fbpx

ದೊಡ್ಮನೆಯಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ‘ಆ ಒಂದು ವಸ್ತು’: ಬಿಗ್ ಬಾಸ್ ವಿರುದ್ಧ ಗಂಭೀರ ಆರೋಪ ಮಾಡಿದ ಸೋನು ಗೌಡ

ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ವಾರಗಳು ಕಳೆಯುತ್ತಿದ್ದು, ಮನೆಯಲ್ಲಿ ದಿನದಿಂದ ದಿನಕ್ಕೆ ಹಲವಾರು ಬೆಳವಣಿಗೆಗಳು ಆಗುತ್ತಿದೆ. ಅದರಲ್ಲೂ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಜನರಿಗೆ ಹೆಚ್ಚು ಆಕರ್ಷಿತರುಗುತ್ತಿರುವುದು ಎಂದರೆ ಅದು ಗುರೂಜಿ ಮತ್ತು ಸೋನು ಎಂದು ಹೇಳಿದರೆ ತಪ್ಪಾಗಲಾರದು. ಅದರಲ್ಲೂ ಸೋನು ಎಂದರೆ ಮನರಂಜನೆ ಎಂದು ಮನೆ ಮಂದಿ ಮಾತನಾಡಿಕೊಳ್ಳುತ್ತಿದ್ದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ನಡೆದ ಒಂದು ನಿಯಮದ ವಿರುದ್ಧ ಸೋನು ಗಂಭೀರ ಆರೋಪ ಮಾಡಿದ್ದಾರೆ.

ಬಿಗ್ ಬಾಸ್ ನಿಯಮದ ಪ್ರಕಾರ ಹೊರಗಿನಿಂದ ತಿನ್ನುವ ಪದಾರ್ಥವನ್ನು ಮನೆಯ ಒಳಗಡೆ ತರಬಾರದು. ಪ್ರತಿಯೊಬ್ಬರ ಬ್ಯಾಗ್ ಅನ್ನು ಪರಿಶೀಲಿಸಿ ನಂತರ ಒಳಗಡೆ ಬಿಡುತ್ತಾರೆ. ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಹೊರಗಿನಿಂದ ಪ್ರೋಟಿನ್ ಪೌಡರ್ ತರೋಕೆ ಅವಕಾಶ ಇದೆ ಎಂಬುದನ್ನು ಸೋನು ಗೌಡ ರಿವೀಲ್ ಮಾಡಿದ್ದಾರೆ. ಈ ಮೂಲಕ ಇವರು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಸೋನು ಬಿಗ್ ಬಾಸ್ ಕ್ಯಾಮೆರಾ ಬಳಿ ಬಂದು ‘ಅಮ್ಮ ನನಗೆ ಮನೆಯಿಂದ ಹಾರ್ಲಿಕ್ಸ್ ಪೌಡರ್ ಕಳುಹಿಸಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಅವಕಾಶ ಇಲ್ಲ ಎಂಬ ಮಾತನ್ನು ಮನೆ ಮಂದಿ ಹೇಳಿದರು. ‘ಮನೆಯಿಂದ ಯಾವ ವಸ್ತುಗಳನ್ನು ಪಡೆದುಕೊಳ್ಳುವಂತಿಲ್ಲ. ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸೋನು ‘ಹುಡುಗರಿಗೆ ಪ್ರೋಟಿನ್ ಪೌಡರ್ ಕಳಿಸ್ತಾರೆ. ಆದರೆ, ನಮಗೆ ಯಾಕೆ ಹಾರ್ಲಿಕ್ಸ್ ತರೋಕೆ ಅವಕಾಶ ಇಲ್ಲ. ಇದು ಮೋಸ’ ಎಂದು ಮನೆಯ ಅಸಲಿ ಸತ್ಯವನ್ನು ಹೊರಗಾಕುವ ಮೂಲಕ ತಮ್ಮಬೇಸರವನ್ನು ವ್ಯಕ್ತಪಡಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top