ಕೊರೋನಾ ಕಾಟದಿಂದ ನಾನಾ ನಿಯಮ, ನಿರ್ಬಂದಗಳ ನಡುವೆ ಕಳೆದ ಎರಡು ವರ್ಷ ಗಣೇಶನ ಹಬ್ಬ ನಡೆದಿತ್ತು. ಆದರೆ ಈ ಸಲ ಯಾವುದೇ ನಿಯಮಗಳು ಇಲ್ಲದೆ ಅದ್ದೂರಿಯಾಗಿ ಗಣೇಶೋತ್ಸವ ಮಾಡಲು ಭಕ್ತರು ಕಾತರರಾಗಿದ್ದಾರೆ. ಇನ್ನೇನು ದಿನದೊಪ್ಪತ್ತಿಗೆ ಪ್ರತಿ ಊರಿಗೂ ಗಣೇಶ ಆಗಮಿಸಲಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.
ಈ ಮದ್ಯೆ ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದು ಗಣೇಶನ ಹಬ್ಬದ ದಿನ ಅಂದರೆ ಆಗಸ್ಚ್ 31ರಂದು “ಗಣೇಶ ಚತುರ್ಥಿ” ದಿನದ ಪ್ರಯುಕ್ತ ಬೆಂಗಳೂರಿನಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ ಮಾಡುವಂತಿಲ್ಲ ಎಂದು ಆದೇಶ ಮಾಡಲಾಗಿದೆ. ಈ ಮೂಲಕ ಈ ಬುಧವಾರ(ಆಗಸ್ಟ್ 31) ಮಾಂಸ ಮಾರಾಟ ಮತ್ತು ಪ್ರಾಣಿವಧೆಯನ್ನು ನಿಷೇದ ಮಾಡಿದೆ.
ಈ ಬಗ್ಗೆ ಬಿಬಿಎಂಪಿಯ ಪಶುಪಾಲನೆಯ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದು, ದಿನಾಂಕ: 31-08-2022 ಬುಧವಾರದಂದು ” ಗಣೇಶ ಚತುರ್ಥಿ” ದಿನದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.