ನೀವು ಎಲ್ಲಿಗಾದರು ಪ್ರಯಾಣಿಸುವಾಗ ರೋಡ್ ಸೈಡ್ ನಲ್ಲಿರುವ ಮೈಲು ಕಲ್ಲುಗಳನ್ನು ನೋಡಿರುತ್ತೀರಿ. ಈ ಮೈಲುಕಲ್ಲುಗಳು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಬಣ್ಣದಲ್ಲಿರುತ್ತದೆ. ಈ ಮೈಲುಗಲ್ಲುಗಳು ಹಸಿರು,ಹಳದಿ,ಕಪ್ಪು ಬಣ್ಣಗಳಲ್ಲಿ ಇರುತ್ತವೆ. ಅದರೆ ನೀವು ಈವರೆಗೆ ಈ ಬೇರೆ ಬೇರೆ ಬಣ್ಣಗಳ ಮೈಲುಗಲ್ಲುಗಳ ಪ್ರತಿ ಬಣ್ಣದಲ್ಲಿ ಒಂದೊಂದು ವಿಷಯ ಅಡಗಿದೆ ಎಂದರೆ ನಂಬಲೇಬೇಕು.
ಇದರ ಬಣ್ಣಗಳ ಹಿಂದೆ ಕೆಲವು ಕಾರಣಗಳಿವೆ. ಪ್ರಯಾಣದಲ್ಲಿರುವಾಗ ನಿಮಗೆ ಇದು ಉಪಕಾರವಾಗುತ್ತದೆ. ಮೈಲಿಗಲ್ಲುಗಳು ಏಕೆ ಬೇರೆ ಬೇರೆ ಬಣ್ಣ ಗಳಿಂದ ಕೂಡಿರುತ್ತವೆ ಎಂದು ಇಲ್ಲಿ ಓದಿ ತಿಳಿದುಕೊಳ್ಳಿ.
ಬಿಳಿ ಮತ್ತು ಹಳದಿ ಬಣ್ಣದ ಕಲ್ಲು:
ಪ್ರಯಾಣದಲ್ಲಿ ಕಿಲೊಮೀಟರನ್ನು ತಿಳಿಸುವ ರಸ್ತೆ ಬದಿಯ ಮೈಲಿಗಲ್ಲುಗಲ್ಲಿನ ಬಣ್ಣ ಬಿಳಿ ಮತ್ತು ಹಳದಿ ಆಗಿದ್ದರೆ ಅದು ರಾಷ್ಟ್ರೀಯ ಹೆದ್ದಾರಿಯನ್ನು ಸೂಚಿಸುತ್ತದೆ. ಬಿಳಿ ಮತ್ತು ಹಳದಿ ಬಣ್ಣಗಳನ್ನು ಕೇವಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಬಳಸುತ್ತಾರೆ.
ಬಿಳಿ-ಹಸಿರು ಬಣ್ಣದ ಕಲ್ಲು:
ರಸ್ತೆ ಬದಿಯ ಮೈಲಿಗಲ್ಲು ಹಸಿರು ಬಿಳಿ ಬಣ್ಣದಿಂದ ಕೂಡಿದ್ದರೆ ನೀವು ರಾಜ್ಯ ಹೆದ್ದಾರಿಯಲ್ಲಿದ್ದೀರಿ ಎಂದು ಅರ್ಥ. ಬಿಳಿ ಮತ್ತು ಹಸಿರು ಬಣ್ಣದ ಕಲ್ಲುಗಳನ್ನು ಕೇವಲ ರಾಜ್ಯ ಹೆದ್ದಾರೆಯಲ್ಲಿ ಬಳಸುತ್ತಾರೆ.
ಬಿಳಿ-ನೀಲಿ-ಕಪ್ಪುಬಣ್ಣದ ಕಲ್ಲು:
ನೀವು ಗುರುತು ಪರಿಚಯವಿಲ್ಲದ ದೂರದ ಊರಿಗೆ ಹೋದಾಗ ಹೋದಾಗ ಅನೇಕ ಬಾರಿ ನೀವು ಎಲ್ಲಿದ್ದೀರಿ ನಿಮ್ಮ ವಾಹನ ಯಾವ ಕಡೆ ಹೋಗುತ್ತಿದೆ ಎಂದು ತಿಳಿಯದೆ ಪಜೀತಿಗೆ ಬಿದ್ದಾಗ ಅದೇ ರಸ್ತೆಯಲ್ಲಿ ನಿಮಗೆ ಬಿಳಿ ನೀಲಿ ಕಪ್ಪು ಬಣ್ಣದ ಮೈಲಿಗಲ್ಲು ಕಾಣಿಸಿಕೊಂಡರೆ ನೀವು ನಗರಕ್ಕೆ ಸಮೀಪದಲ್ಲಿದ್ದೀರಿ ಎಂದು ಅರ್ಥ. ಇದು ಜಿಲ್ಲಾಡಳಿತದ ಅಧೀನದಲ್ಲಿನ ರಸ್ತೆಯಾಗಿರುತ್ತದೆ.
ಕಿತ್ತಳೆ- ಬಿಳಿ ಬಣ್ಣದ ಕಲ್ಲುಗಳು:
ರಸ್ತೆ ಬದಿಯ ಮೈಲಿಗಲ್ಲು ಕಿತ್ತಳೆ ಮತ್ತು ಬಿಳಿ ಬಣ್ಣದಿಂದ ಕೂಡಿದ್ದರೆ ನೀವು ಆ ರಸ್ತೆ ಪ್ರಧಾನಿ ಗ್ರಾಮ ರಸ್ತೆ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗಿದೆ ಎಂದು ತಿಳಿದುಕೊಳ್ಳಿ. ಈ ರೀತಿಯ ಯಾವುದೇ ಮೈಲು ಕಲ್ಲು ಕಂಡರೆ ನೀವು ಹಳ್ಳಿ ಪ್ರದೇಶದ ಕಡೆ ಪ್ರಯನಿಸುತ್ತಿದ್ದೀರಿ ಎಂದು ತಿಳಿಯಬೇಕಾಗಿದೆ.