fbpx

ಸೆಪ್ಟೆಂಬರ್ 01: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಸೆಪ್ಟೆಂಬರ್ 1, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪಂಚಮೀ : Aug 31 03:23 pm – Sep 01 02:49 pm; ಷಷ್ಠೀ : Sep 01 02:49 pm – Sep 02 01:51 pm
ನಕ್ಷತ್ರ : ಸ್ವಾತಿ: Sep 01 12:12 am – Sep 02 12:12 am; ವಿಶಾಖೆ: Sep 02 12:12 am – Sep 02 11:47 pm
ಯೋಗ : ಬ್ರಹ್ಮ: Aug 31 10:47 pm – Sep 01 09:11 pm; ಇಂದ್ರ: Sep 01 09:11 pm – Sep 02 07:16 pm
ಕರಣ : ಬಾಲವ: Sep 01 03:09 am – Sep 01 02:49 pm; ಕುಲವ: Sep 01 02:49 pm – Sep 02 02:23 am; ತೈತುಲ: Sep 02 02:23 am – Sep 02 01:51 pm

Time to be Avoided
ರಾಹುಕಾಲ : 1:51 PM to 3:23 PM
ಯಮಗಂಡ : 6:12 AM to 7:43 AM
ದುರ್ಮುಹುರ್ತ : 10:17 AM to 11:06 AM, 03:11 PM to 04:00 PM
ವಿಷ : 05:42 AM to 07:16 AM
ಗುಳಿಕ : 9:15 AM to 10:47 AM

Good Time to be Used
ಅಮೃತಕಾಲ : 03:24 PM to 05:00 PM
ಅಭಿಜಿತ್ : 11:55 AM to 12:44 PM

Other Data
ಸೂರ್ಯೋದಯ : 6:12 AM
ಸುರ್ಯಾಸ್ತಮಯ : 6:27 PM

 

 

ನಿಮ್ಮಲ್ಲಿ ಅಡಗಿರುವ ಶಕ್ತಿ ಏನು ಎಂಬುದು ಸ್ವತಃ ನಿಮ್ಮ ಅರಿವಿಗೆ ಬರುವುದಿಲ್ಲ. ಪರರು ನಿಮ್ಮನ್ನು ಕೆಣಕಿದಾಗ ಮಾತ್ರ ನಿಮ್ಮ ಬುದ್ಧಿಶಕ್ತಿ ಜಾಗೃತವಾಗುವುದು. ಇದು ನೋಡುಗರನ್ನು ಆಶ್ಚರ್ಯಪಡಿಸುವುದು.

ಸಲ್ಲದ ವಿಷಯಗಳ ಬಗ್ಗೆ ಅನಗತ್ಯ ಕುತೂಹಲ ತೋರಿಸಲು ಹೋಗಿ ಫಜೀತಿ ತಂದುಕೊಳ್ಳುವಿರಿ. ಸಣ್ಣಪುಟ್ಟ ಅಡೆತಡೆಗಳ ಬಗ್ಗೆ ಗಮನ ಕೊಡದೆ ಆತ್ಮವಿಶ್ವಾಸದಿಂದ ಮುನ್ನಡಿ ಇಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ನಿಮ್ಮ ಭಾವನೆಗಳಿಗೆ ಹೆಚ್ಚಿನ ಮನ್ನಣೆ ದೊರೆಯುವುದು. ಹಮ್ಮಿಕೊಂಡ ಕಾರ್ಯಗಳಲ್ಲಿ ಜಯ ನಿಮ್ಮದಾಗುವುದು. ಆರೋಗ್ಯದ ವಿಚಾರದಲ್ಲಿ ಎಚ್ಚರ ಅಗತ್ಯ. ಮಕ್ಕಳ ಆಟಪಾಠಗಳು ಮನಸ್ಸಿಗೆ ಮುದ ನೀಡುವವು.

ನಿಮ್ಮ ಮೇಲೆ ಶತ್ರುತ್ವ ಮಾಡುತ್ತಿದ್ದವರು ತಣ್ಣಗಾಗಿ ನಿಮಗೆ ಶರಣಾಗತರಾಗುವರು. ನಿಮ್ಮ ಸ್ನೇಹಹಸ್ತಕ್ಕಾಗಿ ಕಾತರ ವ್ಯಕ್ತಪಡಿಸುವರು. ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಅತ್ಯಂತ ಭಾವುಕರಾದ ನೀವು ಕೆಲವೊಮ್ಮೆ ನಿಮ್ಮ ಮನಸ್ಸಿನ ಎಲ್ಲಾ ವಿಚಾರಗಳನ್ನು ಪರರ ಮುಂದೆ ಹೇಳಿಕೊಳ್ಳುವಿರಿ. ಇದರಿಂದ ಬೇರೊಂದು ಅರ್ಥವೇ ಪ್ರಚಾರಕ್ಕೆ ಬರುವುದು. ದುರ್ಗಾ ಜಪ ಮಾಡಿ.

 

ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಎನ್ನುವಂತೆ ಇಂದು ಎಲ್ಲವೂ ಇದ್ದು, ನಿಮಗೆ ಸಕಾಲಕ್ಕೆ ಯಾವುದೂ ದೊರೆಯುವುದಿಲ್ಲ. ಹಾಗಂತ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನಿಮ್ಮದಲ್ಲ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳು ಕಂಡುಬಂದರೂ ಅದು ಕೇವಲ ಕ್ಷ ಣಿಕ. ಪುನಃ ಪತಿ-ಪತ್ನಿಯರು ಒಮ್ಮತದಿಂದ ಈ ದಿನವನ್ನು ಕಳೆಯುವಿರಿ. ಇದಕ್ಕೆ ಮಕ್ಕಳ ಸಲಹೆಯೂ ಪೂರಕವಾಗಿರುವುದು.

 

ಸದಾ ಪರರ ಹಿತ ಬಯಸುವ ನೀವು ಇಂದು ನಿಮ್ಮ ವೈಯಕ್ತಿಕ ಕಾರ್ಯಗಳಿಗೆ ಪರರನ್ನು ಅವಲಂಬಿಸಬೇಕಾಗುವುದು. ಕುಟುಂಬ ಸದಸ್ಯರನ್ನು ಪ್ರೀತಿ, ವಿಶ್ವಾಸದಿಂದ ಗೆದ್ದರೆ ಜಗತ್ತನ್ನೇ ಗೆದ್ದ ಅನುಭವವಾಗುವುದು.

 

ಹಳೆಯ ತಪ್ಪುಗಳನ್ನು ಪುನರಾವರ್ತಿಸದೆ ಮುಂದಡಿ ಇಡಿ. ನಿಮ್ಮ ಬಂಧುಗಳು ಸ್ನೇಹಿತರು ನಿಮ್ಮ ಕೆಲಸ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುವರು. ಹಮ್ಮಿಕೊಂಡ ಕಾರ್ಯಗಳಿಗೆ ವಿವಿಧ ಮೂಲಗಳಿಂದ ಹಣ ಹರಿದು ಬರುವುದು.

ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಲು ಈದಿನ ಕಟಿಬದ್ಧರಾಗಿರುವಿರಿ. ಇದಕ್ಕೆ ಪೂರಕವಾಗಿ ಭಗವಂತನ ಆಶೀರ್ವಾದವು ನಿಮ್ಮ ಮೇಲಿರುವುದರಿಂದ ಒಳಿತಾಗುವುದು. ಆರೋಗ್ಯ ಸ್ಥಿತಿ ಉತ್ತಮವಾಗಿರುವುದು.

 

ಕೌಟುಂಬಿಕ ವಿಚಾರಗಳು ಇಂದು ತಲೆಬಿಸಿಯನ್ನು ಮಾಡುವುದು. ಆಸ್ತಿ ಅಥವಾ ಹಣಕಾಸು ವಿಚಾರವಾಗಿ ಮನೆಮಂದಿಯೊಡನೆ ಚರ್ಚೆ ನಡೆಯುವುದು. ಹಿರಿಯರ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿಯವುದು.

 

ಈದಿನ ಒಳ್ಳೆಯ ದಿನ. ಯಾವ ಕೆಲಸವನ್ನಾದರೂ ನಿಭಾಯಿಸುವ ಮಾನಸಿಕ ಶಕ್ತಿ ನಿಮ್ಮದಾಗಿರುತ್ತದೆ. ಅವಕಾಶಗಳು ನಿಮ್ಮನ್ನು ಅರಸಿ ಬರುವವು. ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಅದು ಆರ್ಥಿಕ ಸದೃಢತೆಗೆ ಸಹಕಾರಿ ಆಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top