ಇಡೀ ಪ್ರಪಂಚ ಕನ್ನಡ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ನಟ ಎಂದರೆ ಅದು ರಾಕಿ ಭಾಯ್ ಯಶ್ ಎಂದು ಹೇಳಿದರೆ ತಪ್ಪಾಗಲಾರದು. ಕೆಜಿಎಫ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದು ತೋರಿಸಿದ ನಟ. ಹೀಗಾಗಿ ಪ್ರಪಂಚಾದ್ಯಂತ ಅಪಾರವಾದ ಅಭಿಮಾನ ಬಳಗವನ್ನು ಯಶ್ ಸಂಪಾದಿಸಿದ್ದಾರೆ. ಈ ನಡುವೆ ಯಶ್ ಕುರಿತು ಒಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಜಿಎಫ್ ಸಿನಿಮಾದ ಮೂಲಕ ಯಶ್ ಕೀರ್ತಿ ಬಹಳಷ್ಟು ಬೆಳೆಯಿತು. ಪಾನ್ ಇಂಡಿಯಾ ಸ್ಟಾರ್ ಎಂಬ ಹೆಗ್ಗಳಿಕೆ ಕೂಡ ಸಿಕ್ತು. ಇದಲ್ಲದೆ ಯಶ್ ಕೆಜಿಎಫ್ ಸಿನಿಮಕ್ಕಾಗಿ ಸುಮಾರು 30 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿತ್ತು. ಇವೆಲ್ಲದರ ನಡುವೆ ಯಶ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 50 ಕೋಟಿ ಕೊಟ್ಟಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.
ಸಂತೋಷ್ ತ್ರಿಪಾಠಿ ಎಂಬ ಫೇಸ್ಬುಕ್ ಬಳಕೆದಾರರು ಯಶ್ ಅವರ ಫೋಟೋವನ್ನು ಹಂಚಿಕೊಂಡು ‘ದಕ್ಷಿಣ ಸೂಪರ್ಸ್ಟಾರ್ ಹೀರೋ ಯಶ್ ರಾಮಮಂದಿರದಲ್ಲಿ ರಾಮ್ ಲಾಲಾಗೆ ಭೇಟಿ ನೀಡಿದರು. ರಾಮಮಂದಿರ ನಿರ್ಮಾಣಕ್ಕಾಗಿ ರೂ. 50 ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ ‘ ಎಂದು ತಿಳಿಸಿದರು.
ಆದರೆ ಖಾಸಗಿ ಸುದ್ದಿವಾಹಿನಿ ಈ ವಿಷ್ಯವನ್ನು ಸುಳ್ಳು ಎಂದು ಸಾಬೀತು ಪಡಿಸಿತು. ಏನೆಂದರೆ ಇದು ಅಯೋಧ್ಯಗೆ ಭೇಟಿ ನೀಡಿದ ಸಂಧರ್ಭದಲ್ಲಿ ತೆಗೆದ ಫೋಟೋ ಅಲ್ಲ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಬಿಡುಗಡೆಗೂ ಮುನ್ನ ಅವರು ತಿರುಪತಿಗೆ ಭೇಟಿ ನೀಡಿದ್ದರು. ಆ ಸಂದರ್ಭದ ಫೋಟೋವನ್ನೇ ಬಳಸಿಕೊಂಡು ಈಗ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹೀಗಾಗಿ ಇದು ನಕಲಿ ಎಂದು ಸಾಬೀತುಪಡಿಸಿದರು.