾವು ನೋಡಿದ್ದೇವೆ. ಇದೀಗ ಕಿಡಿಗೇಡಿಗಳು ದಕ್ಷಿಣ ಭಾರತದ ಖ್ಯಾತ ನಟ ಸುಮನ್ ಅವರ ಹೆಸರನ್ನು ಬಳಿಸಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ನಟ ಸುಮನ್ ಅವರ ಮೇಲೆ ಕಿಡಿಗೇಡಿಗಳು ಕಣ್ಣಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟ ಸುಮನ್ ನಿಧನ ಎಂದು ಸುಳ್ಳು ಸುದ್ದಿ ಹಬ್ಬಿಸಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಸ್ವತಃ ಸುಮನ್ ಕಣ್ಣಿಗೆ ಬಿದ್ದು ಗರಂ ಆಗಿದ್ದಾರೆ.
ಸಾಮಾಜಿಕ ಜಾಲತಾಣವನ್ನು ಇತ್ತೀಚಿನ ದಿನಗಳಲ್ಲಿ ಜನರು ಸಕ್ರಿಯವಾಗಿ ಉಪಯೋಗಿಸಿಕೊಳ್ಳದೆ ತಮಗೆ ಬೇಕಾದ ರೀತಿ ಬಳಸುತ್ತಿದ್ದಾರೆ. ಇದರಿಂದ ಬಹಳಷ್ಟು ಜನರಿಗೆ ತೊಂದರೆ ಆಗುತ್ತಿದೆ. ಇದು ಜನಸಾಮಾನ್ಯರಿಗೆ ಮಾತ್ರವಲ್ಲದೆ ಸೆಲೆಬ್ರಿಟಿಗಳಿಗೂ ಸಹ ತೊಂದರೆ ಮಾಡುತ್ತಿದೆ ಎಂದರೆ ಇದರ ಪ್ರಯೋಜನವನ್ನು ಜನರು ತಮ್ಮ ಸ್ವಾರ್ಥಕ್ಕಾಗಿ ಯಾವ ರೀತಿ ಬಳಸುತ್ತಿದ್ದಾರೆ ಎಂಬುದನ್ನು ನಾವು ಸ್ಪಷ್ಟವಾಗಿ ಅರಿಯಬಹುದು.
ಇದೀಗ ಈ ಘಟನೆ ಕುರಿತು “ನಾನು ಆರೋಗ್ಯವಾಗಿದ್ದೀನಿ ಏನೂ ಸಮಸ್ಯೆ ಆಗಿಲ್ಲ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳುವೆ ” ನಟ ಸುಮನ್ ಸ್ಪಷ್ಟನೆ ನೀಡಿದ್ದಾರೆ.