ವಿಕ್ರಾಂತ್ ರೋಣ ಚಿತ್ರದಲ್ಲಿ ‘ರರ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ್ದ ಶ್ರೀಲಂಕಾ ಸುಂದರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಸುಕೇಶ್ ಚಂದ್ರಶೇಖರ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಆಗಿರುವ ಜಾಕ್ವೆಲಿನ್‌ಗೆ ಸೆಪ್ಟೆಂಬರ್ 26ರ ಒಳಗೆ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ತಾಕೀತು ಮಾಡಿದೆ
ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ನಡೆಸಿರುವ 200 ಕೋಟಿ ರೂಪಾಯಿಗೂ ಅಧಿಕ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ 10 ಕೋಟಿ ಮೌಲ್ಯದ ಉಡುಗೊರೆ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ದಂಪತಿಯೊಬ್ಬರಿಗೆ ಮೋಸ ಮಾಡಿ ಅವರಿಗೆ 200 ಕೋಟಿ ವಂಚನೆ ಮಾಡಿದ್ದಾರೆ ಅನ್ನುವ ಆರೋಪದಲ್ಲಿ ಜೈಲು ಪಾಲಾಗಿರುವ ಸುಕೇಶ್ ಜೊತೆ ಜಾಕ್ವೆಲಿನ್ ಸಂಬಂಧ ಇಟ್ಟುಕೊಂಡಿದ್ದರು. ಈ ಕಾರಣಕ್ಕಾಗಿಯೇ ಜಾಕ್ವೆಲಿನ್ ಗೆ ದುಬಾರಿ ಗಿಫ್ಟ್ ಗಳನ್ನು ಸುಕೇಶ್ ನೀಡಿದ್ದಾನೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಹಣಕ್ಕಾಗಿಯೇ ಸುಕೇಶ್ ಸ್ನೇಹ ಬೆಳೆಸಿದ್ದು, ಇಲ್ಲದೇ ಹೋದರೆ ಈ ಪ್ರಮಾಣದ ದುಬಾರಿ ಗಿಫ್ಟ್ ಗಳನ್ನು ಕೊಡುವುದಕ್ಕೆ ಹೇಗೆ ಸಾಧ್ಯ? ಸುಕೇಶ್ ಬಗ್ಗೆ ಎಲ್ಲವೂ ತಿಳಿದಿದ್ದರೂ, ಗಿಫ್ಟ್ ಗಳನ್ನು ನಿರಾಕರಿಸದೇ ಪಡೆದಿದ್ದಾರೆ ಎಂದು ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಜಾಕ್ವೆಲಿನ್ ಬಗ್ಗೆ ಉಲ್ಲೇಖಿಸಲಾಗಿದೆ. ಇದೊಂದು ದುಡ್ಡಿಗಾಗಿ ನಡೆದಿರುವ ಸ್ನೇಹ ಎಂದು ಉಲ್ಲೇಖಿಸಲಾಗಿದೆ.